* ಅವಳ
ದುಃಖಗಳ ನಡುವೆ
ಇಣುಕುವ ಸಮಾಧಾನದ ಹೆಸರು
ನನ್ನದಷ್ಟೇ ಎಂಬುದೊಂದು ಹೆಮ್ಮೆ
* ನಲಿವಿನ ಕ್ಷಣಗಳನ್ನು
ನಾನಿಲ್ಲದ ಬದುಕಲ್ಲಿ
ಸಮಯವು ವ್ಯರ್ಥವೆಂದು
ತಿಳಿದು ಮುಂದೂಡುತ್ತಾಳೆ
* ತೀರಗಳೆನೋ ಅಪರಿಚಿತವಾದವು
ಅವನಿಂದ ಬರುವ ಅಲೆಗಳು
ಎಂದಾದರೊಮ್ಮೆ ತಾಕಲೇಬೇಕೆಂದು
ತವಕಿಸುತ್ತಿದ್ದಾಳೆ
* ಇಬ್ಬರು ಕೊಟ್ಟುಕೊಂಡ
ಮಾತುಗಳನ್ನೆಲ್ಲ
ನನಗಿಂತ ಚೆನ್ನಾಗಿ ಹೃದಯದಲ್ಲಿ
ಕಾಪಾಡಿಕೊಂಡಿದ್ದಾಳೆ
* ಹೆಗಲ ಆತುಕೊಂಡು
ತಡೆದ ದುಃಖವನ್ನೆಲ್ಲ ಒಮ್ಮೆಗೆ
ಹರಿಬಿಡಿಯಬೇಕೆಂಬ ಗಳಿಗೆಗಾಗಿ
ಕಾದಿದ್ದಾಳೆ
* ಅವಳ ಹೊರತಾಗಿ ನಾನೂ
ಏನು ಬದುಕಲಿಲ್ಲ ಎಂಬುದಾಗಿ
ಕವಿತೆಯ ಭಾವಗಳನ್ನು
ಜೋಡಿಸಿಟ್ಟುಕೊಂಡಿದ್ದಾಳೆ

-ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು
—–
