ಜೈಭೀಮ್…. ಕಣ್ಣ ಮುಂದಿದೆ ನೀವೆ ತೋರಿದ ಹೆದ್ದಾರಿಯು ಸಾಗಬೇಕಿದೆ ಬಹುಜನರೆಲ್ಲರು ಒಂದುಗೂಡಿಯು ನಿಮ್ಮಿಂದ ಸಿಕ್ಕಿದೆ ನಮಗೆ ಎಲ್ಲಹಕ್ಕು ಕೈ ಹಿಡಿದು ನಡೆಸಿದೆ ನೀ ಬೌದ್ಧಬಿಕ್ಕು ಜೈಭೀಮ ಮಹಾರಾಜ ಈ ದೇಶಕೆ ಬೆಳಕಿನ ತೇಜ ನೀವೆ ನಮ್ಮನ್ನ ಕಾಯುವ ಈ ದೇಶದ ನಿರ್ಮಾತೃ…
Category: ಅನುದಿನ ಕವನ
ಅನುದಿನ ಕವನ-೮೩೮, ಕವಿಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಆಕ್ರೋಶ
ಆಕ್ರೋಶ ಮನದೊಳಗಿನ ಬೇಸಿಗೆಗೆ ಆಕ್ರೋಶದ ಅಗ್ನಿ ತುಟಿ ಬಿಡುವ ಹಂಬಲವಿದ್ದರೂ ಬಿಡುತ್ತಿಲ್ಲವಲ್ಲ ಸಂಕೋಲೆಯ ಹಗ್ಗಗಳು…. ಸುತ್ತಲೂ ಎತ್ತ ಸುತ್ತಿದರೂ ಗಗನದ ನೀಲಿ ಛಾಯೆಗೆ ಬಾಯಾರಿಕೆಯಾಗಿ ಆಯಾಸಗೊಂಡಿದೆ….. ಬಡತನದ ಬವಣೆಗೆ ಶ್ರೀಮಂತರ ಹುಸಿ ಆಶ್ವಾಸನೆ ನಕ್ಕು ವ್ಯಂಗ್ಯ ಹೊರಸೂಸುತಿದೆ…. ಹಸಿದ ಹೊಟ್ಟೆಗೆ ಕೊಡಲಿಯ…
ಅನುದಿನ ಕವನ-೮೩೭, ಕವಿ: ಡಾ. ವೈ.ಎಂ ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ:ಕೊಳಲ ನಾದದ ಕನಸ ಗುಂಗಲ್ಲಿ
ಕೊಳಲ ನಾದದ ಕನಸ ಗುಂಗಲ್ಲಿ ಕನಸುಗಳು ಕಾಣೆಯಾಗಿವೆ ಅವನಿರದ ವಿರಹ ದುರಿಯಲ್ಲಿ ಗೋಪಾಲನಿರದ ಯಮುನೆಯ ದಂಡೆ ಕೊಳಲು ಒಂಟಿ ಅನಾಥ ಬೇಸರದ ದನಿಯಲಿ ಅನಾಹತ ನಾದ ಎಷ್ಟೊಂದು ಸಲ ಬಯಸಿದ್ದೆ ಕೊಳದನಿಗೆ ನಾ ಜೊತೆಯಾಗಿ ಕುಣಿಯಬೇಕೆಂದು ಅವನೋ ಕೊಳದನಿಯನು ಹರಸುತ್ತ ಓಡುವ…
ಅನುದಿನ ಕವನ-೮೩೬, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ:ಗಜಲ್
ಗಜಲ್ ನಗುವಿನ ಅಲೆಯಲ್ಲಿ ತೇಲಿಸುತ ಭವಸಾಗರವ ದಾಟಿಸಿದೆಯಾ ನೀನು ಮುತ್ತಿನ ಮತ್ತಲ್ಲಿ ಮುಳುಗಿಸುತ ರಸಸಾಗರವ ಸುರಿಸಿದೆಯಾ ನೀನು ಒನಪಿನ ವೈಯಾರದಲಿ ಮೆರೆಯುತ ಪ್ರೇಮದ ಅರಮನೆಯಲ್ಲಿ ವಿಹರಿಸುತ್ತಿರುವೆನಲ್ಲ ಸಕಲೈಸಿರಿಯ ಮಡಿಲಿಗೆ ಸುರಿದು ಸುಖಸಾಗರದಿ ಮುಳುಗಿಸಿದೆಯಾ ನೀನು ಬರಡು ಭೂಮಿಯನು ಹದಗೊಳಿಸಿ ಒಲವ ಚಿಗುರನು…
ಅನುದಿನ ಕವನ-೮೩೫, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ:ಸಮತೆಯ ಸೂರ್ಯ
ಸಮತೆಯ ಸೂರ್ಯ ಭಾರತದಿ ಉದಿಸಿದ ಬೆಳಕಿನ ಕಿರಣ ಜಗದಗಲ ಹರಡಿತು ಸಮತೆಯ ಹೊಂಗಿರಣ ಸಾಧನೆಯ ಹಾದಿಗೆ ಕಟ್ಟಿದೆ ಧೈರ್ಯದ ತೋರಣ ನೀ ಬೀರಿದ ಸಮತೆಯ ಬೆಳಕೆ ಪ್ರಗತಿಗೆ ಪ್ರೇರಣ ಭಾರತೀಯರಿಗೆಂದೆ ರಚಿಸಿದೆ ಸಂವಿಧಾನ ಜೀವಿಸಲು ಕಲಿಸಿದೆ ವೈಚಾರಿಕತೆಯ ವಿಧಾನ ಶಿಕ್ಷಣ ಸಂಘಟನೆ…
ಅನುದಿನ ಕವನ-೮೩೪, ಕವಿ: ಡಾ. ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ಅಂಬೇಡ್ಕರ್ ಬಂದ…..
ಅಂಬೇಡ್ಕರ್ ಬಂದ…. ನಿನ್ನೆ ನಮ್ಮ ಮನೆಗೆ ಅಂಬೇಡ್ಕರ್ ಬಂದ ಅಮ್ಮ ಮುದ್ದೆ ತಟ್ಟುತ್ತಿದ್ದಳು ಜೋಡಿಲ್ಲದೆ ಚಿಂತೆಗೀಡಾದಳು ಆಗ ಮನೆಗೆ ಅಂಬೇಡ್ಕರ್ ಬಂದ ಬಾಪ್ಪಾ ಎಂದಳು ಅಮ್ಮ ಬಂದು ಅಡುಗೆಮನೆಯ ಅಮ್ಮನೆದುರು ಕುಳಿತ ಯಾಕಮ್ಮಾ ಚಿಂತೆ ಎಂದ ಜೋಡಿಲ್ಲಪ್ಪ ಏನು ಮಾಡಲಿ ಎಂದಳು…
ಅನುದಿನ ಕವನ-೮೩೩, ಕವಿ: ಡಾ. ಸಂಗಮೇಶ ಎಸ್ ಗಣಿ, ಹೊಸಪೇಟೆ, ಕವನದ ಶೀರ್ಷಿಕೆ:ಭೀಮಭಾಸ್ಕರ
ಭೀಮಭಾಸ್ಕರ ಕಾರುಣ್ಯದ ಸಿಂಧುವೆ ಬೆಂದವರ ಬಂಧುವೆ ನೊಂದವರ ತಂದೆಯೆ ಭೀಮಬಂಧುವೇ ಶತಮಾನದ ಸರಳುಗಳಲಿ ನರಳಿವೆ ಜೀವ ಬಳಲಿದ ಬಂಧುಗಳಿಗೆ ಬಿಡುಗಡೆಯ ಭಾವ ದಮನಿತರ ಎದೆಗಳಲಿ ಬರೀ ನೋವು-ನರಕ ಬೆವರಳಿಸಿ ಭರವಸೆಯ ತಂದಿ ಈ ಜನಕ ಕಾರ್ಮೋಡದ ಆಗಸದಲಿ ಕೋಲ್ಮಿಂಚು ಮಿಂಚಿ ಬಾಳಂಗಳ…
ಅನುದಿನ ಕವನ-೮೩೨, ಹಿರಿಯ ಕವಿಯಿತ್ರಿ: ಎಂ ಆರ್ ಕಮಲಾ, ಬೆಂಗಳೂರು, ಕವನದ ಶೀರ್ಷಿಕೆ: ಅಶಾಂತೆಯ ಶಾಂತ!
ಅಶಾಂತೆಯ ಶಾಂತ! ಕವಿತೆಯೊಂದು ತಾರಸಿಯ ಮೇಲೆ ಕುಣಿಯಿತು, ನಿರ್ಲಕ್ಷಿಸಿದಳು. ಹಿತ್ತಲ ಬಾಗಿಲು ತಟ್ಟಿ ಹೆದರಿಸಿತು, ಕಿವುಡಾದಳು. ಕಿಟಕಿಯಲ್ಲಿ ಇಣುಕಿಣುಕಿ ನೋಡಿದಾಗಂತೂ ಕುರುಡಾದಳು. ಒಂದು ದಿನ ತೀರಾ ಮುಂಬಾಗಿಲನ್ನೇ ಬಡಿದುಬಿಟ್ಟಿತು. ಚಿಲಕವನ್ನು ಭದ್ರಪಡಿಸಿದಳು. ಎದೆಯೊಳಗಿಂದಲೇ ಎದ್ದು ಬಂದಾಗ ತಬ್ಬಿಬ್ಬಾದಳು. ಕವಿತೆಯೆಂಬ ಕುರುಡು ನೊಣದಿಂದ…
ಅನುದಿನ ಕವನ-೮೩೧, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ: ಅಕ್ಷರದಾತ
ಮಹಾತ್ಮ ಜ್ಯೋತಿಬಾ ಫುಲೆಯವರ ಜನುಮ ದಿನದ ವಿಶೇಷ ಗಾನಕವಿತೆ ಅಕ್ಷರದಾತ ಅಕ್ಷರವೆಂಬುದು ಅವಿತು ಕುಳಿತಿತ್ತು ಬಲ್ಲಿದರ ಮನೆಯಲ್ಲಿ.. ಶಿಕ್ಷಣವೆಂದು ಶಿಕ್ಷೆಗೊಳಪಟ್ಟಿತ್ತು ಬಹುಜನರಿಗೆ ದಕ್ಕದೇ ಮನುಸೆರೆಮನೆಯಲ್ಲಿ. ಅಕ್ಷರವಂತರು ಬರೆದಿದ್ದ ಸುಳ್ಳುಗಳೇ ಸತ್ಯವಾಗಿತ್ತು ಸತ್ಯ ಅರಿತವರು ನಿರಕ್ಷರಕುಕ್ಷಿಗಳಾಗಿದ್ದರು. ಕಪೋಲ ಕಲ್ಪಿತಗಳೇ ಕಾಯ್ದೆಗಳಾಗಿದ್ದವು..! ಪಟ್ಟು ಪೀತಾಂಬರಗಳು…
ಅನುದಿನ ಕವನ-೮೩೦, ಕವಿ: ಡಾ. ಬಿ ಆರ್ ಕೃಷ್ಣಕುಮಾರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಅಪ್ಪ, ಸೈಕಲ್ ಮತ್ತು ನಾನು
ಅಪ್ಪ, ಸೈಕಲ್ ಮತ್ತು ನಾನು ನನ್ನಪ್ಪ ಸ್ಕೂಲ್ ಮಾಸ್ಟರ್ ಅವ್ವಳಿಗೆ ದೇವರ ರೂಪ ಮಕ್ಕಳಿಗೆ ಕಲ್ಪವೃಕ್ಷ ದೀಪ ಶಿಷ್ಯರಿಗೆ ಅಚ್ಚುಮೆಚ್ಚಿನ ಗುರು ಬಂಧುಗಳಿಗೆ ಮರೆಯಲಾಗದ ಪ್ರೀತಿಪಾತ್ರ. ಅಪ್ಪನಿಗೆ ಸೈಕಲ್ ಎಂದರೆ ಜೀವದ ಒಡನಾಡಿ ಇಪ್ಪತ್ತು ಮೈಲಿ ದೂರದ ಸ್ಕೂಲಿಗೆ ಜೊತೆಯಾದ ಜೊತೆಗಾರ.…
