ಬಳ್ಳಾರಿ ಸತ್ಯಂ‌ ಬಿಇಡಿ ಕಾಲೇಜಿನಲ್ಲಿ ಶಿಕ್ಷಕರ‌ ದಿನಾಚರಣೆ

ಬಳ್ಳಾರಿ, ಸೆ.5: ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಶಿಕ್ಷಕರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ‌ ಮಾತನಾಡಿದ ಕಾಲೇಜಿನ
ಪ್ರಾಂಶುಪಾಲ ಡಾ ಅಶ್ವ ರಾಮು ಅವರು
ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕನ ಪಾತ್ರ ಹಿರಿದಾಗಿದೆ ಎಂದರು.
ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರುಸುವ , ಸತ್ಯ ಮಿತ್ಯಗಳನ್ನು ತುಲನೆ ಮಾಡುವಲ್ಲಿ ಶಿಕ್ಷಣ ಕಲಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಜಯದೇವಯ್ಯ ಎಂ ವಿ, ಸಹಾಯಕ ಪ್ರಾಧ್ಯಾಪಕರಾದ ಆಲಂಬಾಷ, ಗಿರಿಜಾ, ನಾಗರಾಜ ರಾವ್, ಶ್ರೀಕಾಂತ್ ಮುನಿ, ಸಂಸ್ಥೆಯ ಲೆಕ್ಕಾಧಿಕಾರಿ ಚಂದ್ರ ಶೇಖರ ನಾಯ್ಡು, ಗ್ರಂಥಾಪಾಲಕ ನೀಲಕಂಠ ಕೆ, ಪ್ರಥಮ ದರ್ಜೆ ಸಹಾಯಕಿ ಜೆ ಸುಲೋಚನ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.
*****

Leave a Reply

Your email address will not be published. Required fields are marked *