ಗಜಲ್ ದುಃಖದ ಕಡಲು ತುಂಬಿ ಬಂದರೂ ನಾನು ಬಿಕ್ಕಲಾರೆ ಅರ್ಧರಾತ್ರಿ ತೊರೆದು ಹೋದರೂ ನಾನು ಬಿಕ್ಕಲಾರೆ ನಕ್ಷತ್ರ ಪುಂಜದಲಿ ಕಳೆದುಹೋದನು ಬಾನ ಚಂದಿರ ಬಯಲ ತುಂಬ ಕತ್ತಲಾವರಿಸಿದರೂ ನಾನು ಬಿಕ್ಕಲಾರೆ ನೋವು ನುಂಗಿಕೊಂಡು ನೆನಪಿನಲಿ ಕಾಲ ದೂಡುವೆ ಕಡುಕಷ್ಟಗಳು ನನ್ನೆದೆಗಪ್ಪಳಿಸಿದರೂ ನಾನು…
Category: ಅನುದಿನ ಕವನ
ಅನುದಿನ ಕವನ-೧೦೦೮, ಕವಿಯಿತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ
ಹಾವಿನ ನುಣುಪು, ಗುಬ್ಬಿಯ ಪುಳಕ, ಮೀನಿನ ನೋವು, ಹೂಗಳ ಹಾಡನ್ನು ಮಾತಾಡಿಸುವ ಅವನು ಅಲ್ಲೇ ಕಳೆದು ಹೋಗಿರುತ್ತಾನೆ ಅವನನು ಹುಡುಕುವ ಹುಕಿಗೆ ಬಿದ್ದವರು ಬರಿಗೈಯಲ್ಲಿ ಮರಳುತ್ತಾರೆ ಪೊರೆ ಕಳಚಿ ಹೊಸತಾಗುವ ಅವನಿಗೆ ಯಾರನೂ ನಿರಾಸೆಗೆ ದೂಡುವ ಮನಸಿರುವುದಿಲ್ಲ ಆದರೂ, ತೀರದ ಆಸೆಯನು…
ಅನುದಿನ ಕವನ-೧೦೦೭, ಕವಿ: ಶಿಶಬ, ಹೊಸಪೇಟೆ, ಕವನದ ಶೀರ್ಷಿಕೆ:ಉಳಿದ ದಿನವೆಷ್ಟೋ ?
ಉಳಿದ ದಿನವೆಷ್ಟೋ ? ಯಾರಿಗೊತ್ತು ಉಳಿದ ದಿನವೆಷ್ಟು ? ಉಂಡುಬಿಡು ಕೂಡಿಡಬೇಡ ಕಾಲ ಮೇಲೆ ಕೈನೂರುವ ಮುನ್ನ ನೋಡಿ ಬಿಡು ತಿರತಿರುಗಿ ಊರೂರ ಉಳಿಕೆ ದಿನ ಅಂದಾಜಿಲ್ಲ ಯಾವ ಸಂತನೂ ಹೇಳಿಲ್ಲ ಬಸಣ್ಣ ಹೇಳಿದನೆಂದು ಸುಮ್ಮಿರಬೇಡ ಇದಿರೆದುರೇ ಹಳಿದು ಹಳಾರಾಗು ಜ್ಞಪ್ತಿ…
ಅನುದಿನವೂ ಅನುರಣಿಸುತಿರಲಿ ಕಾವ್ಯ ಕಹಳೆಯ ನಿನಾದ… -ಡಾ. ಸಂಗಮೇಶ ಎಸ್ ಗಣಿ, ಹೊಸಪೇಟೆ
ಕವಿತೆ ಯಾರು ಬರೆಯುತ್ತಾರೋ ಅವರದಲ್ಲ; ಯಾರಿಗೆ ಅವಶ್ಯಕತೆ ಇದೆಯೋ ಅವರದು – ಪಾಬ್ಲೋ ನೆರೂಡಾ ಕರ್ನಾಟಕ ಕಹಳೆ ಡಾಟ್ ಕಾಮ್ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಸೆ. 27, 2023 ರಂದು ಸದ್ದಿಲ್ಲದೇ ಒಂದು ಸಾವಿರ ದಿನವನ್ನು ಪೂರೈಸಿ, ದಾಖಲೆ…
ಅನುದಿನ ಕವನ-೧೦೦೬, ಕವಿಯಿತ್ರಿ: ಹೇಮಲತಾ ಮೂರ್ತಿ, ಬೆಂಗಳೂರು,
ಮಂಡಿಯೂರಿ ಕ್ಷಮಾಪಣೆ ಕೇಳಿದ ಮಾತ್ರಕ್ಕೆ ‘ಅಹಂ’ನ ಗರಿ ಮೇಲೆರುವುದಾದರೆ ನೋಡಿಲ್ಲಿ ಸಾವಿರ ದೀರ್ಘದಂಡ ಆತ್ಮಕ್ಕೆ ಇರಿವ ಮಾತುಗಳಿಗೆ ಹೆಪ್ಪುಗಟ್ಟುವ ನೆತ್ತರಿಗೆ ಶಬ್ದವಿಲ್ಲದ ಬಿಕ್ಕುಗಳಿಗೆ ಇರುಳ ಕತ್ತಲೆಯೇ ನೇವರಿಕೆ ಮಾತಿನಲ್ಲೇ ಝಳಪಿಸುವ ಶಸ್ತ್ರಾಸ್ತ್ರ ಊದುವ ರಣಕಹಳೆ ಒಬ್ಬರಿಗೊಬ್ಬರು ಇರಿದು ಕೊಲ್ಲುವ ದಿನನಿತ್ಯದಾಟಕ್ಕೆ ಕೊನೆಯದಾಗಿ…
ಅನುದಿನ ಕವನ-೧೦೦೫, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಗಾಂಧೀ ಅನ್ನೊ ಗಂಧದ ಮರ
ಗಾಂಧೀ ಅನ್ನೊ ಗಂಧದ ಮರ ಲೋ.. ಸತ್ಯಪ್ಪ ಅಲ್ಲೇಲ್ಲೋ ಹರೆದ ಹುಡ್ರ ಕಿವಿ ಊದಿ ಹದಮಾಡಿ ಬಿತ್ತಿದರಂದ್ರ ಯಾವ ಕಳೆ ಕೊಳೆ ಕೀಟಗಳಿಲ್ದೆ ಬಂಪರ್ ಬೆಳಿ ತಗಿತಾರಂತೊ ಮಾರಾಯಾ! ಅವ್ರು ಅದೇನ್ ಬಿತ್ತಾರೊ ಏನೊ ಸುಖದ ಸುಪ್ಪತ್ತಿಗ್ಯಾಗ ಇರ್ತಾರಂತಪಾ ಇಲ್ನೋಡೆ ಸಾಲಮಾಡ್ಕೊಂಡ…
ಅನುದಿನ ಕವನ-೧೦೦೪, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ: ಗಾನಕವಿತೆ
💕ಗಾನಕವಿತೆ💕 ತುಟಿ ಮೇಲೆ ಬಂದದ್ದು ಒಂದೇ..ಒಂದು .. ಎದೆಯಲ್ಲಿ ಉಳಿದದ್ದು….!?!? ಬರೆಯಲಾಗದಷ್ಟು ಕೈ ನಡುಗುತಿತ್ತು ನನ್ನೊಳಗಿನ ವೇದನೆಯೆಲ್ಲಾ ಒಂದೇ ಸಮನೆ ಧುಮ್ಮಿಕ್ಕುತ್ತಿರುವ ಪರಿಗೆ ಲೇಖನಿಯೇ ಮುರಿದಂತಾಗಿತ್ತು. ಕಣ್ಣ ಹನಿಗಳೆಲ್ಲಾ ಕಣ್ಣಾಲಿಗಳ ತುಂಬಿ ಕಣ್ಣನೋಟವ ಬಂಧಿಸಿದ್ದವು. ಮಾತುಗಳು ನೂರಿದ್ದರೂ ಶೂನ್ಯದ ಬುರುಡೆಯಂತಾಗಿತ್ತು ಮನ.…
ಅನುದಿನ ಕವನ-೧೦೦೩, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ, ಕವನದ ಶೀರ್ಷಿಕೆ: ಮೆಟ್ಟಿ ನಿಲ್ಲು
ಮೆಟ್ಟಿ ನಿಲ್ಲು ಪೆಟ್ಟು ತಿಂದ ಕಲ್ಲೇ ದೇವ ಸ್ವರೂಪ ಪಡೆಯುವುದು ಎದೆಗುಂದದೆ ಮೆಟ್ಟಿ ನಿಲ್ಲು|| ಗುರಿ ಮುಟ್ಟಲು ಒಂದೊಂದೇ ಮೆಟ್ಟಿಲು ಏರುವುದು ಎದೆಗುಂದದೆ ಮೆಟ್ಟಿ ನಿಲ್ಲು|| ಕಷ್ಟಗಳು ಯಾರಿಗಿಲ್ಲ ಹೇಳು ಬದುಕಿನಲ್ಲಿ ಬರಲಿ ಬೇಕಾದಷ್ಟು ಎಡರು ತೊಡರುಗಳು| ಎದೆಗೊಟ್ಟು ಎದುರಿಸಿದಾಗ ಸರಿ…
ಅನುದಿನ ಕವನ-೧೦೦೨, ಕವಿ: -ಪ್ರೊ.ಶಾಂತಮೂರ್ತಿ ಕುಲಕರ್ಣಿ, ಹೂವಿನ ಹಡಗಲಿ, ಕವನದ ಶೀರ್ಷಿಕೆ:ತಿರುಗುವ ಭೂಮಿಯ ಕಥೆ
ತಿರುಗುವ ಭೂಮಿಯ ಕಥೆ ತಿರುಗುವ ದುಂಡನೆಯ ಭೂಮಿಗೆ ಎತ್ತಣ ಮೂಡಣ ಎತ್ತಣ ಪಡುವಣ ಬಡಗಣ ಮತ್ತಿಂದೆತ್ತಣ ತೆಂಕಣ? ಎಲ್ಲಿಂದೆಲ್ಲಿಗೆ ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣ? ಕತ್ತಲೆಗೆ ಹೆದರಿ ಬೆಂಕಿ ದಿಕ್ಕು ದೆಸೆಯಿಲ್ಲದೆ ಕಳೆದು ಹೋಗುವ ಭಯದಿಂದ ದಿಕ್ಕು, ಜೀವ ರಕ್ಷಣೆಗೆ…
ಅನುದಿನ ಕವನ-೧೦೦೧, ಕವಿ: ಯೋಗೀಶ್ ಮಾಸ್ಟರ್, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ಅರಿವಿನ ಪ್ರವಾದಿ
ನನ್ನ ಅರಿವಿನ ಪ್ರವಾದಿ ಮಹಮದರೆಂಬ ಪ್ರವಾದಿ ಎಮ್ಮೊಲವಿನ ನೀತಿಯ ಹಾದಿ, ಅಲ್ಲಾಹನ ಅರಿಯದ ಈ ಮತಿಗೆ ಅರಿವ ನೀಡವ ಹಿರಿದೊಂದಿ. ಅವರ ಬಾಳದು, ಒಲವು ನಿಲುವದು ಮಮತೆಯ ಬೆಚ್ಚಗಿನಚ್ಚರಿ. ಜಗದ ವ್ಯವಹಾರ ಆಗೆ ಬುಡಮೇಲು ನಿಜದ ತಕ್ಕಡಿ ಹಿಡಿದ ವ್ಯಾಪಾರಿ ಅಂಗಳದಲಿ…
