ಬಳ್ಳಾರಿ, ಮೇ 13 : ನಿವೃತ್ತ ನ್ಯಾಯಾಧೀಶರಾದ ಹೆಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗದ ಅಡಿಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಹಲವು ತಾಂತ್ರಿಕ ತೊಡಕುಗಳು ಕಂಡುಬರುತ್ತಿವೆ, ಅವುಗಳನ್ನು ಶೀಘ್ರವೇ ನಿವಾರಿಸಿ ಒಳಮೀಸಲಾತಿಯ ಸಮೀಕ್ಷೆಯನ್ನು ಪಾರದರ್ಶಕವಾಗಿ ಕೈಗೊಂಡು ಅರ್ಹರಿಗೆ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಬಳ್ಳಾರಿ ಜಿಲ್ಲಾ ಬೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷ ವಿ ರಾಮಾಂಜನೇಯ ಸಮೀಕ್ಷಾ ತಂಡಕ್ಕೆ ಮನವಿ ಮಾಡಿದರು.
ಅವರು ಮಂಗಳವಾರ ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದರು. ಸಮೀಕ್ಷೆಯ ಕಾರ್ಯಕ್ಕೆ ನಿಯೋಜಿತಾರಾಗಿರುವ ಶಿಕ್ಷಕ ಸಿಬ್ಬಂದಿಗಳಿಗೆ ಕೇವಲ ಮೂರು ಗಂಟೆಗಳ ಕಾಲ ತರಬೇತಿ ನೀಡಲಾಗಿದೆ. ಹಾಗಾಗಿ ಪರಿಣಾಮಕಾರಿಯಾಗಿ ಸಮೀಕ್ಷೆ ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ, ಸಮೀಕ್ಷಾ ನಡೆಸುತ್ತಿರುವ ಸಿಬ್ಬಂದಿಗಳಿಗೆ ಮೊತ್ತೊಮ್ಮೆ ಒಂದುದಿನದ ಪೂರ್ಣಾವಧಿ ತರಬೇತಿ ಅಗತ್ಯತೆ ಇರುತ್ತದೆ ಸಮೀಕ್ಷೆಯಲ್ಲಿ ಬಳಸಲಾಗುತ್ತಿರುವ ಪ್ರಶ್ನಾವಳಿಗಳು ಕ್ಲಿಷ್ಟವಾಗಿರುವುದರಿಂದ ಈ ತಳಮಟ್ಟದ ಸಮುದಾಯಗಳ ಜನರಾದ ಪರಿಶಿಷ್ಟ ಜಾತಿ ಸಮುದಾಯಗಳ ಜನರ ಶೈಕ್ಷಣಿಕ ಮಟ್ಟವು ಕಡಿಮೆ ಇದ್ದು ಅವರಿಗೆ ಅರ್ಥವಾಗುವ ರೀತಿಯಲ್ಲಿ ಪ್ರಶ್ನೆಗಳನ್ನು ವಿವರಿಸುವ ಅಗತ್ಯತೆ ಇದೆ. ಹಾಗಾಗಿ ಸದರಿ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ಸಂಗ್ರಹವಾಗುವ ಅಪಾಯವಿದೆ ಎಂದು ರಾಮಾಂಜನೇಯ ಆತಂಕವನ್ನು ವ್ಯಕ್ತಪಡಿಸಿದರು. ಮೇ 5 ರಿಂದ 17ರ ವರೆಗೆ ನಡೆಯಲಿರುವ ಜಾತಿ ಸಮೀಕ್ಷೆಯನ್ನು ಗಡುವಿನಲ್ಲಿ ಮುಗಿಸುವುದಕ್ಕೆ ಕಷ್ಟ ಎನ್ನಲಾಗುತ್ತದೆ. ಕಾರಣ ಮೊಬೈಲ್ಅಪ್ಲಿಕೇಷನ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು ಆದರೆ ಅಪ್ಲಿಕೇಷನ್ ನಲ್ಲಿ ಸಾಕಷ್ಟು ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುತ್ತಿವೆ. ಬೆಳಗೆ, 8:00 ರಿಂದ ಸಂಜೆ 6:00ರವರೆಗೆ ಸಮೀಕ್ಷೆಗೆ ಸಮಯ ನಿಗಧಿಪಡಿಸಲಾಗಿದೆ. ಆದರೆ ಮೊಬೈಲ್ ಅಪ್ಲಿಕೇಷನ್ ನಲ್ಲಿ ನೆಟವರ್ಕ್ ಸಮಸ್ಯೆಯಿಂದ ತಡವಾಗುತಿದೆ. ಪರಿಶಿಷ್ಟ ಜಾತಿಯ ಗಣತಿ ಸಮೀಕ್ಷೆಯಲ್ಲಿ 42 ಪ್ರಶ್ನಾವಳಿಗೆ ಉತ್ತರ ಪಡೆದು ಮಾಹತಿ ಅಪ್ ಲೋಡ್ ಮಾಡಬೇಕಾಗಿ ಇರುವುದರಿಂದ ವಿನಾ ಕಾರಣ ವಿಳಂಭವಾಗುತ್ತಿದೆ. ಹಳ್ಳಿಯಲ್ಲಿ ಇಂಟರ್‌ನೆಟ್ ನೆಟ್ವರ್ಕ್ ಸಮಸ್ಯೆ ಇರುತ್ತದೆ ಎಂದರು.
ಒಂದು ಕುಟುಂಬದ ಸಮೀಕ್ಷೆಗೆ ಅರ್ಧಗಂಟೆ, ಕೆಲವು ಸಮಯದಲ್ಲಿ ಒಂದು ಗಂಟೆ ಬೇಕಾಗಬಹುದು ಹೀಗಾಗಿ ಒಂದು ದಿನಕ್ಕೆ 5 ರಿಂದ 10 ಕುಟುಂಬಗಳ ಸಮೀಕ್ಷೆ
ನಡೆಸಲಷ್ಟೇ ಸಾಧ್ಯವಾಗುತ್ತದೆ. ಸಮೀಕ್ಷೆಗೆ ನೀಡಿರುವ ಅಲ್ಪಾವಧಿಯಲ್ಲಿ ನೀಡಿರುವ ಮನೆಗಳ ಸಮೀಕ್ಷೆ ನಡೆಸುವುದು ಕಷ್ಟ ಸಾಧ್ಯವಾಗಿದ್ದು, ಮುಕ್ತಾಗೊಳಿಸಲು ಸಾಧ್ಯವಾಗದೇ ಇರಬಹುದು. ಹಾಗಾಗಿ ಇನ್ನಷ್ಟು ದಿನಗಳ ಕಾಲಾವಕಾಶ ನೀಡಿ ಪಾರದರ್ಶಕವಾಗಿ ಸಮೀಕ್ಷೆ ಕೈಗೊಳ್ಳಲು ಅವಕಾಶ ನೀಡಬೇಕೆಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ
ಮನವಿ ಪತ್ರವನ್ನು ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಕೋಶಾಧ್ಯಕ್ಷರಾದ ಟಿವಿ ವೆಂಕಟೇಶ, ನಗರ ಅಧ್ಯಕ್ಷ ತಮ್ಮಣ್ಣ, ಆರ್ ವಿ ಪ್ರಕಾಶ್,
ಗೋನಾಳ್ ಹುಲುಗಪ್ಪ, ಶೇಷಣ್ಣ, ಮಹಿಳಾ ಜಿಲ್ಲಾಧ್ಯಕ್ಷರಾದ ಎಲ್ಲಮ್ಮ, ವಿ ರಾಘವೇಂದ್ರ ಸೋಮಸಮುದ್ರ, ಗುಡುದೂರ್ ಹನುಮಂತ, ಜಿಲ್ಲಾ ಯುವ ಅಧ್ಯಕ್ಷರು,
ಎಂ ಪಿ ರಾಜೇಶ್, ದಿವಾಕರ್ ಬಾಬು, ಸಂಗನಕಲ್ ರಾಘವೇಂದ್ರ ಅಂದ್ರಾಲ್ ಹುಲಗಪ್ಪ, ಗುಡುದೂರ್ ಶ್ರೀನಿವಾಸ್, ಸಂಗನಕಲ್ಲ ರಾಮುಡು, ಪ್ರವಾಲಿಕ ಸೇರಿದಂತೆ ಇತರರಿದ್ದರು.