ಅನುದಿನ ಕವನ-೧೭೮೪, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಅವನು

ಅವನು

ಅವನಿಲ್ಲದೆ ನಾನಿಲ್ಲ…
ಸೃಷ್ಟಿ,ಸ್ಥಿತಿ,ಲಯಕಾರರಾಗಿ ತ್ರಿಮೂರ್ತಿಗಳಾದವನವನು..
ಮುದ್ದು ಕಂದ ನಾನಾಗಿರುವಾಗ ಎದೆಮೇಲೆ ಮಲಗಿಸಿಕೊಂಡು ಮುದ್ದು ಮಾಡಿದ ‘ಅಪ್ಪ’ ಅವನು…
ಚಿಕ್ಕಂದಿನಲಿ ಅತ್ತು ಕರೆದು ರಣ ರಂಪ ಮಾಡಿದಾಗ ಮುದ್ದಾದ ಕಥೆ ಹೇಳಿ ಮನ ತಣಿಸಿದ ‘ಅಜ್ಜ’ ಅವನು…
ಬಾಲ್ಯದಲ್ಲಿ ಗೆಳೆಯರೊಂದಿಗೆ ಜಗಳವಾಡಿ ಬಂದಾಗ ಬೆಂಬಲಕೆ ನಿಂತು ‘ಅಣ್ಣ-ತಮ್ಮ’ನಾಗಿ ಸಂತೈಸಿದವನವನು..
ನೋವು ನಲಿವಿಗೆ ಕಿವಿಯಾಗಿ ಗೆಳೆತನದ ಸವಿ ಹಂಚಿದ ‘ಗೆಳೆಯ’ ಅವನು…
ತಾಳಿಗೆ ತಲೆಬಾಗಿ ತವರು ತೊರೆದು ಬಂದಾಗ
ಬಾಹು ಬಂಧನದಿ ಬಂಧಿಸಿ ಬಾಳಿಗೆ ಬೆಳಕಾಗಿ ‘ಪತಿ’ಯಾಗಿ ಜೊತೆಯಾಗಿ‌ ನಿಂತವನವನು..
ವಯಸ್ಸಾಯಿತು ಕಂದ ಎಂದಾಗಲೆಲ್ಲ ಧೈರ್ಯತುಂಬಿ ನಾನಿಲ್ಲವೇ’ಮಗ’ನಾಗಿ ಎಂದವನವನು..
ಅವನು….ಅವನೇ!!
ಅವನಿಲ್ಲದೆ ಬದುಕಿಗೆ ಒಂದರ್ಥದಲ್ಲಿ ಅಸ್ತಿತ್ವವೇ ಇಲ್ಲ ಎಂದು ನಂಬಿದವಳು ನಾನು!

ಎಲ್ಲ ಪುರುಷರಿಗೆ ಈ ಕವಿತೆ ಅರ್ಪಿತ.

🍀🙏ವಿಶ್ವ ಪುರುಷರ ದಿನದ ಶುಭಾಶಯಗಳು🙏💐


-ಶಾಂತಾ ಪಾಟೀಲ್, ಸಿಂಧನೂರು

Leave a Reply

Your email address will not be published. Required fields are marked *