ಕರ್ನಾಟಕ ಜಾನಪದ ಪರಿಷತ್ತು: ಬಾಗೇಪಲ್ಲಿ ತಾಲೂಕು ಪದಗ್ರಹಣ ಕಾರ್ಯಕ್ರಮ ಯಶಸ್ವಿ

ಚಿಕ್ಕಬಳ್ಳಾಪುರ, ಮೇ 23: ಕರ್ನಾಟಕ ಜಾನಪದ ಪರಿಷತ್ತು
ಬಾಗೇಪಲ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸೋಮವಾರ ಯಶಸ್ವಿಯಾಗಿ ಜರುಗಿತು.


ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಚಿಕ್ಕಬಳ್ಳಾಪುರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷೆ ಉಷಾ ಶ್ರೀನಿವಾಸ್ ಬಾಬು ಅವರು ಮಾತನಾಡಿ
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸ ಬೇಕಿರುವ ಜಾನಪದ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ‌ಜಿಲ್ಲಾ ಘಟಕ ವತಿಯಿಂದ ಬಾಗೇಪಲ್ಲಿ ತಾಲೂಕಿನ ನೂತನ ಅಧ್ಯಕ್ಷ ಆಂಜನಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
*****

Leave a Reply

Your email address will not be published. Required fields are marked *