ಮೌನದ ಕನವರಿಕೆ
ಸುತ್ತಲೂ ಕರೆದಿದೆ
ಗೊತ್ತಿಲ್ಲದ ಹುಸಿ ಹುಚ್ಚು ಪ್ರೀತಿ
ಇದಕೆ ಕಾರಣ ಕೊಡಲಾಗದೆ
ಹೊರಟಿದೆಯಲ್ಲ ಸಂಬಂಧ. ..
ಆದರೂ ಕರುಳ ಭಾದೆ
ಬೆಂಬಿಡದೆ ಕೂಗಿದೆ
ನಿಶ್ಚಿಂತೆ ಇಲ್ಲದೆ ಮಿಲನ ಎಲ್ಲ ಮರೆತು
ಆಳದಿ ಬಿದ್ದು ಅಳುತಿದೆ. .
ಹಣೆಬರಹದ ಕರ್ಮಕೆ
ಅನಿವಾರ್ಯತೆ ನಾಲ್ಕು ಗೋಡೆಯಲಿ
ಕೂಗಿ ಕೂಗಿ ಅರಚಿ ಸುಸ್ತಾಗಿದೆ
ಹೊರಬಿಟ್ಟುಬರಲು. .
ಬಿಡದ ಸಂಬಂಧದ ಕಟ್ಟು ಪಾಡು
ಕಿವುಚಿ ಗಾಯ ಮಾಡಿ ಮೂಲೆಯಲಿ
ಸರಿಸಿದೆ. .
ತತ್ತರಿಸಿದ ದೇಹಕೆ ಯಾವ ನೆರಳಿಲ್ಲ
ಆದರೂ ಹೋರಾಟಕೆ ಸಜ್ಜಾಗಿದೆ
ರಕ್ತವೆಂಬ ಗಟ್ಟಿ ಪಾದ. .
ಲೋಕದ ಬೇಗೆಯಲಿ
ಇಂತಹ ಸಮರಗಳೆಷ್ಟೋ
ನಡೆದ ಅತ್ಯಾಚಾರಕೆ ಸಿಕ್ಕ
ತಿರುವುಗಳೆಷ್ಟೋ? ಅರಿಯೆ. .
ಬಲಿದಾನದ ಬದುಕಿಗೆ
ಎಷ್ಟೋ ಕಂದಮ್ಮಗಳ ಕಣ್ಣೀರು
ಕೆಲವು ನೆಲದೊಳು ಹೂತು ಹೋಗಿವೆ. ..
ಹೇಳಿಕೊಳ್ಳಲಾಗದ ಸಮಾಜದಿ
ಹೆದರಿ ನೇಣು ಬಿಗಿದುಕೊಡ
ಹಗ್ಗ ನೇ ಮೌನದಿ ಹರಿದು
ಜಗವ ಕಣ್ತೆರೆಯಲು ಸೂಚನೆಗೈದಿದೆ. .
ಯಾಕೋ ಅರಿಯೆ ಪ್ರಸ್ತುತ
ನಿಲುವ ನೋಟ ಜಗದೊಡಲ ಎಚ್ಚರಿಸಿದರೂ
ಶ್ರೇಣಿಯಲಿ ಬದುಕು ಜಂಜಾಟವೇ

-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ವಿಜಯನಗರ ಜಿಲ್ಲೆ.
