👉ಚಿಂತೆಗೆ ಕೊನೆಯಿದೆ👈 ಕಣ್ಣು ತೆರೆದಾಗ ಕಾಣುವಂತಾದ್ದೆಲ್ಲ ಬಿಟ್ಟು ಹೋಗುವಂತಾದ್ದು; ಯಾಕೆಂದರೆ: ಭೂಮಿಯ ಗುಣವೇ ಅಂಥಾದ್ದು. ಆಕಾಶ ಹೆರುವ ಬಿಂದು ಸಿಂಧುವಿನೊಳಗೆ ಒಂದೇ ದ್ರವ್ಯದ ಸಾರ; ಆದರೂ ಸಿಂಧುವಿನ ಮೇಲೆ ತೇಲುವ ಅಲೆಗಳಂತೆ ಬಿಂದುವಿನ ಮೇಲೆ ಜೀವಗಳ ಸ್ವಗತ. ಕಾಮ ಚೇಷ್ಟೆಯಲಿ ಕಾಡು…
Category: ಅನುದಿನ ಕವನ
ಅನುದಿನ ಕವನ-೬೫೯, ಕವಿ: ವಿಲ್ಸನ್ ಕಟೀಲ್, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ನಿಷೇಧಕ್ಕೊಳಪ್ಪಟ್ಟ ಒಂದು ನೋಟು
ಬಳ್ಳಾರಿಯಲ್ಲಿ ಆಯೋಜಿಸಿರುವ ಸಂಗಂ ವಿಶ್ವಕವಿ ಸಮ್ಮೇಳನದಲ್ಲಿ ಕಾವ್ಯಪ್ರಿಯರಿಂದ ಅಪಾರ ಮೆಚ್ಚುಗೆ ಗಳಿಸಿದ ಕವನ….👇 ನಿಷೇಧಕ್ಕೊಳಪ್ಪಟ್ಟ ಒಂದು ನೋಟು ನಿಷೇಧಕ್ಕೊಳಪಟ್ಟ ಒಂದು ನೋಟು ನನ್ನಲ್ಲಿನ್ನೂ ಭದ್ರವಾಗಿದೆ! ಮೀನು ಮಾರುವ ಹೆಂಗಸಿನ ಬೆವರ ಉಪ್ಪು, ಹೂ ಮಾರುವ ಹುಡುಗಿಯ ಬೆರಳ ಕಂಪು, ಮಾಂಸದಂಗಡಿಯವನ ನೆತ್ತರ…
ಅನುದಿನ ಕವನ-೬೫೮, ಕವಿ:ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ: ಕೈವಶವಾಗಬೇಕು ಕಾಲ.!
“ಗಡಿಯಾರದೊಳಗೆ ಚಿಕ್ಕ ಮುಳ್ಳು ಒಂದು ಹೆಜ್ಜೆ ಇಡುವಷ್ಟರಲ್ಲಿ ದೊಡ್ಡ ಮುಳ್ಳು ಒಂದು ಸುತ್ತು ಬಂದು ಬಿಟ್ಟಿರುತ್ತದೆ. ಆ ಒಂದು ಸುತ್ತಿನಲ್ಲಿ ಏನೆಲ್ಲಾ ಸಂಗತಿಗಳು, ಎಷ್ಟೆಲ್ಲಾ ಸಂತಸಗಳು ಘಟಿಸಿ ಹೋಗುತ್ತವೆ. ಇಲ್ಲ ಸಲ್ಲದ ಯೋಚನೆ ಯಾತನೆಗಳಲಿ ಪರವಶವಾಗದೆ, ಪ್ರತಿ ಕ್ಷಣಗಳನು ಕೈವಶ ಮಾಡಿಕೊಂಡು…
ಅನುದಿನ ಕವನ-೬೫೭, ಕವಯತ್ರಿ: ಡಾ.ಸಿ. ನಂದಿನಿ, ಬೆಂಗಳೂರು, ಕವನದ ಶೀರ್ಷಿಕೆ:ದೂರವಾಗುವುದೆಂದರೆ…..!
ದೂರವಾಗುವುದೆಂದರೆ…..! ದೂರವಾಗುವುದೆಂದರೆ ಅಜ್ಞಾತ ಬೆಳದಿಂಗಳಲ್ಲಿ ವರುಷಗಳಿಗೊಮ್ಮೆ ಅರಳುವ ಹೂಗಳ ರಾಶಿಯ ಬೆಟ್ಟದ ನಡುವೆ ಹಸ್ತ ಬೆಸೆದು ನಡೆವ ಕನಸ ಕಂಡದ್ದು ನನಸಾಗಲಿಲ್ಲವೆಂಬ ನೋವಿಗೆ ಭಾನು ಕಣ್ಣೀರಿಟ್ಟಂತೆ ದೂರವಾಗಿ ಮರೆಯಾಗುವುದೆಂದರೆ ಬಿರು ಬೇಸಿಗೆಯಲಿ ನೆತ್ತಿಮೇಲೆ ಸುಡುವ ಸೂರ್ಯನಿಗೊಂದು ಮೋಡದ ಕೊಡೆಯಿಡಿಯಲಾಗದೆ ಗ್ರಹಣ ಸೃಷ್ಟಿಸುವ…
ಅನುದಿನ ಕವನ-೬೫೬, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ನೋಟಿನ ಘಮ
ನೋಟಿನ ಘಮ ಕುರುಡು ಕಾಂಚಾಣದ ಕರುಣೆಗೆ ನಿಯತ್ತು ಬಿಕರಿಯಾಗಿದೆ ಇಂದು. ಧನಿಕರ ಬೂಟು ನೆಕ್ಕುವ ಲಾಲಸಿತನ ಬಡವರ ರಕ್ತ ಹೀರುತ್ತಿದೆ! ಕಛೇರಿಯ ಕಡತಗಳಿಗೂ ನೋಟಿನ ಘಮ ಅಂಟಿಕೊಂಡಿದೆ ಟೇಬಲ್ಲುಗಳ ಅಡಿಯಲ್ಲಿ ನಡೆಯುವ ಬ್ರಹ್ಮಾಂಡ ಭ್ರಷ್ಟತೆ ಬೆಚ್ಚಿ ಬೀಳಿಸುತ್ತದೆ. ಜಾಣ ಕುರುಡರಿಗೆ ಇದೆಲ್ಲ…
ಅನುದಿನ ಕವನ-೬೫೫, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಪ್ರಶಸ್ತಿ
ಪ್ರಶಸ್ತಿ ಪ್ರಶಸ್ತಿ ಬೇಕಾ ಪ್ರಶಸ್ತಿ !? ಬೇಕೆಂದು ಬಯಸಿದರೆ ಯಾರಿಗೂ ಸಿಗುವಂತಹ ಪ್ರಶಸ್ತಿ ಪದವಿ ಬೇಕಿಲ್ಲ ಪಿ. ಹೆಚ್. ಡಿ ಹಂಗಿಲ್ಲ ! ಮಾರಾಟಕ್ಕಿದೆ ಡಾಕ್ಟರೇಟ್ ಕೊಟ್ಟು ಪಡೆಯಬಹುದಂತೆ ಇಂತಿಷ್ಟು ರೇಟ್ ! ಎಲ್ಲಾ ಕ್ಷೇತ್ರದಲ್ಲೂ ಇರುವರು ಸಾಧಕರು ಅವರನ್ನು ಗುರುತಿಸುವವರು…
ಅನುದಿನ ಕವನ-೬೫೪, ಕವಯತ್ರಿ: ತಿ. ನ. ಲಕ್ಷ್ಮೀಮಲ್ಲಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಚಿಗುರು
ಚಿಗುರು ನನ್ನ ಪ್ರೀತಿ ಬಳ್ಳಿ ಚಿಗುರಿದೆ. ಚಿಗುರ ಚಿಮ್ಮಿ ಮೊಗ್ಗು ಹೂವು ತುಂಬಿ ಅಂದು ಇಂದು ಕಾಣ್ವ ಕನಸು ಮುಂದೆ ಸಾಗಿ ನನಸು ಎಂಬ ಆಸೆ ಮೂಡಿದೆ. ನನ್ನ ಮನದ ಕಪ್ಪ ಮುಗಿಲು ಕರಗಿದೆ. ಹರ್ಷವೆಲ್ಲ ವರ್ಷವಾಗಿ ಸುರಿಯುತಿರಲು ನನ್ನ ಮನದ…
ಅನುದಿನ ಕವನ-೬೫೩, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ ಕಾವ್ಯ ಪ್ರಕಾರ: ಗಜಲ್
ಗಝಲ್ ನೋವಿನಲ್ಲಿ ನರಳುತ್ತ ಬೆಂಡಾಗಿದ್ದೇನೆ ಒಪ್ಪಿಕೋ ನನ್ನ ತೊರೆಯ ನೀರಿನಲ್ಲಿ ಜೊಂಡಾಗಿದ್ದೇನೆ ಒಪ್ಪಿಕೋ ನನ್ನ ಇರುಳು ಹಗಲುಗಳೆರಡು ಸವೆಯದೆ ಕೂತಿವೆಯೇಕೆ ಕಾಂತಾರದ ಕಲ್ಲಿನಂತೆ ಭಂಡಾಗಿದ್ದೇನೆ ಒಪ್ಪಿಕೋ ನನ್ನ ಬೆರಗುಗೊಳಿಸಿ ಹೊರಟೆ ಹೃದಯವನ್ನು ಬರಿದು ಮಾಡಿ ಹಠಮಾರಿ ಮಗುವಂತೆ ಮೊಂಡಾಗಿದ್ದೇನೆ ಒಪ್ಪಿಕೋ ನನ್ನ…
ಅನುದಿನ ಕವನ-೬೫೨, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಯಾಕೆ ಜಾತಿ….!?
ಯಾಕೆ ಜಾತಿ…? ಗಂಧಕ್ಕಿಲ್ಲದ ಗರಿಕೆಗಿಲ್ಲದ ಗಾಳಿಗಿಲ್ಲದ ಜಾತಿ ನೋಡಿ ಮಾತುಬರುವ ಮನುಷ್ಯನಿಗಿದೆ….! ಪ್ರಾಣಿಗಿಲ್ಲದ ಪಕ್ಷಿಗಿಲ್ಲದ ಕಾಡುಮೃಗಗಳಿಗಿಲ್ಲದ ಜಾತಿ ನೋಡಿ ಮಾತನಾಡುವ ಮನುಷ್ಯನಿಗಿದೆ….! ಕಾಡಿಗಿರದ ಬಾನಿಗಿರದ ಧರೆಗೂ ಇರದ ಜಾತಿ ನೋಡಿ ಮಾತು ಕಲಿತಿರುವ ಮನುಷ್ಯನಿಗಿದೆ….! ಹೂವಿಗಿರದ ನಾರಿಗಿರದ ಕಡಲಿಗಿರದ ಜಾತಿ ನೋಡಿ…
ಅನುದಿನ ಕವನ-೬೫೧, ಕವಿ: ಬೇಲೂರು ರಘುನಂದನ್, ಬೆಂಗಳೂರು, ಕವನದ ಶೀರ್ಷಿಕೆ: ತಾಯಿ ಮಗುವಿಗೆ ಕಟಕಟೆಯ ಹಂಗಿಲ್ಲ
ತಾಯಿ ಮಗುವಿಗೆ ಕಟಕಟೆಯ ಹಂಗಿಲ್ಲ ತಿಂದುಂಡು ತೇಗಿ ಕಬಳಿಸುವರಿಗೆ ಬಲಿ ಎಂದರೆ ರಕ್ತವೇ ಬರಬೇಕಾಗಿಲ್ಲ ದೇಹವನ್ನು ತುಂಡರಿಸಿ ಸಿಗಿಯಬೇಕಿಲ್ಲವೆಂದು ಗೊತ್ತಿಲ್ಲ ತನ್ನ ತೆವಲಿಗೆ ಸಕಲವನು ಆಪೋಷಣೆ ಮಾಡುವವರಿಗೆ ಹಲ್ಲೆ ಎಂದರೆ ಮೈ ಮುರಿಯುವಂತೆ ಹೊಡೆದು ಹಿಂಸೆ ಮಾಡಬೇಕಿಲ್ಲವೆಂದು ತಿಳಿದಿಲ್ಲ ಎಲ್ಲವೆಲ್ಲವನ್ನೂ ಹೀರಿ…
