ಬಳ್ಳಾರಿಯಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿಗೆ ಸನ್ಮಾನ

ಬಳ್ಳಾರಿ: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಬಿ ಮಂಜಮ್ಮ‌ಜೋಗತಿ ಅವರು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ನಗರಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ‌ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರ ಮನೆಗೆ ಸೌಜನ್ಯ ಭೇಟಿ ನೀಡಿದ್ದ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪದ್ಮಶ್ರೀ ಪುರಸ್ಕೃತರಾಗುವ ಮೂಲಕ ಕನ್ನಡ ನಾಡಿಗೆ ವಿಶೇಷವಾಗಿ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದ ಮಂಜಮ್ಮ ಜೋಗತಿ ಅವರನ್ನು ಮಂಜುನಾಥ್ ದಂಪತಿ ಶಾಲು ಹೊದೆಸಿ, ಪುಸ್ತಕಗಳನ್ನು ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿಯ ಸಮಾಜ ಸೇವಕಿ ರಬೀಯಾ ನಿಸಾರ್, ವಿದ್ಯಾರ್ಥಿ ಶಾಹಿಲ್, ಮರಿಯಮ್ಮನಹಳ್ಳಿಯ ಶಿವಕುಮಾರ್ ಇದ್ದರು.
*****

Leave a Reply

Your email address will not be published. Required fields are marked *