ಅನುದಿನ‌ ಕವನ-೧೪೮೭, ಹಿರಿಯ ಕವಿ: ಎಂ ಎಸ್ ರುದ್ರೇಶ್ವರ ಸ್ವಾಮಿ, ಬೆಂಗಳೂರು

…where is he, her lover?  is he lost

ನಕ್ಷತ್ರಗಳೇ,
ಬೇಹುಗಾರಿಕೆ ಮಾಡದಿರಿ
ಒಂಟಿ ಹೆಣ್ಣು ನಾನು.

ಅವನಿಲ್ಲದ ರಾತ್ರಿಗಳನ್ನು
ನಿಮ್ಮತ್ತ ನೋಡುತ್ತ ಕಳೆಯುತ್ತೇನೆ,
ಕೂಡುತ್ತ, ಕಳೆಯುತ್ತ,
ಎಣಿಸುತ್ತೇನೆ. ಲೆಕ್ಕ ತಪ್ಪುತ್ತದೆ.

ಗೊತ್ತು  ನನಗೆ,
ನನ್ನ ಹಾಗೆಯೇ ನಿಮ್ಮದೂ
ಒಂಟಿ ಬದುಕು.

ಅವನು ನನಗಾಗಿ
ಕವಿತೆ ಬರೆಯುತ್ತಿದ್ದಾಗ
ನೀವು ಮತ್ಸರದಿಂದ ನೋಡಿದಿರಿ;

ಆಗ ನಾನು,
ನಿಮ್ಮತ್ತ ತಿರುಗಿಯೂ ನೋಡಲಿಲ್ಲ,
ಅವನ ಕಣ್ಣಲ್ಲಿ ನನ್ನನ್ನು-
ಮಾತ್ರ ಹುಡುಕುತ್ತಿದ್ದೆ.

ಒಂಟಿ ನಕ್ಷತ್ರಗಳೇ,
ನಿಮ್ಮನ್ನು ಕಂಡರೆ ಕನಿಕರ ನನಗೆ
ಈಗವನ ಕಣ್ಣು ನೆಟ್ಟಿವೆ
ನಿಮ್ಮ ಮೇಲೆ.

ಅವನೀಗ ನನ್ನ ಕುರಿತು
ಕವಿತೆ ಬರೆಯುವುದನ್ನು ನಿಲ್ಲಿಸಿದ್ದಾನೆ.
ಬದುಕು ಖಾಲಿ,
ಖಾಲಿ ಕೊಳಲು…


-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
—–

Leave a Reply

Your email address will not be published. Required fields are marked *