ಬಳ್ಳಾರಿಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ‌ಹಿರಿಯ ನಾಗರಿಕರ‌ ಪಾತ್ರ ಮಹತ್ವದ್ದು -ಡಿಸಿ‌ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಅ.1: ಭಾರತದ ಪ್ರಜಾಪ್ರಭುತ್ವದ ಹಬ್ಬ ಎನ್ನಲಾಗುವ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡುತ್ತಿರುವ ಹಿರಿಯ ನಾಗರಿಕರ ಕೊಡುಗೆ ಅಪಾರ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.  ಭಾರತ ಚುನಾವಣಾ ಆಯೋಗ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ನಗರದ ಡಾ.ರಾಜಕುಮಾರ ರಸ್ತೆಯ ನೂತನ ಜಿಲ್ಲಾಡಳಿತ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರು ಭಾಗವಹಿಸಿ ಹಿರಿಯ ನಾಗರಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರಾದ ತಾವು ಮುಂಬರುವ ಚುನಾವಣೆಗಳಲ್ಲಿಯೂ ಸಹ ಇದೇ ರೀತಿ ಉತ್ಸಾಹದೊಂದಿಗೆ ಭಾಗವಹಿಸಬೇಕು. ಭಾರತೀಯ ಮತದಾನ ಪ್ರಕ್ರಿಯೆಯಲ್ಲಿ ಸಕರಾತ್ಮಕ ಕೊಡುಗೆ ನೀಡುವುದರ ಮೂಲಕ ಯುವ ಮತದಾರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.            ತಾಲೂಕಿನ ಹಿರಿಯ ನಾಗರಿಕರಾದ ಮಿಂಚೇರಿ ಗ್ರಾಮದ ಮದರ ಬೀ(95), ಕೊಳಗಲ್ ಗ್ರಾಮದ ತಿಮ್ಮಪ್ಪ(100), ಕೋಟೆ ಪ್ರದೇಶದ ಅಮಿರ್‍ಭಾಷ(92), ನಗರ ನಿವಾಸಿಗಳಾದ ಅಂಜಿನಮ್ಮ(80), ರಾಮಕೃಷ್ಣ (78) ಅವರನ್ನು ಸನ್ಮಾನಿಸಲಾಯಿತು.

ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝಬೇರಾ ಅವರು, ಹಿರಿಯ ನಾಗರಿಕರೊಂದಿಗೆ ಕುಶೋಲಪಹರಿ ನಡೆಸಿ ಅವರ ಆಗಿನ ಊಟದ ಶೈಲಿ, ಕೆಲಸ ಕಾರ್ಯ, ಪ್ರಸ್ತುತ ಕುಟುಂಬದ ಹಿನ್ನಲೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ತಹಸೀಲ್ದಾರ್ ಗುರುರಾಜ್. ಸಿ,  ಶಿರಸ್ತೆದಾರ ಸಾದಿಕ್ ಭಾಷ, ಕಂದಾಯ ನಿರೀಕ್ಷಕ ರಾಮಕೃಷ್ಣ, ಚುನಾವಣೆ ವಿಷಯ ನಿರ್ವಾಹಕ ಲೋಕಶ್ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳಾದ ನರೀನ್, ಸುರೇಶ್, ಉಮೇಶ್, ಕಲ್ಲಶೆಟ್ಟಿ, ಸರಸ್ವತಿ ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *