ಅನುದಿನ ಕವನ-೧೯೮೦, ಹಿರಿಯ ಕವಿ: ಎಂ. ಎಸ್.‌ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಮುಸ್ಸಂಜೆಯ ಬೆಳಕಲ್ಲಿ…

ಮುಸ್ಸಂಜೆಯ ಬೆಳಕಲ್ಲಿ…

ಮತ್ತೆ ಮತ್ತೆ ಚಿಗುರುವ ಮರಗಳನ್ನು ಕಂಡು ಅನುಮಾನಿಸುತ್ತಿದ್ದ ನನಗೆ,
ಈಗ
ಅಚ್ಚರಿಯಾಗುವುದಿಲ್ಲ,

ನನ್ನ ಕಾಲುಗಳಲ್ಲೂ
ಹುಡುಗುತನದ ಚುರುಕು, ಪ್ರೀತಿಯಲ್ಲಿ-
ಬಿದ್ದ ಭಾವ
ನಾನು ಇಲ್ಲವಾಗಿ ಅವಳೇ
ತುಂಬಿದ್ದಾಳೆ ನನ್ನಲ್ಲಿ,
ಈಗೀಗ
ನಾನು ನನ್ನ ಬಗ್ಗೆ ಯೋಚಿಸುವುದೇ ಇಲ್ಲ

ಒಂದು ಹುಲ್ಲಿನ ಎಸಳು
ಮುಟ್ಟಿದರೂ ಅವಳನ್ನೇ ಮುಟ್ಟಿದ ಹಾಗೆ,
ನಕ್ಷತ್ರ ಮಂಡಲ,-
ತಲುಪಿದ ಹಾಗೆ.

ಮರ ಮರವಾಗಿ ಹಕ್ಕಿ-ಹಕ್ಕಿಯಾಗಿ ಉಳಿದಿಲ್ಲ
ಈಗ,
ಗಾಢ- ಮೌನದಲ್ಲಿ ಹಕ್ಕಿಗಳ ಹಾಡು-
ಕೇಳಿಸುತ್ತಿದೆ
ಇರುವಿಕೆ ನನ್ನೊಳಗೆ ಉಸಿರಾಡುತ್ತಿದೆ.
ನಾನು
ಅವಳನ್ನು ಉಸಿರಾಡುತ್ತಿದ್ದೇನೆ.

-ಎಂ.ಎಸ್.ರುದ್ರೇಶ್ವರಸ್ವಾಮಿ, ಬೆಂಗಳೂರು

Leave a Reply

Your email address will not be published. Required fields are marked *