ಪಯಣ
ಮಿಂಚಬೇಕೆನ್ನಿಸಿದರೆ ಮಿಂಚಿಬಿಡು
ನಗಬೇಕು ಅನ್ನಿಸಿದರೆ ನಕ್ಕಬಿಡು
ನರ್ತಿಸಬೇಕೆಂದಿದ್ದರೆ ನರ್ತಿಸಿಬಿಡು
ಹಾಡಬೇಕೆಂದಿದ್ದರೆ ಹಾಡಿಬಿಡು..
ಹೂವನ್ನರಸಿ ಹಾರುವ ದುಂಬಿಯಂದದಿ
ಒಳ್ಳೆಯ ಮನಸುಗಳನ್ನರಸಿ ಹೊರಡು..
ಬೆರೆತವರೊಡನೆ ನಕ್ಕು ನಲಿದುಬಿಡು..
ಕ್ಷಣಿಕ ಬದುಕಿದು
ನಡೆವ ಹಾದಿ ಯಾವಾಗ ಎಂದು ಎಲ್ಲಿ ಕೊನೆಗೊಳ್ಳುವುದೋ ಏನೋ..
ಆನಂದದಲ್ಲಿಯೇ ಮುಗಿದುಬಿಡಲಿ ಪಯಣ

-ಮಹಿಮ, ಬಳ್ಳಾರಿ
