ಬಳ್ಳಾರಿ:ಶಿಕ್ಷಣ ಸಂಯೋಜಕರಾಗಿ ಕೆಂಚೆ ಎಲ್ಲಪ್ಪ ಮತ್ತು ಟಿ ಸಿ ಪಂಪಾಪತಿ ಕರ್ತವ್ಯಕ್ಕೆ ಹಾಜರು

ಬಳ್ಳಾರಿ, ಆ.11:  ಪೂರ್ವ ವಲಯದ ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕರಾಗಿ ಕೆಂಚೆ ಎಲ್ಲಪ್ಪ ಮತ್ತು ಟಿ ಸಿ ಪಂಪಾಪತಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.               ಪೂರ್ವ ವಲಯದ ಬಿಇಓ ನಯೀಮೂರ್ ರೆಹಮಾನ್ ಅವರಿಗೆ ಶುಕ್ರವಾರ ಸರಕಾರದ ಆದೇಶ ಪತ್ರ ನೀಡಿದರು.    ಈ ಸಂದರ್ಭದಲ್ಲಿ ಪ್ರಾಥಾಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಕೊರ್ಲಗುಂದಿ, ಪದಾಧಿಕಾರಿಗಳು, ಅಧ್ಯಾಪಕ ಬಸವ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.                                                 ಕೆಂಚೆ ಎಲ್ಲಪ್ಪ  ಅವರು ಈವರೆಗೆ ಬೆಣಕಲ್ಲು ಹೊಸ ಬಡಾವಣೆ ಶಾಲೆಯ ಹಿರಿಯ ಮುಖ್ಯ ಗುರುಗಳಾಗಿ,   ಟಿ ಸಿ ಪಂಪಾಪತಿ ಹಿರಿಯ ಮುಖ್ಯ ಗುರುಗಳಾಗಿ ಹಂದಿಹಾಳ್ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

Leave a Reply

Your email address will not be published. Required fields are marked *