ಅನುದಿನ ಕವನ-೧೬೩೫, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಗೊಣಗುತ್ತಿವೆ
ದಿನಗಳು
ನೋವಿನ ಉರಿಯಲ್ಲಿಯೇ
ಬೇಯಿಸುತ್ತಲೇ

ಸಿದ್ದಗೊಳಿಸುವ
ಆತುರಕ್ಕೆ
ಮಾತಿನ ಪುಳ್ಳೆಗಳು
ಧಗಧಗಿಸುತ್ತವೆ

ಮಿಶ್ರಣದ
ಮೇಲುಸ್ತುವಾರಿಯಲ್ಲಿ
ಬೇರೆ ಬೇರೆ ಕೈಗಳಲ್ಲಿ
ಊದುಕೊಳವೆ

ಸಾವಿನ
ರುಚಿಯನ್ನೇ
ಉಣ್ಣನ್ನು ಬಯಸುವಾಗ
ನಿಸ್ವಾರ್ಥವಾಗಿಯೇನೂ
ಸಮರ್ಪಿತ

ಆದರೂ
ತಾಳ್ಮೆಯೊಂದಿಗೆ
ಆತ್ಮಗಳ ಅರಿವು
ಬದುಕಿನ
ರುಚಿಕರ ಅಡುಗೆಯಲ್ಲವೇ?


-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
—–

Leave a Reply

Your email address will not be published. Required fields are marked *