ಬಳ್ಳಾರಿಯಲ್ಲಿ ‘ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ’ ಚಿತ್ರೀಕರಣ ಆರಂಭ

ಬಳ್ಳಾರಿ: ಸ್ಥಳೀಯ ನೇತಾಜಿ ನಗರದ ಶ್ರೀ ಗಣೇಶ ದೇವಸ್ಥಾನದಲ್ಲಿ ‘ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ’ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಜರುಗಿತು.
ಈ ಚಲನಚಿತ್ರದಲ್ಲಿ ನಾಯಕನಾಗಿ ಆಲಮ್ ಭಾಷಾ ಹಾಗೂ ನಾಯಕಿಯಾಗಿ ಖುಷಿ ಅನಿತಾ ಹೊಸಪೇಟೆ ನಟಿಸುತ್ತಿದ್ದಾರೆ. ಕಥೆ-ಚಿತ್ರಕಥೆ-ನಿರ್ದೇಶನದ ಹೊಣೆಯನ್ನು ಪಿ ರಾಜು ಅಸುಂಡಿ ಹಾಗೂ ಆನಂದ್ ಜಾವೇದ್ ಆರ್, ಸಂಗೀತ ನಿರ್ದೇಶನ ವಿಜಯ ಬಡಿಗೇರ ಹಾಗೂ ಸಾಹಿತ್ಯ ನಾಗರಾಜ ಎನ್ ಸಿರಗುಪ್ಪ,, ಛಾಯಾಗ್ರಹಣ ನವೀನ್ ನಾಯ್ಡು ಬಳ್ಳಾರಿ ನಿರ್ವಹಿಸುತ್ತಿದ್ದಾರೆ.
ಚಲನಚಿತ್ರದ ಚಿತ್ರೀಕರಣವನ್ನು ಬಳ್ಳಾರಿ ಸಿರುಗುಪ್ಪ ಮತ್ತಿತರ ಪ್ರದೇಶಗಳಲ್ಲಿ
ಚಿತ್ರೀಕರಿಸಲು ನಿರ್ಧರಿಸಲಾಗಿದೆ.
.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಅರುಣ್ ಭೂಪಾಲ್, ಗಾದಿ, ರೀತಿಕ್, ರಘು, ನಾರಾಯಣ, ಮುರುಳಿ, ಮಧನ್ ಕುಮಾರ್, ಶಫಿ ರಮೇಶ್, ಮೂರ್ತಿ, ನಾಗರಾಜ್, ಸಾಯಿ, ಶಿವುಚಂದ್ರ ಮತ್ತಿತರರು ಉಪಸ್ಥಿತರಿದ್ದರು
*****

Leave a Reply

Your email address will not be published. Required fields are marked *