ಅನುದಿನ ಕವನ-೧೦೫೧, ಹಿರಿಯ ಕವಿ:ಎಚ್. ಡುಂಡಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ವಿಶ್ವ ಕಪ್ 23

ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯದ ಸಂದರ್ಭದಲ್ಲಿ ನಮ್ಮ ಇಂಡಿಯಾ ತಂಡಕ್ಕೆ ಸ್ಫೂರ್ತಿ ತುಂಬಲು ಹಿರಿಯ ಕವಿ  ಎಚ್. ಡುಂಡಿರಾಜ್ ಅವರು ಈ ಕವಿತೆ ರಚಿಸಿ ಶುಭ ಕೋರಿದ್ದಾರೆ. 🍀👇🌹🍀💐

🏏ವಿಶ್ವಕಪ್ 23🏏

ಶುಭಾರಂಭಕ್ಕೆ ಶುಭಮನ್ ನಂಬಿಕೆಯ ಬ್ಯಾಟರು
ಯಾರಿಗಿದೆ ಕೊಹ್ಲಿಯನ್ನು‌ ಕೆಣಕುವ ಮೀಟರು?

ನಂತರ ಅಯ್ಯರ್, ರಾಹುಲ್ ಪಾಳಿ
ಎದುರಾಳಿಗಳ ಮೇಲೆ ಭರ್ಜರಿ ದಾಳಿ

ಸೂರ್ಯನಿಗೆ ಇನ್ನೂ ಸಿಕ್ಕಿಲ್ಲ ಅವಕಾಶ
ಸಿಕ್ಕರವ ಚೆಂಡಿಗೆ ತೋರಿಸುವ ಆಕಾಶ!

ಬೌಲಿಂಗಿನಲ್ಲಿ ಬಿಡಿ ಸಮನಾರು ನಮಗೆ?
ಬೂಮ್ರಾ, ಸಿರಾಜ್, ಮಹಮದ್ ಶಮಿಗೆ?

ಸವ್ಯಸಾಚಿ ಜಡೇಜ, ಕುಲದೀಪ್ ಯಾದವ
ಚೆಂಡೆಸವ ರೀತಿ ಊಹಿಸಲು ಸಾಧ್ಯವಾ?

ಚೆನ್ನಾಗಿದೆ ಕೀಪಿಂಗ್‌, ಫೀಲ್ಡಿಂಗ್ ಕೂಡಾ
ತಂಡದ ಬೆನ್ನೆಲುಬು ಕನ್ನಡಿಗ ದ್ರಾವಿಡ

ನಾಯಕನ ಆಟ ಆಡುವನು ರೋಹಿತ
ಈ ಬಾರಿ ಖಂಡಿತ ಗೆಲ್ಲುವುದು ಭಾರತ


-ಎಚ್. ಡುಂಡಿರಾಜ್, ಬೆಂಗಳೂರು

Leave a Reply

Your email address will not be published. Required fields are marked *