ಅನುದಿನ‌ ಕವನ-೧೬೦೯, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಮುಂಗಾರ ಮಳೆಯಂತೆ ನೀನು

ಮುಂಗಾರ ಮಳೆಯಂತೆ ನೀನು

ಮುಂಗಾರ ಮಳೆಯಂತೆ ನೀನು ಬರಲು
ನನ್ನಲ್ಲಿ ಗುಡುಗು ಸಿಡಿಲು
ಬಿಡದೆ ಸುರಿ ತಂಪಾಯ್ತು ಧಗೆ ಬಿಸಿಲು
ಮನದಿ ಮಣ್ಣ ಘಮಲು

ಮಳೆ ನಿಂತರು ನಿನ್ನ ನೆನಪು ತುಂತುರು
ಮನಸೆಲ್ಲ ಮಾಗಿ ಮುಗಿಲು
ಇಳೆ ತೃಪ್ತಿಯಾಗಿ ಸಮೃದ್ಧ ಹಸಿರ ಬಸಿರು
ನಿನ್ನ ನಡಿಗೆ ಕಾವ್ಯ ಹೊನಲು

ಭರಪೂರ ಮಳೆ ಧರಣಿಗೆ ಹೊಂಗನಸು
ನಿನ್ನ ಕಣ್ಣಿನ ನೋಟ ಕಡಲು
ಗಿಡಮರಬಳ್ಳಿ ಹೊಸ ಚಿಗುರಿನ ನನಸು
ಬರೆದೆ ನಿನ್ನೊಲವ ಹಾಡಲು

ಮಳೆಬಿಲ್ಲ ಚಿತ್ತಾರ ಪ್ರಕೃತಿಯ ಸಿಂಗಾರ
ನಿನ್ನಿಂದ ಬಣ್ಣಗಳೆ ಸುತ್ತಲು
ಮೃಗ ಪಕ್ಷಿಗಳ ಸಂತಸ ಭುವಿ ಮಂದಾರ
ನೀನಿರದ ನನ್ನೆದೆಯೆ ಕತ್ತಲು

ಮಳೆ ಹೀಗೆೇ ಸುರಿದು ಹೋಗಬಹುದು
ನೀ ಸರಿಯದ ಪ್ರೀತಿ ಅಮಲು
ಮುಂಗಾರಿನ ಮಳೆ ಮತ್ತೆ ಬರಬಹುದು
ನೀ ನನ್ನ ನಿತ್ಯ ಕಾವ್ಯ ನವಿಲು


-ಟಿ.ಪಿ.ಉಮೇಶ್, ಹೊಳಲ್ಕೆರೆ

Leave a Reply

Your email address will not be published. Required fields are marked *