ಹ ಬೊ ಹಳ್ಳಿ ವಿಧಾನ ಸಭಾ ಕ್ಷೇತ್ರದ ತೋಟಗಾರಿಕೆ ಬೆಳೆಗಾರರಿಗೆ ಪಾಸ್ ವಿತರಣೆಗೆ ಕ್ರಮ -ಶಾಸಕ‌ಎಸ್.ಭೀಮನಾಯ್ಕ

ಹಗರಿಬೊಮ್ಮನಹಳ್ಳಿ: ಲಾಕ್‌ಡೌನ್ ವೇಳೆ ತೋಟಗಾರಿಕೆ ಬೆಳೆಗಾರರಿಗೆ ತಮ್ಮ ಉತ್ಪಾದನೆಗಳ ಮಾರಾಟಕ್ಕೆ ತೊಂದರೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಮಾರಾಟಕ್ಕೆ ಅಡ್ಡಿಯಾಗದಂತೆ ಪಾಸ್ ವಿತರಿಸಲು ಕ್ರಮ‌ಕೈಗೊಳ್ಳಲಾಗಿದೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.‌ಭೀಮನಾಯ್ಕ ಅವರು ತಿಳಿಸಿದರು. ತಾಲೂಕಿನ ತಹಸೀಲ್ದಾರ್ ಮತ್ತು ತೋಟಗಾರಿಕೆ ಸಹಾಯಕ…

ಅನುದಿನ ಕವನ-೧೨೦, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ವಿನಮ್ರ ವಿನಂತಿ!

ಇದು ನಿಮ್ಮ ಮನದಲ್ಲೂ ಮೂಡಿರುವ ಸಾಲುಗಳ ಕವಿತೆ. ನಿನ್ನೆ-ಮೊನ್ನೆ ಜನರ ಕೊಳ್ಳುಬಾಕತನದ ಹಪಹಪಿಕೆಯನ್ನು ಕಂಡಾಗ ನಿಮ್ಮಲ್ಲೂ ಉದಿಸಿದ ಭಾವಗಳಿಗೆ ಭಾಷ್ಯವಾಗಿದ್ದೇನೆ. ಅಗತ್ಯಕ್ಕಿಂತ ಹೆಚ್ಚಾಗಿ ಖರೀದಿಸುತ್ತಿರುವ, ಅಕ್ಕ-ಪಕ್ಕದವರ ಪರಿವೆಯಿಲ್ಲದೆ ಎಲ್ಲವೂ ನಮಗೇ ಬೇಕೆನ್ನುವ, ಈ ಲಾಕ್ಡೌನು ಮುಗಿಯುವುದೇ ಇಲ್ಲವೇನೋ ಎಂಬಂತೆ ವರ್ಷಕ್ಕಾಗುವಷ್ಟು ಕೂಡಿಟ್ಟುಕೊಳ್ಳುತ್ತಿರುವವರಿಗೆ…

ನನ್ನೂರ ನಕ್ಷತ್ರಗಳು..! -ರಂಹೋ

ಪ್ರತಿದಿನ ಬೆಳಗು,ಬೈಗಿನಲ್ಲಿ ಅಕ್ಕಯ್ಯಾ…ರಂಗಾ…ಅಂತ ಕೂಗುತ್ತ ಬರುತ್ತಿದ್ದ ಆ ಹಿರಿಯ ಜೀವದ ತುಂಬ ಜಾನಪದ ಹಾಡುಗಳ ಮಹಾಪೂರವಿತ್ತು!ಮಾತುಗಳ ತುಂಬ ಅನುಭವಗಳ ಪ್ರಭಾವವಿತ್ತು. ನಮಗೆ ಅಗತ್ಯವಲ್ಲದ ಆದರೆ ಅಕ್ಕಪಕ್ಕದವರು,ಊರವರು ನಮ್ಮನ್ನು ಹೀಯಾಳಿಸಬಾರದನ್ನುವ ಕಾಳಜಿಯಿಂದ ಪಡಶಾಲೆಯ ಹೊಸ್ತಿಲ ಬಳಿ ಕೂರುತ್ತಿದ್ದ ಆಕೆ ಊರಿನ ಎಷ್ಟೋ ತಾಯಂದಿರಿಗೆ…

ನಾಳೆ(ಏ.30) ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆ ಮೆರವಣಿಗೆ, ಸಂಭ್ರಮಾಚರಣೆಗೆ ಅವಕಾಶ ಇಲ್ಲ -:ಎಸ್ಪಿ ಸೈದುಲು ಅಡಾವತ್

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯವು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ (ಏ.30)ರಂದ ನಡೆಯಲಿದೆ. ಕೋವಿಡ್-19 ಸೋಂಕಿನ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವ ಕಾರಣ, ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು…

ಅನುದಿನ ಕವನ-೧೧೯ ಕವಯತ್ರಿ: ಡಾ.ಅಕ್ಕಿ ಸುಜಾತ, ಕವನದ ಶೀರ್ಷಿಕೆ: ನನ್ನಮ್ಮ

ನಮ್ಮಮ್ಮ…. ಕಲ್ಮಶಗಳ ನುಂಗಿ ತಿಳಿಯಾದ ಗಟ್ಟಿ ನೆಲದ ಗಂಗೆ ಹುಟ್ಟು ತಬ್ಬಲಿ ಪ್ಲೇಗು…ಮಾರ್ಕ್…ಬ್ಯಾನ್ಯಾಗ ಬೆಳೆದುಳಿದ ಹಿರಿಯಗೆ ಕಿರಿಪತ್ನಿ ಮೂರು ಮಕ್ಕಳಲಿ ಬದುಕುಳಿದೊಬ್ಬನಿಗಾಗಿ ಬಂಡಿಯನೆಳೆದ ಒಂಟಿ ಎತ್ತು ಸರ ಹೊತ್ತಿನಲ್ಲಿ ಕಚ್ಚೆಹಾಕಿ ಮುಳ್ಳುನೆಲ್ಲಿಗೆ ನೀರಾಸಿ ಎಲೆದೋಡ.ತೊಗರಿ,ಗುರೆಳ್ಳು,ಹೆಸರು, ಸಜ್ಜೆ,ನವಣಿ.ಹುಳ್ಳಿಗಳ ನಿಗಾ ವಹಿಸಿ್ ಒಂಟಿ ಹೆಣ್ಣ…

ಅನುದಿನ ಕವನ-೧೧೮ ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಗಜಲ್(ಬರಬಾರದೆ ಗೆಳತಿ)

ಗಜಲ್ – ಒಲವಿನ ಓಲೆಗಳೆಲ್ಲ ಗರಿಬಿಚ್ಚಿ ನರ್ತಿಸುತಿವೆ ಬರಬಾರದೆ ಗೆಳತಿ ಮೈಮನದ ಸುಳಿಗಳೆಲ್ಲ ವೀಣೆಯಾಗಿ ಹಾಡುತಿವೆ ಬರಬಾರದೆ ಗೆಳತಿ – ನಿನ್ನ ಕಣ್ಣ ಕಂಬನಿಯಗುಂಟ ನನ್ನೊಲವು ಜಾರಿ ಹೋದರೇನಾಯ್ತು ಕಣ್ಣ ಪ್ರತಿ ಹನಿಗಳೂ ಪ್ರೇಮಗೀತೆಯ ಹಾಡುತಿವೆ ಬರಬಾರದೆ ಗೆಳತಿ – ಖಾಲಿಯಾದ…

ಬಳ್ಳಾರಿ-ವಿಜಯನಗರ ಜಿಲ್ಲೆಗಳ ಕೋವಿಡ್ ಸ್ಥಿತಿಗತಿ: ವಿಸಿ ಮೂಲಕ ಪರಿಶೀಲಿಸಿದ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ

ಬಳ್ಳಾರಿ: ಕೋವಿಡ್ ಸೊಂಕಿತರಾಗಿ ಹೋಂಐಸೋಲೇಶನ್‍ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಿ ಮತ್ತು ಗುಣಮುಖರಾಗುವವರೆಗೆ ಅವರ ಆರೋಗ್ಯದ ಮೇಲೆ ಸದಾ ನಿಗಾವಹಿಸ ಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಅವರು ಬುಧವಾರ ಬಳ್ಳಾರಿ ಮತ್ತು ವಿಜಯನಗರ…

ಮಾಧ್ಯಮಲೋಕ-೧೧ ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು

‘ಕುವೆಂಪು ಮತ್ತು ವೈಚಾರಿಕತೆ’ -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಇಂದಿನ ವಿಶ್ವವನ್ನು ಆಳುವುದು ವೈಚಾರಿಕತೆಯೇ ಹೊರತು, ವ್ಯಕ್ತಿ ಅಥವಾ ಧರ್ಮಗಳಲ್ಲ. ಕುವೆಂಪು ಇಂದು ಜಗತ್ತಿನಲ್ಲಿ ಇಲ್ಲದಿದ್ದರೂ ಕೂಡ ಅವರ ವೈಚಾರಿಕತೆಗಳು ಮತ್ತು ವಿಶ್ವಮಾನವ ಸಂದೇಶ ಇಂದಿಗೂ ಜೀವಂತವಾಗಿವೆ. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ…

ಅನುದಿನ‌ಕವನ-೧೧೭ ಕವಿ: ಎ ಎನ್‌ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ವಿನಂತಿ

“ಇಂದು ( ಏ.27) ಸಂಜೆಯಿಂದ ಮತ್ತೊಮ್ಮೆ ಲಾಕ್ ಡೌನ್ ಎಂಬ ಅನಿವಾರ್ಯ ಶಿಕ್ಷೆ. ಕಳೆದ ವರ್ಷದ ದುರಂತಗಳಿಂದ ಪಾಠ ಕಲಿಯದೆ, ಉಡಾಫೆ, ಅಜಾಗ್ರತೆಗಳಿಂದ ಮೆರೆದು ನಮಗೆ ನಾವೇ ತಂದುಕೊಂಡ ಪರಿಸ್ಥಿತಿ ಇದು. ಅವರಿವರನ್ನು, ಅಧಿಕಾರಸ್ಥರನ್ನು ಹಳಿದು ಪ್ರಯೋಜನವಿಲ್ಲ. ಈಗಲಾದರೂ ಕೊರೋನಾ ನಿಯಮಾವಳಿಗಳನ್ನು…

ಅನುದಿನ ಕವನ-೧೧೬, ಕವಯತ್ರಿ:ಧರಣೀಪ್ರಿಯೆ, ಕವನದ ಶೀರ್ಷಿಕೆ: ಜೊತೆ ಜೊತೆಯಲಿ

                           ಜೊತೆ ಜೊತೆಯಲಿ (ಭಾಮಿನಿ ಷಟ್ಪದಿಯಲ್ಲಿ) ************** ಬಿಸಿಲುಯಿದ್ದರು ಮಳೆಯು ಬಂದರು ಕುಸಿದುಹೋಗದೆ ಜೊತೆಯಲಿರುತಲಿ ಬೆಸೆದ ಬಂಧದಿ ನಾವು ಜಗದಲಿ ಜೋಡಿಯಾಗಿರಲು| ಹಸಿದುಕೊಂಡರು ಹರುಷವಿದ್ದರು…