Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಡಿ.3ರಂದು ಹೊಸಪೇಟೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹಾದೇವಪ್ಪ - Karnataka Kahale

ಡಿ.3ರಂದು ಹೊಸಪೇಟೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹಾದೇವಪ್ಪ

ಹೊಸಪೇಟೆ(ವಿಜಯನಗರ), ನ.29: ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹಾದೇವಪ್ಪ ಅವರು ಡಿ. 3 ರಂದು ಹೊಸಪೇಟೆಗೆ ಆಗಮಿಸುವರು.
ವಿಜಯನಗರ ಜಿಲ್ಲಾ ಛಲವಾದಿ‌ ಮಹಾಸಭಾ ಆಯೋಜಿಸಿರುವ ಸಮಾಜ ಜಾಗೃತಿ ಹಾಗೂ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹಿರಿಯ ಸಚಿವ ಹೆಚ್.ಸಿ.‌ಮಹಾದೇವಪ್ಪ ಅವರು ಪಾಲ್ಗೊಳ್ಳುವರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್, ವಿಜಯನಗರ ಶಾಸಕ ಹೆಚ್. ಆರ್. ಗವಿಯಪ್ಪ, ರಾಜ್ಯದ  ಛಲವಾದಿ ಸಮಾಜದ ಶಾಸಕರು, ಜಿಲ್ಲೆಯ ಎಲ್ಲಾ ಶಾಸಕರು, ಸಮಾಜದ ಉನ್ನತ ಅಧಿಕಾರಿಗಳು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ಹಿರಿಯ ಸಾಹಿತಿಗಳು, ಪತ್ರಕರ್ತರು, ನ್ಯಾಯವಾದಿಗಳು, ಪ್ರಾಧ್ಯಾಪಕರು ಭಾಗವಹಿಸುವರು ಎಂದು ಕಾರ್ಯಕ್ರಮದ ಆಯೋಜಕರೂ ಆಗಿರುವ ವಿಜಯನಗರ ಸಿಎಂಎಸ್ ಅಧ್ಯಕ್ಷ ಸೋಮಶೇಖರ ಬಣ್ಣದ ಮನೆ ತಿಳಿಸಿದ್ದಾರೆ.