ಅನುದಿನ ಕವನ-೧೭೯೧, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ನಮ್ಮ ಸಂವಿಧಾನ ನಮ್ಮ ಹೆಮ್ಮೆ

ನಮ್ಮ ಸಂವಿಧಾನ ನಮ್ಮ ಹೆಮ್ಮೆ

ಭಾತೃತ್ವದ ಬೆಸುಗೆ ನಮ್ಮ ಸಂವಿಧಾನ
ಪ್ರಜೆಗಳಿಗೆ ಪರಮಾಧಿಕಾರ ಪ್ರಧಾನ
ಸರ್ವರಿಗೂ ಸಮಬಾಳು ಎಂಬ ಧ್ಯೇಯ
ಸಾರುತಿವೆ ವಿಧಿ ವಿಧಾನಗಳ ಅಧ್ಯಾಯ

ನಮ್ಮಭಾಷೆ ಬೇರೆ ಬೇರೆ ಭಾವ ಒಂದೆ
ಮಾಡುವ ಕರ್ಮ ಬೇರೆ ಧರ್ಮ ಒಂದೆ
ರಾಜ್ಯಗಳು ಹಲವಿದ್ದರೂ ಭಾರತ ಒಂದೆ
ಸರ್ಕಾರ ಬೇರೆ ಬೇರೆ ಸಂವಿಧಾನ ಒಂದೆ

ವಿಶ್ವಕೆ ಮಾದರಿ ಭಾರತ ಸಂವಿಧಾನ
ನಿರ್ದೇಶಕ ತತ್ವಕ್ಕಿಲ್ಲಿ ಉನ್ನತ ಸ್ಥಾನ
ಅಂಬೇಡ್ಕರರ ಚಿಂತನೆಯ ಶ್ರೀಕಾರ
ಭಾರತೀಯರ ಆಡಳಿತಕ್ಕೆ ಓಂಕಾರ

ಹಿಮಾಲಯ ಎತ್ತರವೇ ನಮ್ಮ ಸಂಸ್ಕೃತಿ
ಮಹಾಸಾಗರದ ಆಳವೇ ನಮ್ಮ ಪ್ರೀತಿ
ಮಾನವರೆಲ್ಲ ಸಹೋದರೆನ್ನುವ ನೀತಿ
ಭಾರತೀಯರಾರಿಗಿಲ್ಲ ವೈರಿಗಳ ಬೀತಿ

ನಮ್ಮ ಸಂವಿಧಾನ ನಮ್ಮ ಬಾಳಿಗೊಂದು ಪಥ
ಸರ್ವರನು ಸಮಭಾವದಿ ಹೊತ್ತೊಯ್ಯವ ರಥ
ಭದ್ರಗೊಳಿಸಬೇಕಿದೆ ಸಂವಿಧಾನದ ಚಕ್ರಗಳನು
ಪ್ರಗತಿಯ ತೈಲಬೇಕು ಅಶೋಕ ಚಕ್ರ ತಿರುಗಲು


-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.

Leave a Reply

Your email address will not be published. Required fields are marked *