ಅನುದಿನ ಕವನ-೧೮೮೭, ಕವಯತ್ರಿ: ರೇಖಾ ಪ್ರಕಾಶ್ ಕೆ ಎಂ, ಹೊಸಪೇಟೆ, ಕವನದ ಶೀರ್ಷಿಕೆ: ಓ ..ಬಾಲ್ಯವೇ!

ಓ ..ಬಾಲ್ಯವೇ

ಓ ..ಬಾಲ್ಯವೇ ನೀ
ಮತ್ತೇ ಬರಲಾರೆಯಾ???…

ಮಳೆಯಲಿ ನೆನೆದು ಸಂಭ್ರಮಿಸುತ್ತಿದ್ದ,..
ಗೋಡೆಗಳ ಗೊಡವೆಯಿಲ್ಲದೆ
ಮಣ್ಣಿನಲ್ಲಿ ಅರಮನೆ ಕಟ್ಟುತ್ತಿದ್ದ,..
ಗಾಯವಾದರೂ ಬಳಿದು ಎಂಜಲು
ಕ್ಷಣದಲ್ಲೇ ಮರೆಯುತ್ತಿದ್ದ
ಓ ..ಹಸಿರು ಹೃದಯದ…
ಬಾಲ್ಯವೇ ನೀ ಮತ್ತೆ ಬರಲಾರೆಯಾ ??..

ಭವಿಷ್ಯದ ಆತಂಕವಿರಲಿಲ್ಲ..
ಭೂತಕಾಲದ ಹಂಗಿರಲಿಲ್ಲ..
ವರ್ತಮಾನದಲ್ಲಷ್ಟೇ ಸಂಭ್ರಮಿಸಿದ್ದ
ಓ.. ಬಾಲ್ಯವೇ
ನಿನಿಷ್ಟು ಸುಂದರವೆಂದು
ನನಗಂದು ತಿಳಿದಿರಲಿಲ್ಲ..
ಆದ್ದರಿಂದ
ಕ್ಷಣ ಮಾತ್ರವಾದರೂ
ಮತ್ತೇ ಬಾ…
ಸಂಭ್ರಮಿಸೋಣ ..
ಅದೇ ನಿಷ್ಕಾಮದ ನಗುವನ್ನು
ಅದೇ ನಿಷ್ಕಲ್ಮಶ ನಿರಾಳತೆಯನ್ನು..

-ರೇಖಾ ಪ್ರಕಾಶ್ ಕೆ ಎಂ,
ಹೊಸಪೇಟೆ

Leave a Reply

Your email address will not be published. Required fields are marked *