ಶುಭ ವಿವಾಹ: ಗುರು‌-ಹಿರಿಯರು, ಗಣ್ಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ  ಚತುರ್ಭುಜರಾದ ನಾಗಲಕ್ಷ್ಮಿ.ಹೆಚ್ ಮತ್ತು ಉಮೇಶ್ ಹೆಚ್.ಎಂ

ಬಳ್ಳಾರಿ, ಫೆ.11:  ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಸಿ. ನರಸಪ್ಪ ಮತ್ತು ಶ್ರೀಮತಿ ಈರಮ್ಮ ದಂಪತಿಗಳ ಏಕೈಕ ಪುತ್ರಿ ನಾಗಲಕ್ಷ್ಮಿ ಹೆಚ್ ಮತ್ತು ಸಿರುಗುಪ್ಪ ತಾಲೂಕಿನ ಮಣ್ಣೂರು ಗ್ರಾಮದ ಶ್ರೀಮತಿ ಮಲ್ಲಮ್ಮ ಮತ್ತು ಹನುಮಂತಪ್ಪ ಹೆಚ್ ಎಂ
ಅವರ ಜೇಷ್ಠ ಸುಪುತ್ರ ಉಮೇಶ್ ಹೆಚ್. ಎಂ ಅವರ ವಿವಾಹವು ಬುಧವಾರ ವಿಜೃಂಭಣೆಯಿಂದ ಜರುಗಿತು.
ಬಳ್ಳಾರಿಯ ಶ್ರೀ ವಾಲ್ಮೀಕಿ ಭವನದಲ್ಲಿ ಜರುಗಿದ ವಿವಾಹ ಮಹೋತ್ಸವದಲ್ಲಿ ನಾಗಲಕ್ಷ್ಮಿ ಮತ್ತು ಉಮೇಶ್ ಸಪ್ತಪದಿ ತುಳಿದರು.
ಈ‌‌ ಸಂಭ್ರಮದ ಶುಭಗಳಿಗೆಗೆ ನಾಡಿನ‌ ಗಣ್ಯಾತಿಗಣ್ಯರು ಸಾಕ್ಷಿಯಾದರು‌ ಮಾತ್ರವಲ್ಲ ನವ ವಧುವರರಿಗೆ ಶುಭ ಹಾರೈಸಿದರು.


ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮಾಜಿ ಸಚಿವ ಬಿ. ಶ್ರೀರಾಮುಲು, ಬಳ್ಳಾರಿ ಜಿಲ್ಲಾಧಿಕಾರಿ ಕೆ.‌ನಾಗೇಂದ್ರ‌ಪ್ರಸಾದ್, ಕೆಪಿಸಿಎಲ್ (ಕುಡುತಿನಿ) ಕಾರ್ಯನಿರ್ವಾಹಕ ನಿರ್ದೇಶಕ ಕೆ. ಆರ್. ಗಂಗಾಧರಯ್ಯ, ಚೀಫ್ ಇಂಜಿನಿಯರ್ ಸಿ.ಎನ್. ಜ್ಯೋತಿ ಲಕ್ಷ್ಮಿ, ಎಜಿಎಂ ಕೆ.ಎಸ್. ರಮೇಶ್, ಇಇ ಶಿವಕುಮಾರ್ ಎನ್.ಡಿ,  ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ, ರಾಜ್ಯ ದಿಶಾ ಸಮಿತಿ ಸದಸ್ಯ ಎ.‌ಸಿ.‌ದಾನಪ್ಪ, ನಿವೃತ್ತ ಎಸ್.ಇ ವೆಂಕಟರಮಣ ಸಂಗನಕಲ್,
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ, ಡಿಎಸ್ ಎಸ್ ರಾಜ್ಯ ಮುಖಂಡ ಎ.‌ಮಾನಯ್ಯ, ರಾಯಚೂರು ಜಿಲ್ಲಾ ಸಿಎಂ‌ಎಸ್ ಮುಖಂಡ ಜಗನ್ನಾಥ ಸುಂಕಾರಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ‌ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಸಿಎಂಎಸ್ ರಾಜ್ಯ ಮುಖಂಡರಾದ ಪ್ರೊ. ಸುಭಾಷ್ ನಾಟೀಕರ್, ಎಚ್.ಕೆ.‌ಬಸವರಾಜ್, ನಿವೃತ್ತ ಎಸ್.ಪಿ ರುದ್ರಮುನಿ, ಡಿ. ಸೂರಿ, ಮಾವಿನಹಳ್ಳಿ ಸಿದ್ದಬಸಪ್ಪ, ಹೊಸಪೇಟೆ ಈರಮ್ಮ, ನಿವೃತ್ತ ಪ್ರಾಚಾರ್ಯ ಅಮ್ಮನಕೇರಿ ಬಸವರಾಜ್, ಡಿಎಸ್ ಎಸ್ ಮುಖಂಡ‌ ಹೆಚ್. ಈಶ್ವರಪ್ಪ, ಸ್ನೇಹ ಸಂಪುಟದ ಕಲ್ಲುಕಂಬ ಪಂಪಾಪತಿ, ಬಳ್ಳಾರಿ ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಮುಖಂಡರಾದ ವೀರ ಬಸಪ್ಪ, ಹಿರಿಯ ಸಾಹಿತಿ ಎನ್.ಡಿ. ವೆಂಕಮ್ಮ, ವಾಲ್ಮೀಕಿ ಸಮಾಜದ ಮುಖಂಡರಾದ ಕೌಲ್ ಬಜಾರ್ ತಿಮ್ಮಪ್ಪ,  ಹುಚ್ಚಣ್ಣ, ಅದ್ದಿಕೇರಿ ತಿಮ್ಮಪ್ಪ,   ವಿ. ಕೆ.‌ಬಸಪ್ಪ,   ಮಹಾನಂದಿಕೊಟ್ಟಂ  ಶಿವಪ್ಪ,  ಮಹಾನಗರ ಪಾಲಿಕೆ‌ ಸದಸ್ಯ  ಪಿ.ಜಗನ್ನಾಥ್, ಮಾನವ ಬಂಧುತ್ವ ವೇದಿಕೆಯ ವಿಜಯಕುಮಾರ್ ಸಂಗನಕಲ್ಲು,  ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ಗೂಳಪ್ಪ ಸಿ.ಡಿ, ಗೌರವಾಧ್ಯಕ್ಷ ಡಾ.‌ಸಿ ಎಚ್.‌ಸೋಮನಾಥ್, ಪ್ರಧಾನ‌ ಕಾರ್ಯದರ್ಶಿ ಸಿ.‌ಹನುಮಪ್ಪ, ಖಜಾಂಚಿ ರಮೇಶ್ ಸುಗ್ನಳ್ಳಿ, ಸದಸ್ಯರಾದ ವಿಲಾಸ್ ಮಾನಕರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೂಡ್ಲಿಗಿ ಸಿ.‌ಉಮೇಶ್, ಹಬೊ ಹಳ್ಳಿ ನ್ಯಾಯವಾದಿ ಸಿ.‌ಬಸವರಾಜ್, ನಾಗಲಕೆರೆ ಗೋವಿಂದ, ಕಮಲಾಪುರ ಸಣ್ಣ ಈರಣ್ಣ,  ಹರಪನಹಳ್ಳಿ ಕೆಂಚಪ್ಪ,  ತೂಲಹಳ್ಳಿ ಅಜ್ಜಯ್ಯ ಹೊಟ್ಟೇರ್, ಬಲಿಜ ಸಮಾಜದ ಮುಖಂಡ ಬಾಲಕೃಷ್ಣ, ಮಡಿವಾಳರ ಸಂಘದ ಮುಖಂಡ ಬಾಬು, ಬಸವನಗೌಡ,  ಪತ್ರಕರ್ತರಾದ ಯಮನಪ್ಪ ಗುಣದಾಳ್,  ವೆಂಕೋಬಿ ಸಂಗನಕಲ್, ವಿಎಸ್ ಕೆ ವಿವಿಯ ಪ್ರೊ. ರಾಜೇಂದ್ರ ಪ್ರಸಾದ್,  ಬಿಜೆಪಿ ಯುವ ಮುಖಂಡ ರಾಘವೇಂದ್ರ, ಸಿಎಂಎಸ್ ಬಳ್ಳಾರಿ ಜಿಲ್ಲಾಧ್ಯಕ್ಷ ಸಿ.‌ಶಿವಕುಮಾರ್, ಮುಖಂಡರಾದ ಸಿ. ಹನುಮೇಶ್, ಶಂಕರ್ ನಂದಿಹಾಳ್, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಎಸ್. ಶ್ರೀನಿವಾಸ್, ಗಾದಿಲಿಂಗಪ್ಪ, ದಸಾಪ ಜಿಲ್ಲಾಧ್ಯಕ್ಷ ಡಾ. ನಾಗಪ್ಪ ಬಿ.ಇ,  ಭೀಮರಾವ್ ಐಎಎಸ್ ಸ್ಟಡಿ ಸೆಂಟರ್ ನ ಶೇಖರ್ ಕುರುವಳ್ಳಿ, ಸಿ. ವೀರೇಶ್, ಕೋಳೂರು ಶಿವಶಂಕರ್  ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ರಾಜ್ಯ, ಜಿಲ್ಲಾ ದಲಿತ, ಛಲವಾದಿ‌ ಸಮಾಜದ ಗಣ್ಯರು ನವ ವಧುವರರಿಗೆ ಶುಭ ಹಾರೈಸಿದರು.


ಬಿ.ಇ ಪದವೀಧರೆ ನಾಗಲಕ್ಷ್ಮಿ ನೀರಾವರಿ ಇಲಾಖೆಯಲ್ಲಿ ಸಹಾಯಕ ಅಭಿಯಂತರ(ಎಇ)ರಾಗಿ,
ಬಿ.ಇ. ಪದವೀಧರ ಉಮೇಶ್ ಹೆಚ್. ಎಂ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
—–

Leave a Reply

Your email address will not be published. Required fields are marked *