ಅನುದಿನ ಕವನ-೯೪೧, ಕವಿ:ಪಾರ್ವತಿ ಸಪ್ನ, ಬೆಂಗಳೂರು, ಕವನದ ಶೀರ್ಷಿಕೆ: ಕಾರಿರುಳ ರಾತ್ರಿಗಳು…

ಕಾರಿರುಳ ರಾತ್ರಿಗಳು… ಅಡಿಯಿಂದ ಮುಡಿಯವರೆಗೆ ಸಿಂಗರಿಸಿದ ಹೆಣ ನಾನು ಜೀವವಿರುವ ಕುರುಹಿಗೆ ಆಗಾಗ ನಿಟ್ಟುಸಿರೊಂದಿಗೆ ಹೊರದೂಡುವ ಉಸಿರೊಂದಿದೆ… ರಂಗು ರಂಗಿನ ಹಾಸಿಗೆಯಲ್ಲಿ ರಂಗೇರಿದ್ದ ಕನಸುಗಳ ಸಾವು, ಪ್ರತಿದಿನದ ಪ್ರತಿಕ್ಷಣವೂ ನನ್ನ ದಿಟ್ಟಿಸುವ ಕಣ್ಣುಗಳಿಗೆ ನಾ ಅಪ್ಸರೆ ಶಾಪಗ್ರಸ್ತ ದೇಹ,ಸದಾ ಮಸಣವ ಅಲಂಕರಿಸುವ…

ಅನುದಿನ ಕವನ-೯೪೦, ಕವಿ: ಟಿಪಿ ಉಮೇಶ್, ಚಿತ್ರದುರ್ಗ, ಕವನದ ಶೀರ್ಷಿಕೆ: ಬಾ….ಮಾತನಾಡೋಣ

ಬಾ… ಮಾತನಾಡೋಣ ಬಾ… ಮಾತನಾಡೋಣ ಕವಿತೆಗಳ ಮೂಲಕವೇ ಎಷ್ಟಂತ ಹೇಳುವುದು ಮೃದು ಮಧುರ ಪ್ರೀತಿಯನು? ಎದುರಾಗಿ ಕುಳಿತಾಡುವ ಮಾತುಗಳ ಫಲುಕು; ಮಿಗಿಲಲ್ಲ ಬಿಡು, ಈ ಎಲ್ಲ ಕವಿತೆಗಳ ಝಲಕು! ಮಾತನಾಡೋಣ… ಲಗುಬಗೆಯಿಂದ, ಸವಿ ನಗೆಯಿಂದ, ಹುಸಿ ಮುನಿಸಿಂದ, ಹಸಿ ಆಸೆಯಿಂದ; ಕವಿತೆಯ……

ಅನುದಿನ ಕವನ-೯೩೯, ಕವಿ: ಮುನಿರಾಜು, ಬೆಂಗಳೂರು, ಕವನದ ಶೀರ್ಷಿಕೆ: ಮಳೆಯಲಿ….

ಮಳೆಯಲಿ….. ಬಾನ ತುಂಬಾ ಕಾರ್ಮೋಡ ಬಸಿರಾದ ಮೋಡಗಳಿರಲು ಬಿಸಿಲಿಗೆ ಬಾಯ್ತೆರೆದು ದಾಹದಿ ಧರಣಿ ಕಾದಿರಲು ಬೀಸಿ ಬಂದ ತಂಗಾಳಿಯು ಮೋಡ ಮೋಡಗಳು ಮೋಹದಿ ಮುದ್ದಿಡಲು ಗುಡುಗು ಸಿಡಿಲು ಮಿಂಚು ಬಾನಲ್ಲಿ ರುದ್ರ ನರ್ತನವು ಹನಿ ಹನಿ ಮಳೆ ಸುರಿದಿರಲು ಕೆರೆ ಕೊಳ್ಳಗಳು…

ಅನುದಿನ ಕವನ-೯೩೮, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ

ನಾಲ್ಕು ಹನಿಗವನಗಳು ೧. ನೀನೇ….. ಏನೆಂದು ಬರೆಯಲಿ ನಿನ್ನ ನೆನೆದು ಬಿಳಿ ಹಾಳೆಯಲ್ಲಿ ! ; ಎಲ್ಲಾ ನೀನೇ ಬರೆದಿರುವೆ ನನ್ನ ಹೃದಯದಲ್ಲಿ. ೨. ಹುಡುಗಿ ನನ್ನ ಹುಡುಗಿ ಚಿನ್ನದ ಖನಿ ಎಂದರಸಿ ಬಂದರೆ ಅವಳಾದಳು ಮುಟ್ಟಿದರೆ ಮುನಿ. ೩. ನಿನ್ನ…..…

ಅನುದಿನ ಕವನ-೯೩೭, ಕವಿ:ಮರುಳಸಿದ್ದಪ್ಪ ದೊಡ್ಡಮನಿ ಹುಲಕೋಟಿ, ಕವನದ ಶೀರ್ಷಿಕೆ: ವರುಣನಿಗೆ…..🙏 ಮಳೆ ಚಿತ್ರ: ಎಂ.ಡಿ ರಫಿ, ಬಳ್ಳಾರಿ

ವರುಣನಿಗೆ…..🙏 ವರುಣ ಸಾಕು ನಿಲ್ಲಿಸು ನಿನ್ನ ಆರ್ಭಟ ಮುಗಿಲು ಹರಿದು ಧರೆಗೆ ಬರುತ್ತಿದೆ ನೆಲವು ನೆರಳಿ ಅಳುತಿದೆ ನಿನ್ನ ಕಾಟಕೆ ಮೆತ್ತಗಾಗಿ ನೀರ ಜೊತೆ ಕಣ್ಣಿರು ಬರುತ್ತಿದೆ ಊಳಿದ ನೆಲಕಿಟ್ಟ ಬೀಜ ಕೊಳೆತು ಮೇಲೆಳಲು ನೆರಳಿ ಒಡಲಲ್ಲೆ ಸಾಯುತಿದೆ ಅನ್ನ ಬೇಳೆವ…

ಅನುದಿನ‌ ಕವನ-೯೩೬, ಕವಿ: ಮಂಜು ಎಂ ದೊಡ್ಡಮನಿ, ಬೆಂಗಳೂರು 

ಹೊಕ್ಕುಳದ ಬುನಾದಿ ಮೇಲೊಂದು ಬಳ್ಳಿಯ ಬೆಳೆಸಿ ಒಲವ ಸುಗಂಧ ಸೂಸುವ ಹೂಗಳ ಅರಳಿಸುವೆ ಕತ್ತಲ ಬಯಕೆಗಳಿಗೊಂದಿಷ್ಟು ಬೆವರು ಹರಿಸು. ಕಾಮ ತೃಷೆ ಎಲ್ಲೇ ಮೀರಲಿ; ಕಡು ಸಂಜೆ ಕೆಂಪಾಗಿ ಮೆಲ್ಲಗೆ ಕಪ್ಪಾಗುವಾಗ ನಗ್ನತೆಯ ಕುಂಚ ಭಾವಭಂಗಿಯ ಚಿತ್ರ ಬಿಡಿಸಲಿ.. ಅದೆಷ್ಟು ಕಣ್ಣುಗಳು…

ಅನುದಿನ‌ ಕವನ-೯೩೫, ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ, [ಡಿಜಿಟಲ್ ಚಿತ್ರ ಕೃಪೆ: ಯಜ್ಞ ಆಚಾರ್ಯ, ಮಂಗಳೂರು]

ಸುಮ್ಮನೆ ನಿಂತು ಎನ್ನೆದೆಯ ಮೇಲೆ ಕೈಯಿಟ್ಟಾಗ ಅಂತರಾಳದ ಬಾಗಿಲು ತೆರೆಯಿತು * * * ಮಳೆ ನಿಂತ ಮೇಲೆ ಎಲೆಗಳ ಮರೆಯಿಂದ ಹನಿ ಉದುರುವಾಗ ನನ್ನ ಭೂತದ ನೆನಪು ಮರುಕಳಿಸಿತು * * * ಬೇಸಿಗೆ ಉರಿಬಿಸಿಲಲ್ಲಿ ಕೋಗಿಲೆಯ ಕುಹೂ ಆಲಿಸಿ…

ಅನುದಿನ ಕವನ-೯೩೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಕ್ಷಮಿಸಿ ಸಾಹೇಬ್…

ಕ್ಷಮಿಸಿ ಸಾಹೇಬ್… ನಾವೋ ಪ್ರತಿಷ್ಟೆಗೆ ಬಿದ್ದು ನಿಮ್ಮ ಕನಸುಗಳನ್ನು ಮಾರುತ್ತಿದ್ದೇವೆ ಸಾಹೇಬ್… ಎಷ್ಟೆಂದರೆ ಸಾಹೇಬ್ ಕೋಟಿಕೋಟಿಗೆ ಒಂದು ಟಿಕೆಟಿಗೆ ನಿಮ್ಮ ಕನಸುಗಳು ಗಾಳಿಗೆ ತೂರಿ ನಿಂತಿದ್ದೇವೆ ಸಾಹೇಬ್… ಯಾರ ಹುನ್ನಾರವನ್ನು ಅರಿಯಲಾರದೆ ಜಿದ್ದಿಗೆ ಬಿದ್ದು ಒಬ್ಬರಿಗಿಂತ ಒಬ್ಬರು ನಮ್ಮ ಕಾಲ ನಾವೇ…

ಅನುದಿನ ಕವನ-೯೩೩, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಉಡುಗೊರೆ ಕೊಡಲೇನು

ಉಡುಗೊರೆ ಕೊಡಲೇನು ಭುವಿಯ ಕ್ಷಿತಿಜದಿ ಬಿರಿದ ಗಗನ ಕುಸುಮವು ನೀನು ಅಘವಣಿಯ ತಂದು ಸಿಂಪಡಿಸಲೇನು ಇಂದ್ರಛಾಪದಿ ಸೂಸುತಿರುವ ಸಪ್ತವರ್ಣವು ನೀನು ಕಪ್ಪು ಕಾಡಿಗೆ ದೃಷ್ಟಿ ತೆಗೆಯಲೇನು ಕಡಲ ಸೇರಲು ಹರಿವ ನದಿಯ ಅವಸರ ನೀನು ಹರಿಗೋಲು ಹಿಡಿದು ಸರಿಸಲೇನು ಮಕರಂದ ಹೀರಿ…

ಅನುದಿನ ಕವನ-೯೩೨, ಕವಿ: ಡಾ. ಲಕ್ಷ್ಮಣ ವಿ ಎ, ಬೆಂಗಳೂರು, ಕವನದ ಶೀರ್ಷಿಕೆ:ಕಾವಳದ ರಾತ್ರಿಯ ಒಂದು ದಿನ

ಕಾವಳದ ರಾತ್ರಿಯ ಒಂದು ದಿನ ಮೂರು ಕಲ್ಲಿನ ಒಲೆಯ ಮುಂದೆ ಊದಗೊಳವೆ ಹಿಡಿದು ‘ಫೂ’ ಎನ್ನುವ  ಅವ್ವ ಗಾಳಿಯೂದಿದಂತೆಲ್ಲಾ ಏರಿಳಿವ ಪುಪ್ಪುಸ ಅರೆ ತೆರೆದ  ಕುಪ್ಪುಸದ ಕುಣಿಯೊಳಗೆ ಎದ್ದು ಕಾಣುವ ಪಕ್ಕೆಲುಬು ಹೊಗೆಯೊಳಗೆ ಅವಳೊ ಅವಳೊಳಗೆ ಹೊಗೆಯೊ ಹೊಗೆಯಡರಿದ ಕನಸುಗಳು ಒಳಗೊಳಗೆ…