ಅನುದಿನ ಕವನ-೧೬೧೦, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಪ್ರೀತಿಯ ತೀರ್ಪು!

ಪ್ರೀತಿಯ ತೀರ್ಪು.!

ಅವನೊಲವಲಿ ನಾ ತೋರಿದ ಸಿಟ್ಟು,ಸೆಡವು,
ಅಸಹನೆಯ ಅಪರಾಧಕ್ಕೆ..
ಏಕಾಂತದ ಸೆರೆಮನೆಯಲಿ
ನೆನಪುಗಳ ಜೀವಾವಧಿ ಶಿಕ್ಷೆ
ಅನುಭವಿಸುವ ನಲ್ಮೆಯ ಖೈದಿ ನಾ!

ಬಿಡುಗಡೆಯಿಲ್ಲದ ಜೀವಾವಧಿ ಶಿಕ್ಷೆಯಿದು..!
ಇದಕ್ಕಿಂತ ಅವನ ಬಾಹುಬಂಧನದಿ
ನಲಿವಿಂದ ಗಲ್ಲಿಗೇರುವ (??)
ಶಿಕ್ಷೆ ನೀಡೆಂದು ಮನದ ಸುಪ್ರೀಂ ಕೊರ್ಟ್ಗೆ ..
ಮೇಲ್ಮನವಿ ಸಲ್ಲಿಸಿದ
ಫಿರ್ಯಾದುದಾರಳು ನಾ!

ಕಾಯುತ್ತಿದ್ದೇನೆ ತೀರ್ಪಿಗಾಗಿ..
ಆ ತೀರ್ಪು….
ಅವನ ಬಾಹುಬಂಧನದಿ ರಕ್ಷೆಯೋ..!?
ಅಥವಾ ಅವನ ಮೌನದಭಾವವ ನಾ ತಾಳದೆ
ಅನುಭವಿಸುವ ವಿರಹ ತಾಪದ
ವೇದನೆಯ ಶಿಕ್ಷೆಯೋ..!?

ಇಂತಿ ನಿನ್ನೊಲವು.


-ಶಾಂತಾ ಪಾಟೀಲ್, ಸಿಂಧನೂರು
—–

Leave a Reply

Your email address will not be published. Required fields are marked *