ಬಳ್ಳಾರಿ: ವಾರ್ತಾ ಇಲಾಖೆ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಬಳ್ಳಾರಿ,ಆ.15: 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಆವರಣದಲ್ಲಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಭಾನುವಾರ ಧ್ವಜಾರೋಹಣ ನೆರವೇರಿಸಿದರು.

ನಂತರ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಮತ್ತು ಬಳ್ಳಾರಿ ಕೊಡುಗೆ ಕುರಿತು ಅವರು ಮಾತನಾಡಿ ಸರ್ವರಿಗೂ ಶುಭಾಷಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಗಳಾದ ವಿ.ಸಿ.ಗುರುರಾಜ್,ವಿಜಯ್, ರೋಜಮ್ಮ, ಹನುಮಂತಪ್ಪ, ಮಲ್ಲೇಶಪ್ಪ, ಶ್ರೀಧರ್ ಕವಾಲಿ, ಮೈಲಾರಿ, ಉಮ್ಮೇ ಅಸ್ಮಾ, ನವೀನಕುಮಾರ ಸೇರಿದಂತೆ ಮಾಧ್ಯಮ ಮಿತ್ರರು ಇದ್ದರು.

Leave a Reply

Your email address will not be published. Required fields are marked *