ವಿಶ್ವ ದಿಗ್ಗಜ ನಟ ಬಳ್ಳಾರಿ ರಾಘವ ಪುತ್ಥಳಿಗೆ ಜಿಲ್ಲಾ ಬ್ರಾಹ್ಮಣ ಒಕ್ಕೂಟದಿಂದ ಗೌರವ, ಮಾಲಾರ್ಪಣೆ

ಬಳ್ಳಾರಿ : ವಿಶ್ವ ದಿಗ್ಗಜ ನಟ ಬಳ್ಳಾರಿ ರಾಘವ ಅವರ 141ನೇ ಜಯಂತಿ ಅಂಗವಾಗಿ ನಗರದ ರಾಯಲ್ ವೃತ್ತದಲ್ಲಿ ಇರುವ ರಾಘವ ಪುತ್ಥಳಿ ಗೆ ಜಿಲ್ಲಾ ಬ್ರಾಹ್ಮಣ ಒಕ್ಕೂಟ ಗೌರವ ಕಾರ್ಯದರ್ಶಿ ಡಾ. ‘ಬಿ. ಕೆ. ಸುಂದರ್ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುಂದರ್ ಅವರು, ಬಳ್ಳಾರಿ ರಾಘವ ವಿಶ್ವ ದಿಗ್ಗಜ ನಟರು ಎಂದು ಪ್ರಶಂಸಿಸಿ ರಾಘವರ ಅನುಪಮ ಕಲಾ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯ ನೇಮಕಲ್ಲುರಾವು, ಸಿಮೆಂಟು ಗಿರಿ, ಭೀಮರಾವು ಕುಲಕರ್ಣಿ, ಡಿ. ಗಿರಿ, ಬಜಾರ್ ಹರಿ, ಡಾ. ಶ್ರೀ ನಾಥ ,ಪತಕರ್ತ, ರಂಗ ಕಲಾವಿದ ಟಿ. ನಾಗಭೂಷಣ, ನಾಗೇಂದ್ರ, ರಾಮರಾವ್ ದೇಶಾಯ್, ವಿಠಲ್ ದೇಸಾಯಿ,ಕಣೇಕಲ್ ಶ್ರೀಧರ್, ವೆಂಕಟೇಶುಲು, ಪ್ರದೀಪ್, ದಿನಕರ್ ಮುಂತಾದವರು ಇದ್ದರು
*****

Leave a Reply

Your email address will not be published. Required fields are marked *