ಅನುದಿನ ಕವನ-೨೬೭, ಕವಿ: ಡಾ. ಸದಾಶಿವ ದೊಡಮನಿ, ಇಲಕಲ್ಲು, ಕವನದ ಶೀರ್ಷಿಕೆ: ಮುನಿಸಿನ ದಿರಿಸು ಎಂದೂ ತೊಡದಿರು ಚೆಲುವೆ….

ಮುನಿಸಿನ ದಿರಿಸು ಎಂದೂ ತೊಡದಿರು ಚೆಲುವೆ ಮುನಸಿನ ದಿರಿಸು ಎಂದೂ ತೊಡದಿರು ಚೆಲುವೆ ಜೀವನ ತಾಳ, ಲಯಗಳು ತಪ್ಪುವವು ಒಲವೆ ಹಗೆತನ ಹೊಗೆಯನು ಎಂದೂ ಹರಡದಿರು ಚೆಲುವೆ ಬಾಳಿನ ಉಸಿರನು, ಹಸಿರನು ನುಂಗುವುದು ಒಲವೆ ನಗು ನಗುತ್ತಲೇ ಇರು, ನಲಿವನು ಹೆರು…

ಅನುದಿನ ಕವನ-೨೬೬, ಕವಿ: ಜಿ ಟಿ ಆರ್ ದುರ್ಗ, ಜಿ ಹೆಚ್ ಎಲ್, ಬಂಗಾರಪೇಟೆ, ಕವನದ ಶೀರ್ಷಿಕೆ: ಕಣ್ಣಾ‌ಮುಚ್ಚಾಲೆ

ಕಣ್ಣಾಮುಚ್ಚಾಲೆ ನ್ಯಾಯುತವಾಗಿ ಬದುಕುವವನಿಗೆ ಸತ್ಯದ ಬಾಗಿಲು ತೆರೆದಿರುತ್ತದೆ ಅನ್ಯಾಯ ಮಾಡುವವನಿಗೆ ಘೋರ ಶಿಕ್ಷೆಯು ಆಹ್ವಾನಿಸುತ್ತದೆ ಕೆಟ್ಟತನವು ಮುಳ್ಳು ತುಳಿದಂತೆ ಸುಲಭವಾಗಿ ರಕ್ತ ಸುರಿಸುತ್ತದೆ ಒಳ್ಳೆತನವು ಕಠಿಣ ಬಂಡೆಗಲ್ಲಿನಂತೆ ಶಿಲೆಯ ಕೆತ್ತಿದ ಶಿಲ್ಪಿಗೆ ಹರುಷವಾದಂತೆ ಮೋಸ ವಂಚಕನಿಗೆ ತನ್ನಾತ್ಮ ಹೇಳುವುದು ನಾನು ಇಷ್ಟೊಂದು…

ಅನುದಿನ ಕವನ-೨೬೫, ಕವಯತ್ರಿ: ಹೆಚ್. ಆರ್. ಸುಜಾತಾ, ಬೆಂಗಳೂರು, ಕವನದ ಶೀರ್ಷಿಕೆ: ಚಂದಿರನೊಂದಿಗೆ ಕೊಳದ ಮಾತು…..

ಚಂದಿರನೊಂದಿಗೆ ಕೊಳದ ಮಾತು ನಗೆಯ ಸೊಗಕೆ ಸೋತ ಚಂದಿರನೇ ಗರ್ಭದಾಳಕಿಳಿದಿಳಿದು, ಬೆಳ್ಳಿ ಬೆಳಕಿನ ಬಳ್ಳಿ ಬಳುಕಿ ಬೇರಿಳಿದು ಹೊಕ್ಕುಳಬಳ್ಳಿಯ ಕೊಳದೊಳಗಿಳಿಬಿಟ್ಟ. ಛಂದದ ಹೂವಾಯಿತು ಕೊಳವೇ ತನ್ನ ಬಿಂಬವ ಮೋಹಿಸುವಂತೆ, ಚಂದಿರನ ಮುಗುಳ್ನಗೆಯ ಚೆಲ್ಲಿದವು ಬಿರಿದ ಕೆಂದಾವರೆ ಹರಳುಗಳು ಸಣ್ಣ ಗಾಳಿಯಲೆಯ ಅಲುಗಿಗೆ…

ಅನುದಿನ ಕವನ-೨೬೪, ಹಿರಿಯ ಕವಿ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಚಪ್ಪಲಿ ಮತ್ತು ನಾನು…..

  ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ. ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ಉನ್ನತ ಆಡಳಿತಾಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ಪ್ರಗತಿಪರ ಚಿಂತಕ, ಲೇಖಕ, ಉಪನ್ಯಾಸಕರಾಗಿ ಕಳೆದ ನಾಲ್ಕೂವರೆ ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ಗಮನಸೆಳೆದಿದ್ದಾರೆ. ವಿಶೇಷವಾಗಿ ಕಾವ್ಯಲೋಕಕ್ಕೆ ಡಾ. ಮೂಡ್ನಾಕೂಡು…

ಅನುದಿನ ಕವನ-೨೬೩, ಕವಿ: ಸುಬ್ಬು ಹೊಲೆಯಾರ್, ಬೆಂಗಳೂರು, ಕವನದ ಶೀರ್ಷಿಕೆ:ಮಳೆ ಬರಲಿ ಲೋಕದ ಎಲ್ಲರ ಮನೆಯ ಮೇಲೆ

ಕನ್ನಡದ ಬಹುಮುಖ್ಯ ಕವಿ ಸುಬ್ಬು ಹೊಲೆಯಾರ್ ಅವರು ಇಂದು ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರ ಲೇಖನಿ ಸದಾ ಸಮ ಸಮಾಜಕ್ಕಾಗಿ ಮಿಡಿಯುತ್ತಿರುತ್ತದೆ. ಅಸಮಾನತೆ, ಅಸ್ಪೃಶ್ಯತೆ,ಲಿಂಗ ತಾರತಮ್ಯ, ಜಾತಿ ಶೋಷಣೆ ವಿರುದ್ಧ ನಿರಂತರ ಸಾತ್ವಿಕ ಪ್ರತಿರೋಧ ಒಡ್ಡುತ್ತಿರುವ ಸುಬ್ಬಣ್ಣ ಅವರ ‘ಮಳೆ…

ಅನುದಿನ ಕವನ-೨೬೨, ಕವಿ: ಬಾವಾಖಾನ ಎಂ.ಡಿ. ಸುತಗಟ್ಟಿ. ಕಾವ್ಯ ಪ್ರಾಕಾರ: ಗಜಲ್

  ಗಜ಼ಲ್ ಸ್ವರ್ಗಸ್ಥರಾದವರು ಸ್ವರ್ಗದ ಬಗ್ಗೆ ಎಲ್ಲಿಯೂ ಹೇಳಲಿಲ್ಲ ಯಾಕಂದರೆ ಸ್ವರ್ಗ ಇರೋದು ಅವ್ವನ ಪಾದದ ಕೆಳಗಂತ ಗೊತ್ತಾತು|| ಜನನೀ ಜನ್ಮಭೂಮಿ ಜನ್ನತ ಆಗಿರುವಾಗ ಮನಸ್ಸಿನೊಳಗೆ ಮಾಡಿಕೊಂಡ ಮನ್ನತಗಳೆಲ್ಲ ಈಡೇರತಾವಂತ ಗೊತ್ತಾತು|| ಮೆತ್ತನೆ ಹಾಸಿಗೆ ಮೇಲೆ ಎಷ್ಟ್ಹೊತ್ತು ಹೊರಳಾಡಿದರೂ ಇತ್ತಿತ್ತಲಾಗ ಕಣ್ರೆಪ್ಪೆಗಳು…

ಅನುದಿನ‌ಕವನ-೨೬೧, ಕವಯತ್ರಿ:ಶೋಭ ಶಂಕರಾನಂದ, ಹೊಸಪೇಟೆ, ಕವನದ ಶೀರ್ಷಿಕೆ: ಶಾಶ್ವತ ಅನುಭೂತಿ

  ಶಾಶ್ವತ ಅನುಭೂತಿ ಅನುಭಾವದ ಅನಾವರಣ ಸುಂದರವದು ಗರ್ಭದಿಂದ ಗೋರಿ ತನಕ ಸಂಗಾತಿಯದು ಮರುಳಾಗದು ನಶ್ವರ ಬಾಹ್ಯ ರೂಪಕೆಂದು ಆಂತರಿಕ ಸೌಂದರ್ಯ ಪ್ರಜ್ಞೆಯ ಮೂಲವದು ಸಹಜ ಮಗುವಿನಲ್ಲಿ ಮಮತೆ ತಾಯಿಗೆ ಅನ್ನ ನೀಡುವ ನೇಗಿಲ ಪೂಜೆ ರೈತನಿಗೆ ಗುರಿಯಾಗಲು ದೇಶದ ಸೇವೆ…

ಅನುದಿನ ಕವನ-೨೬೦, ಕವಯತ್ರಿ:ಸುಧಾ ಚಿದಾನಂದ ಗೌಡ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ:ಸಂಜೆಯ ನಿರೀಕ್ಷೆ

ಸಂಜೆಯ ನಿರೀಕ್ಷೆ…. ಜೊತೆಗೂಡಿ ಚಲಿಸುವ ಚಂದಿರನ ದಿಟ್ಟಿಸುವ ರಂಗು ಚೆಲ್ಲಿದಂತೆ ದಟೈಸಿದ ಮೋಡದಲಿ ಚಲನೆಯ ಮಿಂಚಿತ್ತು ಯಾವುದೋ ಹೊಂಚಿತ್ತು ಬಣ್ಣಗಳಿದ್ದವು ಕನಸಿನಲಿ ಆಸೆಗಳಿದ್ದವು ಮನಸಿನಲಿ ಸಂಜೆ ಹೀಗಿರಲಿ ಗಿಣಿ ಮಾವನ್ನು ಸ್ವಲ್ಪವೇ ಕಚ್ಚಿದಂತೆ ರುಚಿ ಹೆಚ್ಚಿದಂತೆ ಅವನುಸಿರಲಿ ಇವಳ ಸಂಕಟ ಅವಳ…

ಅನುದಿನ ಕವನ: ೨೫೯, ಕವಿ: ಮುದೆನೂರ ಉಮಾಮಹೇಶ್ವರ, ಹೊಸಪೇಟೆ, ಕವನದ ಶೀರ್ಷಿಕೆ: ಮುಖವಾಡಗಳು

  ಮುಖವಾಡಗಳು👇 ಜಗತ್ತು ಹೇಳಿಕೊಟ್ಟಿದೆ ತಪ್ಪದೆ ಮುಖವಾಡ ಹೊತ್ತು ಬನ್ನಿ ಎಂದು. ಆಧಾರ ನಿನ್ನ ಹೆಸರು ದೂರವಾಣಿ ನಿನ್ನ ಆಸ್ತಿ ರೇಷನ್ ಕಾರ್ಡು ನಿನ್ನ ಊರು ಸಂಚಾರ ನಿನ್ನ ಶಾಲೆ ಎತ್ತಂಗಡಿ ನಿನ್ನ ಕೆಲಸ ಅಲೆಯಲಿಕ್ಕೆ ಮತದಾನ ಮತಾಂತರಕ್ಕೆ ಧರ್ಮ ಇತಿಹಾಸಕ್ಕೆ…

ಅನುದಿನ ಕವನ-೨೫೮, ಕವಯತ್ರಿ: ಸಹನಾ ಯಶವಂತ್ ಗೌಡ, ಮೈಸೂರು, ಕವನದ ಶೀರ್ಷಿಕೆ:ತಾರೆಗಳಲ್ಲಿ ಒಂದಾದ ಅಮ್ಮಾ….

ತಾರೆಗಳಲ್ಲಿ ಒಂದಾದ ಅಮ್ಮಾ.. ಮೊಗವ ತೋರದ ಬಾಲೆ ನಿಂತಿಹಳು, ಆಕಾಶವನ್ನೇ ದಿಟ್ಟಿಸುತ್ತಾ ಕಾಯುತಿಹಳು// ಅಮ್ಮ ಎಲ್ಲಿರುವೆ ಬಾ ಬೇಗ ಎನುತಿಹಳು, ಅಪ್ಪಾ ಹೇಳಿದ ನಕ್ಷತ್ರ ವಾಗಿರುವೆ ನೀ, ಸೇರೊಮ್ಮೆ ನನ್ನ ಎಂದು ಬಿಕ್ಕುತಿಗಳು// ಚಿಕ್ಕೆ ಸಾಲುಗಳ ಆಗಸದಿ ತುಂಬಾ, ತೋರು ಬಾ…