‘ಅರಣ್ಯ ಇಲಾಖೆ ಸಿಬ್ಬಂದಿಗಳ ಕೆಲಸದ ಬಗ್ಗೆ ತೃಪ್ತಿ ಇದೆ’: ಅರಣ್ಯ ಇಲಾಖೆಯನ್ನು ಅಲ್ಲಗಳೆಯುವುದು ಸರಿಯಲ್ಲ -ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಸೆ.22: “ನಮ್ಮ ಅರಣ್ಯ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ. ಅವರ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ಕಾಡನ್ನು ಕಾಯದೇ ಇದ್ದಿದರೆ ಇವತ್ತು ಅರಣ್ಯ ಉಳಿಯುತ್ತಿರಲಿಲ್ಲ. ಮಳೆಯೂ ಬರುತ್ತಿರಲಿಲ್ಲ. ಅವರನ್ನು ಅಲ್ಲಗಳೆಯುವುದು ಸರಿಯಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಪ್ರಕರಣಗಳನ್ನು ಅರಣ್ಯ ಇಲಾಖೆಗೆ ಕೊಡಬೇಡಿ. ಕಂದಾಯ ಇಲಾಖೆಗೆ ಕೊಡಿ. ಅವರು ಭೂಮಿಯ ಒಡೆಯರ ರೀತಿ ಆಡುತ್ತಾರೆ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ನಿಮಗೆ ಇಷ್ಟ ಇದೆಯೋ ಇಲ್ಲವೋ. ಮದುವೆ ಆದ ಮೇಲೆ ಸಂಸಾರ ನಡೆಸಲೇಬೇಕು. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು ನಮ್ಮ, ನಿಮ್ಮ ಮಕ್ಕಳೇ. ಎಸಿಸಿಎಫ್, ಪಿಸಿಸಿಎಫ್, ವಾಚರ್, ಗಾರ್ಡ್ ಗಳು ಎಲ್ಲರೂ ನಮ್ಮವರೇ. ಉದ್ಯೋಗಕ್ಕಾಗಿ ಅವರು ಅಲ್ಲಿ ಹೋಗಿದ್ದಾರೆ. ಅರಣ್ಯ ಇಲಾಖೆ ಕೂಡ ನಮ್ಮ ಕುಟಂಬ ಇದ್ದಂತೆ. ಅರಣ್ಯ ಇಲಾಖೆಯನ್ನು ದೂರ ಇಡಲು ಸಾಧ್ಯವಿಲ್ಲ. ನಾನು ಗಮನಿಸಿದಂತೆ ಅರಣ್ಯ ಇಲಾಖೆಯಲ್ಲಿರುವ ಅಧಿಕಾರಿಗಳಿಗೆ ಬದ್ದತೆ ಇದೆ. ಅವರು ರೈತರು ಮಕ್ಕಳು. ಅವರಿಗೂ ನೋವು ಅರ್ಥವಾಗುತ್ತದೆ. ಈತನಕ ಯಾವುದೇ ವಿಚಾರದಲ್ಲೂ ನಕರಾತ್ಮವಾಗಿ ಪ್ರತಿಕ್ರಿಯಿಸಿಲ್ಲ” ಎಂದು ಹೇಳಿದರು.

“ಅರಣ್ಯ ಇಲಾಖೆ ಸರ್ಕಾರದ ಬದ್ಧತೆ ಅರ್ಥ ಮಾಡಿಕೊಂಡಿದೆ. ಅರಣ್ಯವನ್ನು ರಕ್ಷಣೆ ಮಾಡಬೇಕಾದದ್ದು ಅದರ ಜವಾಬ್ದಾರಿ. ಅವರ ಕರ್ತವ್ಯವನ್ನು ಮೊಟಕು ಗೊಳಿಸಲು ಸಾಧ್ಯವಿಲ್ಲ. ಅವರಿಗೂ ಪ್ರಾಣಾಪಾಯವಿದೆ. ಪ್ರಾಣ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಂಬೋಣ. ಅವರೂ ನಮ್ಮ ಜನ” ಎಂದು ಅರಣ್ಯ ಇಲಾಖೆ ಇಲಾಖೆಯನ್ನು ಸಮರ್ಥನೆ ಮಾಡಿಕೊಂಡರು.

“ಕೇಂದ್ರದ ನಾಯಕರ ಸಮಯ ಪಡೆದುಕೊಂಡು ರಾಜ್ಯದಿಂದ ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗುತ್ತೇನೆ” ಎಂದರು.

Leave a Reply

Your email address will not be published. Required fields are marked *