Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ‌ ಚಟುವಟಿಕೆಗಳು ಸಹಕಾರಿ -ಹಂದ್ಯಾಳು ಪುರುಷೋತ್ತಮ - Karnataka Kahale

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ‌ ಚಟುವಟಿಕೆಗಳು ಸಹಕಾರಿ -ಹಂದ್ಯಾಳು ಪುರುಷೋತ್ತಮ

ಬಳ್ಳಾರಿ,ಡಿ.6: ಕೇವಲ ಓದು, ಬರಹಗಳಲ್ಲಿ ಮುಳುಗಿ ಏಕತಾನತೆಯಿಂದ ಬಳಲುವ ಮಕ್ಕಳಿಗೆ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತೇಜಿಸುವ ಮೂಲಕ ಪೋಷಕರು ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕರಿಸಬೇಕೆಂದು ಶ್ರೀ ಮಹಾದೇವ ತಾತ ಕಲಾ ಸಂಘದ ಅಧ್ಯಕ್ಷರೂ ಆಗಿರುವ ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಹೇಳಿದರು.
ಇಲ್ಲಿನ ಡಾ.ರಾಜಕುಮಾರ್ ರಸ್ತೆಯ ಬಯಲು ರಂಗಮಂದಿರದ ಹೊಂಗಿರಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಲಕ್ಷ್ಮೀ ಕಲಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿನ ಪ್ರತಿಭೆ ಗುರುತಿಸುವುದು ಪೋಷಕರ ಕರ್ತವ್ಯ. ಮಕ್ಕಳಲ್ಲಿ ಹೃದ್ಗತವಾದ ಕಲೆ, ಸಂಸ್ಕೃತಿ, ಗಾಯನ, ನೃತ್ಯ, ಸಾಹಿತ್ಯ, ಕ್ರೀಡೆಗಳಲ್ಲಿನ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಕಲಾ ಪ್ರಕಾರದಲ್ಲಿ ನೃತ್ಯವು ಎಲ್ಲ ಕಾಲಕ್ಕೂ ಆಕರ್ಷಕವಾದ ಕಲೆಯನ್ನು ರೂಢಿಗತ ಮಾಡಿಕೊಂಡಿರುವ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದ ಜಿಲಾನಿ ಬಾಷಾ ಅವರು ಮಕ್ಕಳ ನೃತ್ಯ ಪ್ರಾಕಾರಗಳಿಗೆ ಸಾಣೆ ಹಿಡಿಯುವ ಮೂಲಕ ಸಾವಿರಾರು ಮಕ್ಕಳಿಗೆ ಸ್ಫೂರ್ತಿ ತುಂಬಿದ್ದಾರೆ ಎಂದು ಪ್ರಶಂಸಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ವರ ರಂಗಣ್ಣವರ, ಖ್ಯಾತ ಉದ್ಯಮಿ ಡಾ.ರಮೇಶ್ ಗೋಪಾಲ್ ಮತ್ತಿತರರು ಮಾತನಾಡಿದರು.


ಖ್ಯಾತ ನೃತ್ಯಗುರು ಜಿಲಾನ್ ಬಾಷಾ ಅವರು ನೃತ್ಯ, ನಟರಂಗ ನಿದೇಶನ ಮಾಡಿದರೆ ಮೃದಂಗ ಕರ್ನೂಲಿನ ವಿದ್ವಾನ್ ಸುಧಾಕರ್ ಸಾಥ್ ನೀಡಿದರು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಸಮೀರ್ ಮತ್ತು ನೃತ್ಯ ತಂಡದವರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಾಗಭೂಷಣ ಮತ್ತು ಸುರೇಶ್ ಅಲವೇಲು ಇನ್ನಿತರರು ಇದ್ದರು.
*****