Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೬೧೩, ಕವಿ: ಮಂಜುನಾಥ ಕಾಡಜ್ಜಿ, ಕಮಲಾಪುರ. ಕವನದ ಶೀರ್ಷಿಕೆ: ಕತ್ತಲ ದೀಪ - Karnataka Kahale

ಅನುದಿನ ಕವನ-೬೧೩, ಕವಿ: ಮಂಜುನಾಥ ಕಾಡಜ್ಜಿ, ಕಮಲಾಪುರ. ಕವನದ ಶೀರ್ಷಿಕೆ: ಕತ್ತಲ ದೀಪ

ಕತ್ತಲ ದೀಪ !!

ಸಕಲರಿಗೆಲ್ಲಾ
ಬೆಳಕು ನೀಡುವ ದೀಪವೇ
ಇಂದು ಕತ್ತಲಲ್ಲಿ ಕುಳಿತಿದೆ;
ತನಗೆ ಆವರಿಸಿದ ತಾಮಸವ
ಓಡಿಸಲು ತಲೆಬಾಗಿ
ಬೇಡುತಿದೆ !
ಬೆಳಕು ಬಯಸಿ ಬಂದ ಜನರ
ಎದೆಗಳು ಕೆಂಡವಾಗಿ ಕುದಿಯುತಿವೆ !
ದೀಪದ ಬೆಳಕಿನ ಶಕ್ತಿಯೇ
ಇಂದು ರಕ್ಷಣೆಯ ಕೋರುತಿದೆ !!
ನಂಬಿಕೆಯ‌ ಎಣ್ಣೆಯು
ದಹನವಾಗಿ; ಅಪನಂಬಿಕೆಯ
ಬತ್ತಿಯು ಮೊಳೆತು ದುರ್ಗಂಧ
ಬೀರುತಿದೆ !
ದೀಪವು ಬುಡದ ಕತ್ತಲು
ಮರೆತು ;ತಾನೇ ಬೆಳಕೆಂದು
ನಯವಂಚಿಸಿ ;ತನ್ನೆದೆಯು
ಕತ್ತಲೆ ಕೋಣೆಯಲ್ಲಿ
ಬೆಳಕಿಗೆ ಮೊರೆಯಿಡುವ
ಕಾಲವ ತಂದುಕೊಂಡಿದೆ !
ಕತ್ತಲಲಿ ಬೆಂದವರ ಎದೆಯ
ಬಿಸಿಯುಸಿರಿನ ಜ್ವಾಲಾಮುಖಿಗೆ
ಬೆಳಕೇ ಇಂದು ಆಸರೆ ಬಯಸಿ
ದೈವವ ಬೇಡುತಿದೆ !!

✍️ಕಾಡಜ್ಜಿ ಮಂಜುನಾಥ, ಕಮಲಾಪುರ
*****