ಬಳ್ಳ್ಳಾರಿ ಬಂದ್: ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್: ಎಸ್ಪಿ ಸೈದುಲು ಅಡಾವತ್

ಬಳ್ಳಾರಿ: ಜಿಲ್ಲೆಯನ್ನು ವಿಭಜಿಸಿ ವಿಜಯನಗರ ನೂತನ ಜಿಲ್ಲೆ ರಚಿಸುವುದನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ  ವಿವಿಧ ಕನ್ನಡ, ರೈತಪರ ಸಂಘಟನೆಗಳು,  ರಾಜಕೀಯ ಪಕ್ಷ ಗಳು ಮತ್ತು ವಿವಿಧ ಸಾಮಾಜಿಕ ಹೋರಾಟ ಸಂಘಟನೆಗಳ ಮುಖಂಡರು ನ.26ರಂದು ಬಳ್ಳಾರಿ ಬಂದ್ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನಚ್ಚೆರಿಕಾ ಕ್ರಮಗಳು ಮತ್ತು ಬಂದೋಬಸ್ತ್ ಕೈಗೊಂಡಿದೆ ಎಂದು ಜಿಲ್ಲಾ ಎಸ್ಪಿ  ಸೈದುಲು ಅಡಾವತ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಸ್ಪಿ ಸೈದುಲು ಅಡಾವತ್ ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಲ್ಲಿ ಅಗತ್ಯವಾದ ಪೊಲೀಸ್ ಅಧಿಕಾರಿ/ಸಿಬ್ಬಂದಿಯನ್ನು ಆಯಾಕಟ್ಟಿನ ಸ್ಥಳಗಳಲ್ಲಿ  ನಿಯೋಜಿಸಲಾಗಿದೆ.

3 ಜನ ಡಿಎಸ್‍ಪಿ, 10 ಸಿಪಿಐ/ಪಿಐ,18 ಪಿಎಸ್‍ಐ, 40 ಎ.ಎಸ್.ಐ., 200 ಹೆಚ್.ಸಿ/ಪಿ.ಸಿ., 3 ಡಿಎಆರ್ ತುಕಡಿ ನೇಮಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯನ್ನು ಶಾಂತರೀತಿಯಲ್ಲಿ ಕೈಗೊಳ್ಳುವುದು, ಬಂದ್ ಮಾಡುವಂತೆ ಯಾವುದೇ ವ್ಯಕ್ತಿಯಾಗಲೀ ಯಾವುದೇ ಸಂಘಟನೆಯಾಗಲೀ ಯಾರನ್ನೂ ಒತ್ತಾಯಿಸುವಂತಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಮತ್ತು ಸರ್ಕಾರದ ಆಸ್ತಿಗಳಿಗೆ ಧಕ್ಕೆಯಾಗದಂತೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಮುಷ್ಕರ ಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ ವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು.  ಆಗತ್ಯವಿದ್ದಲ್ಲಿ ತಮ್ಮ ರಕ್ಷಣೆ ಹಾಗೂ ಸಹಾಯಕ್ಕಾಗಿ ಸ್ಥಳೀಯ ಪೊಲೀಸರನ್ನು ಮತ್ತು ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ: 08392-258100 I 256101/ 256103/ 257100/ 257600 & 9480803000 ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *