ನನಗೆ ಕನ್ನಡ ಶಿಕ್ಷಕಿಯ ಸ್ಥಾನವನ್ನು ಕರುಣಿಸಿ ನನ್ನ ಲೌಕಿಕ ಅಗತ್ಯಗಳಾದ ಅನ್ನ ವಸ್ತ್ರ ಮತ್ತು ನನ್ನ ಆತ್ಮದ ಪಯಣದ ಹೊಳಪಿಗೆ ಅಕ್ಷರರೂಪಿಯಾಗಿ ಜೊತೆಗಿರುವ ತಾಯಿ ಭುವನೇಶ್ವರಿಗೆ ನನ್ನ ಅಂತರಾಳದ ಕಾವ್ಯಾಕ್ಷತೆ ಸಮರ್ಪಿತ. 🌺👉ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು👈💐 -ಹಟ್ಟಿ ಸಾವಿತ್ರಿ…
Category: ಅನುದಿನ ಕವನ
ಅನುದಿನ ಕವನ-೬೬೯, ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ರಾಯಚೂರು ಜಿಲ್ಲೆ, ಕವನದ ಶೀರ್ಷಿಕೆ: ಕನ್ನಡದ ಕಂದ
🌺🙏ಸಮಸ್ತ ಸಹೃದಯಿ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು🙏🏻💐 ಕನ್ನಡದ ಕಂದ ಕಂದನಾ ತೊದಲು ನುಡಿ , ಕನ್ನಡಕ್ಕೇ ಮುನ್ನುಡಿ ಮಾತೃಭಾಷೆ ಮರೆಯದಿರಿ ನಮಗಿದೋ ಜೀವನಾಡಿ. ಮಾತೆಯ ಮಡಿಲ ಮಮತೆಯಲ್ಲಿ ಮುಸುಮುಸು ಕಿರು ನಗುವಿನಲ್ಲಿ ಮೃಧುವಾಗಿ ಅರಳಿತು ಕನ್ನಡ ಕಂದನಾ ತೊದಲು…
ಅನುದಿನ ಕವನ-೬೬೮, ಹಿರಿಯ ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕಾಲ ಬದಲಾಗಿಲ್ಲ….!
ಕಾಲ ಬದಲಾಗಿಲ್ಲ…..! ಕಾಲ ಬದಲಾಗಿಲ್ಲ ಎಂದಿನಂತೆಯೇ ಇದೆ! ರವಿ ಮೂಡಣದಲ್ಲಿ ಉದಯಿಸುತ್ತಾನೆ ಪಡುವಣದಲ್ಲಿ ವಿಶ್ರಮಿಸುತ್ತಾನೆ ಚಂದ್ರ ಬೆಳಗುತ್ತಾನೆ ನಕ್ಷತ್ರಗಳು ಮಿನುಗುತ್ತಲೇ ಇವೆ ಕಾಲ ಬದಲಾಗಿಲ್ಲ ಎಂದಿನಂತೆಯೇ ಇದೆ || ಹುಲಿ ಸಿಂಹಗಳು ಘರ್ಜಿಸುವುದ ಮರೆತಿಲ್ಲ ನಾಯಿ ನರಿಗಳು ಊಳಿಡುತ್ತಲಿವೆ ಕೋಗಿಲೆಯ ನಿನಾದ…
ಅನುದಿನ ಕವನ-೬೬೭, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಅಪ್ಪುವಿಗೆ ಅಕ್ಷರ ನಮನ
ಕರ್ನಾಟಕ ರತ್ನ, ಡಾ. ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ (ಅ. 29) ಒಂದು ವರ್ಷ. ಜನಮಾನಸದಲ್ಲಿ ಅಚ್ಚಹಸಿರಾಗಿರುವ ಡಾ. ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ತಮ್ಮ ಹನಿಗವನಗಳ ಮೂಲಕ ಅಕ್ಷರ ನಮನ ಸಲ್ಲಿಸಿದ್ದಾರೆ ಕವಯತ್ರಿ ಶೋಭ ಮಲ್ಕಿಒಡೆಯರ್ ಅವರು! *ಸುಕೃತ*…
ಅನುದಿನ ಕವನ-೬೬೬, ಕವಯತ್ರಿ:ರೇಣುಕಾ ರಮಾನಂದ, ಉತ್ತರ ಕನ್ನಡ ಕವನದ ಶೀರ್ಷಿಕೆ:ಅವ್ವ ಮತ್ತು ಬೆಕ್ಕು
ಅವ್ವ ಮತ್ತು ಬೆಕ್ಕು ಅವ್ವ ಮೆಹನತ್ ಮಾಡಿದ ಗದ್ದೆಯಲ್ಲೀಗ ಗೆದ್ದಲುಗಳ …
ಅನುದಿನ ಕವನ-೬೬೫, ಕವಿ:ಶಶಿ ಸಂಪಳ್ಳಿ, ಸಾಗರ, ಕವನದ ಶೀರ್ಷಿಕೆ: ಮನುಷ್ಯನೊಬ್ಬನ ಸ್ವಗತ
ಮನುಷ್ಯನೊಬ್ಬನ ಸ್ವಗತ ನಾನೊಂದು ಮುತ್ತುಗವಾಗಿದ್ದೆ; ನೆಲದ ನಂಟು ಗಟ್ಟಿಯಾಗಿಟ್ಟುಕೊಂಡೂ …
ಅನುದಿನ ಕವನ-೬೬೪, ಕವಯತ್ರಿ: ರಂಹೊ(ರಂಗಮ್ಮಹೊದೇಕಲ್), ತುಮಕೂರು, ಕವನದ ಶೀರ್ಷಿಕೆ: ಅವ್ವ ಕೊಟ್ಟ ಬೆಳಕಿನ ಪದ
ಅವ್ವ ಕೊಟ್ಟ ಬೆಳಕಿನ ಪದ *ಕತ್ಲಿದ್ದ ಕಡೆ ಪುಟ್ದೊಂದು ದೀಪವಾಗು ನಿನ್ ಕತ್ಲೂ ಕಳೀತದೆ! *ಸಂಕ್ಟ ಹೇಳೋರ್ಗೆ ಕಿವಿಯಾಗು ನಿನ್ ದುಗುಡ ಕಡಿಮೆಯಾಗ್ತದೆ! *ಕಣ್ಣೀರಿಗೆ ಕಣ್ಣೀರಾಗು ನಗು ಬಿತ್ತೋದು ಹೇಗಂತ ಹೊಳೀತದೆ! *ದೀಪ ಹಚ್ಲೇಬೇಕಂತ ಹಠ ಬೇಡ ಬಿಡು ಯಾರ್ದಾದ್ರು ಕಣ್ಣಲ್ಲಿ…
ಅನುದಿನ ಕವನ-೬೬೩, ಕವಿ: ಪಿ ಬಿ ಕೋಟೂರ, ಬೆಂಗಳೂರು, ಕವನದ ಶೀರ್ಷಿಕೆ: ದೀಪಾವಳಿ
ದೀಪಾವಳಿ ಕಂದನ ಕಲರವದಲ್ಲಿ ಅಂಧನ ಅರಿವಿನಲ್ಲಿ ಚೆಂದನ ಚೆಲುವಿನಲ್ಲಿ ಬೆಳಗುತಿದೆ ಚೆಂಬೆಳಕಿನ ದೀಪಾವಳಿ ತಾಯಿಯ ಪ್ರೀತಿಯಲ್ಲಿ ತಂದೆಯ ನೀತಿಯಲ್ಲಿ ಬಂಧುಗಳ ಸಾಥಿನಲ್ಲಿ ಬೆಳಗುತಿದೆ ಚೆಂಬೆಳಕಿನ ದೀಪಾವಳಿ ವೀಣೆಯ ರಾಗದಲ್ಲಿ ಭಾನುವಿನ ಯೋಗದಲ್ಲಿ ತನುವಿನ ತನ್ಮಯತೆಯಲ್ಲಿ ಬೆಳಗುತಿದೆ ಚೆಂಬೆಳಕಿನ ದೀಪಾವಳಿ ವೈದ್ಯನ ಹೃದಯದಲಿ…
ಅನುದಿನ ಕವನ-೬೬೨, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ದೀಪಾವಳಿ ಹಣತೆ (ಗಜಲ್), ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
ದೀಪಾವಳಿ ಹಣತೆ (ಗಝಲ್) ತಮವ ಸರಿಸಿ ಬೆಳಕಿನೆಡೆಗೆ ಸನ್ಮಾರ್ಗದಲ್ಲಿ ನಡೆಯುತ ಭಕ್ತಿಯಿಂದ ಬೆಳಗಿಸೋಣ ದೀಪಾವಳಿಯ ಹಣತೆ // ಮನದ ದುಗುಡ ದುಮ್ಮಾನ, ವೈಮನಸುಗಳನೆಲ್ಲವ ಕಿತ್ತೊಗೆದು ಸಂತಸ – ಸಂಭ್ರಮದಿಂದ ಬೆಳಗಿಸೋಣ ದೀಪಾವಳಿಯ ಹಣತೆ // ದ್ವೇಷ – ಅಸೂಯೆ, ದುಷ್ಟತನವನ್ನೆಲ್ಲ ಮರೆತು…
ಅನುದಿನ ಕವನ-೬೬೧, ಕವಿ: ಜಬೀವುಲ್ಲಾ ಎಮ್. ಅಸದ್ ಮೊಳಕಾಲ್ಮುರು, ಕವನದ ಶೀರ್ಷಿಕೆ: ಹುಡುಕುವುದೆಂದರೆ….
ಹುಡುಕುವುದೆಂದರೆ… ಹುಡುಕುವುದೆಂದರೆ… ತಡಕಾಡುವುದಲ್ಲ ಅಂತರಂಗ ಶೋಧಿಸಿ ಕಂಡುಕೊಳ್ಳುವುದು ಕತ್ತಲಲ್ಲಿ ಕರಚಾಚಿ ಅಲೆದಂತಲ್ಲ ಬೆಳಕ ಹೊಂಗಿರಣಕೆ ಹಕ್ಕಿಯಾಗುವುದು ಕನಸ ಕಿರುಬೆರಳ ಪಿಡಿದು ನಡೆದಂತಲ್ಲ ಕಾಣದ ಸತ್ಯಕ್ಕೆ ಎದುರಾಗುವುದು ಕಣ್ಣು ಮುಚ್ಚಿ ಲೋಕವ ಕಾಣುವುದಲ್ಲ ಅರಿವು ಬಿಡಿಸಿ ಮನಗಾಣುವುದು ಇದೆ ಎಂದರೆ, ಇದೆ ಇಲ್ಲದ್ದನ್ನು…
