🍀🌺🍀💐ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು🍀💐🍀🌺 (ಸಂಪಾದಕರು) ***** ಮುಚ್ಚಿದ ಬಾಗಿಲು ಅಂದದ ಕುಸುರಿನ ಚೆಂದದ ಮೆರುಗಿನ ಸಂದು ಬಿಡದೆ ಮುಚ್ಚಿದ ಬಾಗಿಲು ಅವಳು ಏನುಂಟು ಏನಿಲ್ಲ ಮುಚ್ಚಿದ ಬಾಗಿಲ ಹಿಂದೆ ಅದು ಬಲು ಅನೂಹ್ಯ ಎಟುಕದು ಕೈಗೆ ಮುಚ್ಚಿದ ಬಾಗಿಲ…
Category: ಅನುದಿನ ಕವನ
ಅನುದಿನ ಕವನ-೧೧೬೨, ಕವಿ: ಡಾ.ಜೆ.ಪಿ ದೊಡ್ಡಮನಿ, ಅಥಣಿ, ಕವನದ ಶೀರ್ಷಿಕೆ:ನನ್ನೊಳಗಿನ ಪ್ರತಿಧ್ವನಿ
ನನ್ನೊಳಗಿನ ಪ್ರತಿಧ್ವನಿ ವಿಶ್ವವಿಖ್ಯಾತ ಗೋಡೆ- ಗುಂಬಜಗಳ ಕಂಡ ನಾನು ಎಂದೂ ಆಶ್ಚರ್ಯಗೊಂಡಿಲ್ಲ ಬೆರಗುಗೊಂಡಿಲ್ಲ ಕ್ಷಣ ಹೊತ್ತು ಉಸಿರು ಹಿಡಿದು ಮೂಗಿನ ತುದಿಯಲಿ ಬೆರಳು ಕುಣಿಸಿದುದಿಲ್ಲ ಅವುಗಳೆತ್ತರದ ನೆರಳು ನೆಲಕ್ಕೆ ಹೊರಳಿದಾಗ ಚಾಟಿ ಏಟು ತಿನ್ನುತ್ತ ಕಲ್ಲು ಮರಳು ಹೊತ್ತು ಮೇಲೆ ಸಾಗಿಸುತ್ತ…
ಅನುದಿನ ಕವನ-೧೧೬೦, ಹಿರಿಯ ಕವಿ: ಸಿದ್ಧರಾಮಕೂಡ್ಲಿಗಿ, ವಿಜಯನಗರ ಜಿ., ಕಾವ್ಯ ಪ್ರಕಾರ:ಗಜಲ್
ಗಜಲ್ ಬೆಳಕಿನ ನೋಟವನು ನೀಡಲೆಂದೇ ಬಂದೆ ನೀನು ಕತ್ತಲೆಯಾದ ಈ ಬಾಳಿನಲಿ ಚಂದನೆಯ ದಾರಿಯಲಿ ಕೈಹಿಡಿದು ನಡೆದೆ ನೀನು ದಿಕ್ಕುಗಾಣದ ಈ ಬಾಳಿನಲಿ ಎಷ್ಟೋ ಪ್ರೇಮದ ಹೂಗಳು ಅರಳಿದವು ಎಲ್ಲರೂ ಅರಿವ ತೆರದಿ ಈ ಲೋಕದಲಿ ಯಾರೂ ಅರಿಯದ ಒಲವಿನ ಹೂವರಳಿಸಿದೆ…
ಅನುದಿನ ಕವನ-೧೧೫೯, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ನೀಲಿ ಗಗನ
ನೀಲಿ ಗಗನ… ನೀಲಿ ಗಗನ ನಮಗೆ ಸ್ವಾಭಿಮಾನ ತುಂಬಿದ ನಮ್ ಯಜಮಾನ ನಿಮಗೆ ಕೋಟಿ ನಮನ ನೀವೆ ನಮ್ಮ ಜನ ಕಾಯುವ ನಮ್ ಯಜಮಾನ ನೀನೆ ಬಾಬಾ ಅಂಬೇಡ್ಕರ ನಮ್ಮ ಯಜಮಾನ ಬಾಬಾ ಅಂಬೇಡ್ಕರ ಜೈ ಭೀಮ ಬಾಬಾ ಸಾಹೇಬ ಅಂಬೇಡ್ಕರ……
ಅನುದಿನ ಕವನ-೧೧೫೮, ಯುವ ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ, ಕವನದ ಶೀರ್ಷಿಕೆ:ಒಂದು ಆಪ್ತ ಪದ್ಯ
ಒಂದು ಆಪ್ತ ಪದ್ಯ ಎಷ್ಟು ಹತ್ತಿರ ಹತ್ತಿರವಿದ್ದೆವು ಉಸಿರು ಉಸಿರು ಬೆಸೆದಕೊಂಡು ಹೊಸ ಹೆಸರು ಚಿಗುರಿದಂತೆ ಎಷ್ಟು ಆಪ್ತವಾಗಿ ಪಿಸುಗಟ್ಟಿದ್ದೆವು ಮಾತಿನ ಕಿವಿ ತೆರೆದುಕೊಂಡು ಹೊಸ ಮೌನ ಮಿಳಿತದಂತೆ ಎಷ್ಟು ಆಪ್ತವಾಗಿ ಪಿಸುಗಟ್ಟಿದ್ದೆವು ಮಾತಿನ ಕಿವಿ ತೆರೆದುಕೊಂಡು ಹೊಸ ಮೌನ ಮಿಳಿತದಂತೆ…
ಅನುದಿನ ಕವನ-೧೧೫೭, ಕವಿ:ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಅರೆ ಬರೆ ಸಾಲುಗಳು
ಅರೆ ಬರೆ ಸಾಲುಗಳು ತನ್ನ ಬೆಡಗು ಬಿನ್ನಾಣ ಬಿಂಕಕ್ಕೆ ತಾನೇ ಮರುಳಾಗಿರುವಳು ಬಟ್ಟೆಯಂಗಡಿ ಎದುರಿನ ಮೇನ್ ಕಿನ್ ಚೆಲುವೆ. ತನ್ನ ಪದಗಳ ಡೊಂಕಿಗೆ ತಾನೇ ಬೆರಗಾಗುವುದು ಕವಿತೆ. ಗಾಢ ನಿದ್ದೆಯೊಳೂ ಹಸಿದ ಕಣ್ಣೊಂದು ಹಿಂಬಾಲಿಸುತಿದೆ ದೀನ ನ ಮನೆಯ ದೀಪ ಅವನ…
ಅನುದಿನ ಕವನ-೧೧೫೬, ಕವಯಿತ್ರಿ: ಶ್ರೀದೇವಿ ಕೆರೆಮನೆ, ಅಂಕೋಲ, ಕವನದ ಶೀರ್ಷಿಕೆ: ಕಡಲು ಕಾನನದ ನಡುವೆ
ಕಡಲು ಕಾನನದ ನಡುವೆ ನನಗೆ ನೀನು ನಿನಗೆ ನಾನು ಏನೆಂದರೆ ಏನೂ ಅಲ್ಲವೆಂಬುದು ನನಗೂ ತಿಳಿದಿದೆ, ನಿನಗೂ ಸಹ ಏನಾದರೂ ಆಗಿ ಬಿಡಬಹುದಾದ ಸಂದರ್ಭವನ್ನು ಈ ಜಗತ್ತು ನಾಜೂಕಾಗಿ ತಡೆಹಿಡಿದು ನಮ್ಮಿಬ್ಬರ ನಡುವೆ ಕಂಡೂ ಕಾಣದಂತಹ ಪರದೆಯನ್ನಿಟ್ಟಿದೆ. ಪರದೆಯ ಅತ್ತ ಕಡೆಯಿಂದ…
ಅನುದಿನ ಕವನ-೧೧೫೫, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ಪ್ರೇಮ ಧ್ಯಾನ
ಪ್ರೇಮ ಧ್ಯಾನ ಪ್ರೇಮ ದ್ಯಾನದಲ್ಲಿ ನಿಂದ ಚಿರ ಬಿಂಬ ಅವನದೆಂದು ಪೊಳ್ಳು ಮಾತಿಂದ ನಂಬಿಸಲಾರಳು ಅವನನ್ನು, ತನ್ನನ್ನೂ ಒಲವ ನೆಲದಲಿ ‘ಕೈ ಹಿಡಿದು ನಡೆದಳೆಂ’ದರೆ ಅದು ಆತ್ಮ ವಂಚನೆಯಲ್ಲದೆ ಮತ್ತೇನು! ಅವನಲ್ಲದ ಅವನನ್ನು ಅವನೇ ಎಂದರೆ ಅವಳು ಅವನಿಗೆ ಮಾಡುವ ವಂಚನೆಯೆ…
ಅನುದಿನ ಕವನ-೧೧೫೪, ಹಿರಿಯ ಕವಿ: ಎಂ. ಎಸ್.ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಅಜ್ಜಿ
ಅಜ್ಜಿ ನೆನಪು ಮಾಡಿಕೊಳ್ಳುತ್ತಿರುತ್ತೇನೆ ನನ್ನ ಅಜ್ಜಿಯನ್ನು. ಅಜ್ಜಿ ತೀರಿಹೋಗಿ ಅದೆಷ್ಟೋ ವರ್ಷಗಳಾದವು; ನಾವೆಲ್ಲ ಅಜ್ಜಿಯನ್ನು ಅವ್ವ ಎಂದು ಕರೆಯುತ್ತಿದ್ದೆವು. ಹಾಗೆ ಕರೆಯುವುದಕ್ಕೆ ಬೇರೊಂದು ಕಥೆಯೇ ಇದೆ. ಅದೆಲ್ಲ ಇರಲಿ; ಇನ್ನೊಮ್ಮೆ ಹೇಳುವೆ, ಅದೊಂದು ನೀಳ್ಗಥೆ. ಯಾಕೆ ಅಜ್ಜಿ ಆಗೀಗ ನೆನಪಾಗುತ್ತಾಳೆಂದು ಕೇಳಿಕೊಳ್ಳುತ್ತೇನಾದರೂ…
ಅನುದಿನ ಕವನ-೧೧೫೩, ಹಿರಿಯ ಕವಿ: ಆರ್ ಜಿ ಹಳ್ಳಿ ನಾಗರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಅಜ್ಜ
ಅಜ್ಜ, ನಮಸ್ಕಾರ. ಅವಮಾನದಲ್ಲೂ ನೋವುಂಡು ನಕ್ಕ ನೀನು ಶುದ್ಧ, ಪರಿಶುದ್ಧ. ಬೆವರ ಹನಿಯ ದೇಶದ ಜೀವನಾಡಿ. ನೇಗಿಲಯೋಗಿ. “ಕೊಳಕು ಬಟ್ಟೆ..!” ಹಾಗೆಂದರೇನು? ನನ್ನಪ್ಪ, ಅಜ್ಜನದ್ದೂ ಅದೇ ಕಥೆಯಲ್ಲವೆ? ಆ ಕೊಳಕು ನಿನ್ನ ಬಟ್ಟೆಯದಲ್ಲ… “ಕೊಳಕು” ಮನಸ್ಸಿನ ಅಧಿಕಾರ ದಾಹಿಗಳದ್ದು! ಹೊರಗಿನ ಹಡಬೆ…
