ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದು ಬದಲಾಯಿಸಿದಂತೆ ನಮ್ಮ ವಿಜಯನಗರವನ್ನು ಹೊಸಪೇಟೆ ಜಿಲ್ಲೆ ಎಂದು ಬದಲಾಯಿಸಬೇಕು.
ವಿಜಯನಗರ ಸಾಮ್ರಾಜ್ಯದ ನೆನಪಿಗಾಗಿ ವಿಜಯನಗರ ಜಿಲ್ಲೆ ಎಂಬ ಹೆಸರನ್ನು ನಾಮಕರಣ ಮಾಡಿದ್ದೇನೋ ಚೆನ್ನಾಗಿದೆ. ಆದರೆ ವಿಜಯನಗರದ ಹೆಸರಿನಲ್ಲಿ ಹೊಸಪೇಟೆ ಎಂಬ ಹೆಸರು ಹಾಗೂ ಹೊಸಪೇಟೆ ನಗರ ರಾಜ್ಯದ ಮೂಲೆ ಮೂಲೆಗೆ ತಲುಪುವುದೇ ಇಲ್ಲ.

ನಮ್ಮ ರಾಜ್ಯದ ಪ್ರತಿಯೊಂದು ಊರಿನಲ್ಲೂ ವಿಜಯನಗರ ಹೆಸರಿನ ಕಾಲೋನಿಗಳು ಹಾಗೂ ನಗರಗಳು ಇವೆ.
ಉದಾಹರಣೆಗೆ ಹೇಳುವುದಾದರೆ ನಾನು ಈಗ ಮೈಸೂರಿನಲ್ಲಿ ವಾಸವಾಗಿದ್ದೇನೆ. ಮೈಸೂರಿನಲ್ಲಿ ವಿಜಯನಗರ ಒಂದನೇ ಹಂತ, ಎರಡನೇ ಹಂತ ಎಂಬ ಹೆಸರಿನ ಪ್ರದೇಶವಿದೆ… ಬೆಂಗಳೂರಿನಲ್ಲೂ ವಿಜಯನಗರ ಬಡಾವಣೆ ಇದೆ. ನಮ್ಮ ಜಿಲ್ಲೆ ವಿಜಯನಗರ ಅಂತ ಹೇಳಿದ್ರೆ ಬಹಳಷ್ಟು ಜನರಿಗೆ ತಿಳಿಯುವುದೇ ಇಲ್ಲ, ಓ ವಿಜಯನಗರ ಒಂದನೇ ಹಂತ, ಎರಡನೇ ಹಂತ ನಾ ಅಂತ ಕೇಳ್ತಾರೆ.
ವಿಜಯನಗರ ಜಿಲ್ಲೆಯಲ್ಲಿ ವಾಸಿಸುವವರಿಗೆ ಏನೂ ವ್ಯತ್ಯಾಸವಾಗುವುದಿಲ್ಲ.
ಬೆಂಗಳೂರು, ಮೈಸೂರು ಭಾಗದಲ್ಲಿ ಹೊಸಪೇಟೆ ಅಂತ ಹೇಳಿದರೂ ಕೂಡಾ ಓ… ಹೊಸಕೋಟೆ ನಾ ಅಂತ ಅರ್ಥ ಮಾಡ್ಕೊಳ್ತಾರೆ ಅಂತದ್ರಲ್ಲಿ ವಿಜಯನಗರ ಎಂದರೆ ಇನ್ನೂ ತಿಳಿಯುವುದಿಲ್ಲ.
ಹೊಸಪೇಟೆ ಜಿಲ್ಲೆ ಎಂದು ಬದಲಾಯಿಸಿದರೆ ಭವಿಷ್ಯದಲ್ಲಿ ಹೊಸಪೇಟೆ ನಗರದ ಹೆಸರು ಇನ್ನೂ ಮುಂಚೂಣಿಯಲ್ಲಿ ಬರುತ್ತದೆ.

-ವಿಠಲ್ ರಾವ್, ಎಸ್.ಕೆ, ಹೊಸಪೇಟೆ (ಕ್ಯಾಂಪ್: ಮೈಸೂರು)
