ಬಳ್ಳಾರಿ ಜಿಲ್ಲಾ ಸಿಎಂಎಸ್ ಸಭೆ: ಕುಂದುಕೊರತೆಗಳ ಬಗ್ಗೆ ಚರ್ಚೆ -ಜಿಲ್ಲಾಧ್ಯಕ್ಷ ಸಿ. ಶಿವಕುಮಾರ್

ಬಳ್ಳಾರಿ, ಅ.28:   ಛಲವಾಧಿ ಮಹಾಸಭಾ (ಸಿಎಂಎಸ್) ರಾಜ್ಯಧ್ಯಕ್ಷರಾದ ವಾಣಿ ಕೆ.ಶಿವರಾಮ್ ಅವರ ಆದೇಶದ ಮೇರೆಗೆ ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ  ಜಿಲ್ಲಾ ಸರ್ವ ಸದಸ್ಯರ ಸಭೆ ನಡೆಯಿತು.                          ನೂತನ ಜಿಲ್ಲಾಧ್ಯಕ್ಷ ಸಿ.ಶಿವಕುಮಾರ್ ಅವರು  ಸಭೆಯ ಅಧ್ಯಕ್ಷತೆ ವಹಿಸಿದ್ದರು.                                        ಸಭೆಯಲ್ಲಿ  ಛಲವಾದಿ ಸಮಾಜದ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು.                                                ಇದೇ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.                    ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಛಲವಾಧಿ ಲೋಕೇಶ್, ಜಿಲ್ಲಾ ಉಪಾಧ್ಯಕ್ಷರಾಗಿ ಗೋನಾಳ್ ಮಾನಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ  ವೆಂಕಟೇಶ್ ಆಯ್ಕೆಯಾದರು.

ಸನ್ಮಾನ: ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಸಿ. ಶಿವಕುಮಾರ್ ಅವರನ್ನು  ಪದಾಧಿಕಾರಿಗಳು ಸನ್ಮಾನಿಸಿದರು.                                ಸಭೆಯಲ್ಲಿ ಜಿಲ್ಲಾ ಮುಖಂಡರಾದ ಸಿ. ಶ್ರೀನಿವಾಸ್, ತೊಲಮಾಮಿಡಿ ರಾಜು, ಸಂಗನಕಲ್ಲು ತಿಪ್ಪೇಸ್ವಾಮಿ, ಗೋನಾಳ್ ಮಲ್ಲಿಕಾರ್ಜುನ, ಬಸರಕೋಡು ವಂಡ್ರಪ್ಪ, ಕುಡಿತೀನಿ ಆನಂದ್, ಬಳ್ಳಾರಿ ನಗರದ ಜಯರಾಮ್, ಸಿ. ಹನುಮೇಶ ಕಟ್ಟಿಮನೆ, ಟಿ. ಶೇಷಪ್ಪ, , ವಕೀಲರಾದ ಈಶ್ವರ್, ಡಿ.ರಾಮಕೃಷ್ಣ, ಮೋಕಾ ನಾಗೇಂದ್ರ, ಕುಡಿತೀನಿ ದಿವಾಕರ್, ಬಸಪ್ಪ, ಗೋನಾಳ್ ಗಾದಿಲಿಂಗ, ಶ್ರೀಮತಿ ಲಕ್ಷ್ಮಿ, ಶ್ರೀನಿವಾಸಲು, ಮೌನೇಶ್, ವೀರೇಶ್, ವಿನೋದ್, ಹುಲಿಗೆಶ್, ಪರಮೇಶಿ, ಸಣ್ಣ ಈರಣ್ಣ, ರಾಜು, ಸಿ.ಮೌನೇಶ್, ಸಿ. ವೀರೇಶ್, ದಿನೇಶ್, ನಾಗರಾಜ, ನಾಗೇಂದ್ರ, ಶೇಖರ್, ಶೇಕಣ್ಣ, ಅಂಜಿ, ರಂಗಸ್ವಾಮಿ, ಡಿ.ಮೌನೇಶ್, ಅರ್. ಮೌನೇಶ ಗೌತಮ್ ನಗರದ ಜಿ.ಯಲ್ಲಪ್ಪ, ವೀರೇಶ್, ಶಿವ ಹಾಗು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *