ಜಾತಿ ಮತ್ತು ಪ್ರೀತಿ

ಹೌದು ನಿನ್ನದು ಮೇಲ್ಜಾತಿ
ನನ್ನದು ಕೀಳು
ಆದರೆ ಈಗ ಹೇಳು
ನನ್ನ ಊರ ಎದೆಯ ಸೀಳಿ ಬಂದ ರಸ್ತೆ
ನಿನ್ನ ಊರಿನಿಂದಲೆ ಮುಂದೆ ಸಾಗಿದೆ
ಹೇಳು ಯಾವ ಜಾತಿಯ ಹೆಸರಿಡುವೆ ಅಂತ್ಯವಿಲ್ಲದ ಹಾದಿಗೆ
ನನ್ನ ಹಟ್ಟಿ ಅಂಗಳದಲ್ಲಿ ಹಾಡಿದ ಕೋಗಿಲೆ
ನಿನ್ನ ಮನೆಯ ಅಂಗಳದ ಮರದಲಿ ಕೂತು
ಹಿಂಪಾಗಿ ಹಾಡುತಿದೆ ಕೇಳು
ಹೇಳು ಯಾವ ಜಾತಿಯ ಹೆಸರಿಡುವೆ ಆ ಹಾಡಿಗೆ
ನಿನ್ನ ಸುತ್ತಲಿರುವ ತಂಗಾಳಿ
ನನ್ನನು ಸುತ್ತುವರೆದಿವುದು
ಹೇಳು ಯಾವ ಜಾತಿಯ ಹೆಸರಿಡುವೆ ಉಸಿರಿಗೆ
ನೀನು ಗರ್ಭ ಗುಡಿಯಲಿ ನಿಂತು ಪೂಜಿಸುವ ದೇವರ
ನಾ ಮೆಟ್ಟಿಲಾಚೆಗೆ ನಿಂತು ಪೂಜಿಸುವೆ
ಹೇಳು ಯಾವ ಜಾತಿಯ ಹೆಸರಿಡುವೆ ಈ ಭಕ್ತಿಗೆ
ನಿಮ್ಮವರ ಸಿರಿತನದ ಹಸಿವಿಗು
ನಮ್ಮವರ ಬಡತನದ ಹಸಿವಿಗು
ಹೇಳು ಯಾವ ಜಾತಿಯ ಹೆಸರಿಡುವೆ ತಿನ್ನೊ ಅನ್ನಕೆ
ನಿನ್ನ ಹೃದಯದಲ್ಲರಳಿದ ಒಲವ ಹೂ
ನನ್ನಲು ಹರಲಿದೆ
ಹೇಳು ಯಾವ ಜಾತಿಯ ಹೆಸರಿಡುವೆ ನಮ್ಮಿಬ್ಬರ ಪ್ರೀತಿಗೆ
ಯಾವ ಬೇಧವಿಲ್ಲ ಒಮ್ಮೆ ಬರುವ ಸಾವಿಗೆ
ಮೇಲು ಕೀಳಿಲ್ಲ ಎಲ್ಲರು ಹೆಣವಷ್ಟೆ
ಸ್ಮಶಾಣಕ್ಕೆ…

-ತರುಣ್ ಎಂ ಆಂತರ್ಯ ✍️, ಟಿ. ನಾಗೇನಹಳ್ಳಿ, ಚಿತ್ರದುರ್ಗ ಜಿ.
