ಅನುದಿನ ಕವನ-೧೭೬೪, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ಕನ್ನಡವೆಂದರೆ….

ಕನ್ನಡವೆಂದರೆ….

ಕನ್ನಡವೆಂದರೆ
ಅದು ತೋಟದ ಹಾದಿ
ತುಳಿದಷ್ಟು
ಅಂಗಾಂಗ ಪುಳಕ
ಅನುಭವಿಸಿದಷ್ಟು
ನವರಸಗಳ ಜಳಕ

ಕನ್ನಡವೆಂದರೆ
ಅದು ನಿಸರ್ಗಧಾಮ
ಆಸ್ವಾದಿಸಿದಷ್ಟು.
ಕೋಗಿಲೆಗಳ ಇಂಪಿದೆ
ನಯನಿಸಿದಷ್ಟು
ನವಿಲುಗಳ ನಾಟ್ಯವಿದೆ.

ಕನ್ನಡವೆಂದರೆ
ಅಮ್ಮನ ಅಡಿಗೆಮನೆ
ಉಂಡಷ್ಟೂ
ರಸ ಕವಳದ ರುಚಿಯಿದೆ
ಕುಡಿದಷ್ಟೂ
ಅಮೃತದ ಸವಿ ಜೇನಿದೆ

ಕನ್ನಡವೆಂದರೆ
ಭಾಷೆ ಬರಹದ ಬೆಸುಗೆ
ನುಡಿದರೆ
ಅಕ್ಕರೆಯ ವಾಣಿ
ಬರೆದರೆ
ಅಕ್ಷರದ ರಾಣಿ


-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.

Leave a Reply

Your email address will not be published. Required fields are marked *