ಅನುದಿನ ಕವನ-೧೭೯೨, ಕವಿ: ತನಾಶಿ, ಮಂಡ್ಯ

ಸಂವಿಧಾನವೇ ನಮ್ಮ ಭಾಗ್ಯವು                      ಭಾರತೀಯರ ಜೀವವು                                ಸರ್ವಜನಗಳ ಸಮತೆ ಭಾವವ                    ಸಾರುತಿರುವಾ ವೇದವು.

ನಾವು ಎಲ್ಲರು ಒಂದೆ ಎನ್ನುವ
ಭಾವ ಮೂಡಿಸಿ ಬೆಳೆಸಲು.
ಜಾತಿ ಧರ್ಮದ ಭೇದವಿಲ್ಲದೆ
ಮಾನವತೆಯಾ ಉಳಿಸಲು.

ಪ್ರಜೆಯೆ ದೇಶದ ಸಾರ್ವಭೌಮನು
ಅವನ ಶಕ್ತಿಯೆ ದೊಡ್ಡದು.
ಜನರ ನಾಯಕನನ್ನು ಆರಿಸೊ
ಮತದ ಹಕ್ಕದು ನಮ್ಮದು.

ವಿಶ್ವದಲ್ಲಿಯೆ ದೊಡ್ಡದಾದುದು
ನಮ್ಮ ಸಂವಿಧಾನವು.
ಅದಕೆ ಜಗದಲಿ ಎಲ್ಲ ಜನಗಳು
ಗೌರವಿಸುವಾ ತಾಣವು.

ಸಂವಿಧಾನ ದಿನಾಚರಣೆಯ ಶುಭಾಶಯಗಳು

-ತನಾಶಿ, ಮಂಡ್ಯ

Leave a Reply

Your email address will not be published. Required fields are marked *