Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಶಿಕ್ಷಕರನ್ನು ಪುನಃಶ್ಚೇತನ ಗೊಳಿಸಲು ತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕ -ಅಲ್ಲಂ ಗುರು ಬಸವರಾಜ - Karnataka Kahale

ಶಿಕ್ಷಕರನ್ನು ಪುನಃಶ್ಚೇತನ ಗೊಳಿಸಲು ತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕ -ಅಲ್ಲಂ ಗುರು ಬಸವರಾಜ

ಬಳ್ಳಾರಿ, ಅ. 27: ನಿರುಪಯುಕ್ತ ವಸ್ತುಗಳನ್ನು ಮರು ಬಳಕೆ ಮಾಡಿದಂತೆ ಶಿಕ್ಷಕರನ್ನು ಪುನಃಶ್ಚೇತನ ಗೊಳಿಸುವಲ್ಲಿ ಈ ಕಾರ್ಯಾಗಾರಗಳು ಅತ್ಯುತ್ತಮವಾಗಿವೆ ಎಂದು‌ ವೀರಶೈವ ವಿದ್ಯಾವರ್ಧಕ ಸಂಘದ ಧ್ಯಕ್ಷ ಅಲ್ಲಂ ಗುರು ಬಸವರಾಜ ಅವರು ಹೇಳಿದರು.                                       ವೀರಶೈವ ವಿದ್ಯಾವರ್ಧಕ ಸಂಘ ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ಎಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಗೆ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.                                ತಾವುಗಳು ಈಗಾಗಲೇ ಬುದ್ಧಿವಂತರಾಗಿದ್ದೀರಿ ಆದರೆ ಕಾಲಕ್ಕೆ ತಕ್ಕಂತೆ ನಾವೆಲ್ಲರೂ ಅಪ್ಡೇಟ್ ಆಗುವುದು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ನಮ್ಮ ಸಂಘವು ಹಮ್ಮಿಕೊಂಡಿರುವ ಈ ತರಬೇತಿ ಕಾರ್ಯಗಾರವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹಾರೈಸಿದರು.  ಪ್ರಾಸ್ತಾವಿಕವಾಗಿ ಮಾತನಾಡಿದ ವೀರಶೈವ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಬೈಲುವದ್ದೀಗೇರಿ ಎರ್ರಿಸ್ವಾಮಿ ಅವರು  ಹೊಸ ಹೊಸ ಬೋಧನಾ ಪದ್ಧತಿಗಳು ಹಾಗೂ ಬೋಧನಾ ಕೌಶಲ್ಯಗಳ ಜ್ಞಾನವನ್ನು ಪಡೆದು ವಿದ್ಯಾರ್ಥಿಗಳ ಸಾಧನೆಯನ್ನು ಹೆಚ್ಚಿಸಬೇಕೆಂದು ತಿಳಿಸಿದರು. ಕಾರ್ಯಗಾರದಲ್ಲಿ ಬೆಂಗಳೂರಿನ ಸಂಪನ್ಮೂಲ ವ್ಯಕ್ತಿಗಳಾದ  ಸುಶ್ಮಿತಾ ವಿನೋದ್ ಮತ್ತು  ಸುಮ ಅನಂತ್ ಅವರು ಮಾತಬಾಡಿ,  ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದದ್ದು, ಸತತ ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದ ಮಾತ್ರ ವಿದ್ಯಾರ್ಥಿಗಳ ಸಾಧನೆಯನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.   ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶರಣಬಸವನಗೌಡ ಅವರು ಮಾತನಾಡಿ, ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತಾವು ಪಡೆದುಕೊಳ್ಳುವ ಜ್ಞಾನವನ್ನು ಮಕ್ಕಳಿಗೆ ನೀಡಿ ಗುಣಾತ್ಮಕ ಶಿಕ್ಷಣವನ್ನು ಹೆಚ್ಚಿಸಬೇಕೆಂದು ಹೇಳಿದರು.‌ ಕಾರ್ಯಗಾರದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಸಹ ಕಾಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ವೀರಶೈವ ವಿದ್ಯಾವರ್ಧಕ ಸಂಘದ ವಿವಿಧ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಭಾಗವಹಿದ್ದರು. ಶಿಕ್ಷಕಿ ಅನ್ನಪೂರ್ಣ ಅವರು ಪ್ರಾರ್ಥನೆ ಸಲ್ಲಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ವಿಕ್ರಂ ಪಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರಾದ ಡಾ‌. ಸತೀಶ್ ಎ. ಹಿರೇಮಠ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಗಾರ ಸೋಮವಾ ಸಂಜೆ ಸಮಾರೋಪಗೊಳ್ಳಲಿದೆ.