ಹಗರಿಬೊಮ್ಮನಹಳ್ಳಿ, ಡಿ.13: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ತರಗತಿಗಳ ಬಹಿಷ್ಕಾರ ಮುಷ್ಕರ ಸೋಮವಾರವೂ ಮುಂದುವರೆದಿದೆ. ಮುಖ್ಯಮಂತ್ರಿಗಳಿಗೆ ತಹಶಿಲ್ದಾರ ಅವರ ಮೂಲಕ ಮನವಿ ಸಲ್ಲಿಸಿದರು. ರಾಜ್ಯ ಸರಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಬೇಕು. ಗೌರವಧನವನ್ನು…
Category: ಹಗರಿಬೊಮ್ಮನಹಳ್ಳಿ
ಹಂಪಾಪಟ್ಟಣ: ಶರಣ ಬಂಧುಗಳ ಬಳಗದಿಂದ ಸಂವಿಧಾನ ಶಿಲ್ಪಿಗೆ ಗೌರವ
ಹಗರಿಬೊಮ್ಮನಹಳ್ಳಿ, ಡಿ.9: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಶರಣ ಬಂಧುಗಳ ಬಳಗ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಶ್ರದ್ಧಾಪೂರ್ವಕ ಆಚರಿಸಿತು. ಈಚೆಗೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಗದ ನಾಗರಾಜ ಗಂಟಿ ಮಾತನಾಡಿ, ವಿಶ್ವಜ್ಞಾನಿ ಡಾ.ಅಂಬೇಡ್ಕರ್…
75ನೇ ಸ್ವಾತಂತ್ರ ದಿನಾಚರಣೆ: ಕೊವೀಡ್ ವಾರಿಯರ್ಸ್ ರಿಗೆ ಸನ್ಮಾನ
ಹಗರಿಬೊಮ್ಮನಹಳ್ಳಿ, ಆ.16: ಪಟ್ಟಣದಲ್ಲಿ ಭಾನುವಾರ ಜರುಗಿದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೊವೀಡ್ ವಾರಿಯರ್ಸ್ ಆಗಿ ದುಡಿದ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ ಸೇರಿದಂತೆ ಹಲವರನ್ನು ತಾಲೂಕು ಆಡಳಿತ ಸನ್ಮಾನಿಸಿ ಗೌರವಿಸಿತು. ಶಾಸಕ ಎಸ್.ಭೀಮನಾಯ್ಕ್, ತಹಶೀಲ್ದಾರ್ ಶರಣಮ್ಮ ಅವರು ಕೊವೀಡ್ ವಾರಿಯರ್ಸ್…
‘ಕುಲದಲ್ಲಿ ಕೀಳ್ಯಾವುದೋ’ ಹಾಡಿಗೆ ಹೆಜ್ಜೆ ಹಾಕಿದ ಹಬೊ ಹಳ್ಳಿ ತಾಲೂಕು ಆಡಳಿತ, ಸಂಭ್ರಮಿಸಿದ ಕೋವಿದ್ ಸೋಂಕಿತರು
ಹಗರಿಬೊಮ್ಮನಹಳ್ಳಿ: “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ ….” ಸತ್ಯ ಹರಿಶ್ಚಂದ್ರ ಚಿತ್ರದ ಈ ಜನಪ್ರಿಯ ಹಾಡಿಗೆ ಇಡೀ ತಾಲೂಕು ಆಡಳಿತವೇ ಹೆಜ್ಜೆ ಹಾಕಿತು… ಹೌದು…ಶುಕ್ರವಾರ ಸಂಜೆ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಕೋವಿದ್ ಕೇರ್ ಸೆಂಟರ್ ನಲ್ಲಿ ತಹಸೀಲ್ದಾರ್ ಶರಣಮ್ಮ, ತಾಪಂ…
ತಂಬ್ರಹಳ್ಳಿಯಲ್ಲಿ ದಾಖಲೆ ಮಳೆ: ತುಂಬಿದ ಪುಷ್ಕರಣಿಯ ದೃಶ್ಯ ನಯನ ಮನೋಹರ
ಹಗರಿಬೊಮ್ಮನಹಳ್ಳಿ : ತಾಲೂಕಿನ ತಂಬ್ರಹಳ್ಳಿಯ ಶ್ರೀ ಬಂಡೆ ರಂಗನಾಥಸ್ವಾಮಿಯ ಗುಡ್ಡದಲ್ಲಿನ ಪುಷ್ಕರಣಿ(ಹೊಂಡ) ನಿನ್ನೆ ರಾತ್ರಿ ಸುರಿದ ದಾಖಲೆ ಮಳೆಗೆ ಸಂಪೂರ್ಣ ತುಂಬಿ ಇಡೀ ಬೆಟ್ಟದ ಸ್ವಾಭಾವಿಕ ಚೆಲುವನ್ನು ಇಮ್ಮಡಿಗೊಳಿಸಿದೆ. …
ಹಂಪಾಪಟ್ಟಣದಲ್ಲಿ ಶ್ರೀ ವಾಸವಿ ಜಯಂತಿ: ಬಡವರಿಗೆ 40ಸಾವಿರ ರೂ. ಮೌಲ್ಯದ ಆಹಾರ ಕಿಟ್ ವಿತರಿಸಿ ಔದಾರ್ಯ ಮೆರೆದ ಆರ್ಯ ವೈಶ್ಯ ಸಂಘ
ಹಗರಿಬೊಮ್ಮನಹಳ್ಳಿ: ಕೊರೋನಾ ಸಂಕಷ್ಟದ ಈ ಸಮಯದಲ್ಲಿ ಬಡವರು, ಅಂಗವಿಕಲರು ಹಾಗೂ ಆಶಾ ಕಾರ್ಯಕರ್ತೆಯರ ನೆರವಿಗೆ ಧಾವಿಸಿವ ಮೂಲಕ ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು ಇತರರಿಗೆ ಮಾದರಿಯಾಗಿದ್ದಾರೆ. ಹೌದು! ತಾಲೂಕಿನ ಹಂಪಾಪಟ್ಟಣ ಗ್ರಾಮದ ಆರ್ಯವೈಶ್ಯ ಸಂಘವು, ಶುಕ್ರವಾರ ಜರುಗಿದ ಶ್ರೀ ವಾಸವಿ ಜಯಂತಿ…
ಹ ಬೊ ಹಳ್ಳಿ ವಿಧಾನ ಸಭಾ ಕ್ಷೇತ್ರದ ತೋಟಗಾರಿಕೆ ಬೆಳೆಗಾರರಿಗೆ ಪಾಸ್ ವಿತರಣೆಗೆ ಕ್ರಮ -ಶಾಸಕಎಸ್.ಭೀಮನಾಯ್ಕ
ಹಗರಿಬೊಮ್ಮನಹಳ್ಳಿ: ಲಾಕ್‌ಡೌನ್ ವೇಳೆ ತೋಟಗಾರಿಕೆ ಬೆಳೆಗಾರರಿಗೆ ತಮ್ಮ ಉತ್ಪಾದನೆಗಳ ಮಾರಾಟಕ್ಕೆ ತೊಂದರೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಮಾರಾಟಕ್ಕೆ ಅಡ್ಡಿಯಾಗದಂತೆ ಪಾಸ್ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಭೀಮನಾಯ್ಕ ಅವರು ತಿಳಿಸಿದರು. ತಾಲೂಕಿನ ತಹಸೀಲ್ದಾರ್ ಮತ್ತು ತೋಟಗಾರಿಕೆ ಸಹಾಯಕ…
ಹಂಪಾಪಟ್ಟಣ ತಾಪಂ ಜಿಪಂ ಕ್ಷೇತ್ರ ಉಳಿಸಲು ಆಗ್ರಹ: ರದ್ದಾಗದಿದ್ದರೆ ಮಾ. 29ರ ಗ್ರಾಪಂ ಚುನಾವಣೆ ಬಹಿಷ್ಕಾರ-ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರ ಎಚ್ಚರಿಕೆ
ಬಳ್ಳಾರಿ: ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಜಿಲ್ಲಾ ಪಂಚಾಯಿತಿ, ತಾಪಂ ಕ್ಷೇತ್ರವನ್ನು ಈಗಿರುವಂತೆ ಮುಂದುವರೆಸಬೇಕು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು. ಜಿಲ್ಲಾ ಕೇಂದ್ರದಿಂದ 90 ಕಿ ಮೀ ಅಂತರವಿರುವ ಹಂಪಾಪಟ್ಟಣ ಗ್ರಾಮದಿಂದ ಪಕ್ಷಾತೀತವಾಗಿ ನೂರಕ್ಕೂ ಹೆಚ್ಚು ಗ್ರಾಮಸ್ಥರು ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು…
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹ ಬೊ ಹಳ್ಳಿಯಲ್ಲಿ ಅಧ್ಯಾಪಕಿಯರ ಕ್ರೀಡಾಕೂಟ
ಹಗರಿಬೊಮ್ಮನಹಳ್ಳಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಸರಕಾರಿ ಜ್ಯೂನಿಯರ್ ಕಾಲೇಜ್ ಕ್ರೀಡಾ ಮೈದಾನದಲ್ಲಿ ಮಹಿಳಾ ಶಿಕ್ಷಕರಿಗಾಗಿ ಗುರುವಾರ ಕ್ರೀಡಾಕೂಟ ಆಯೋಜಿಸಲಾಗಿತ್ತು. ತಾಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ಶರಣಮ್ಮ ಅವರು ಕ್ರೀಡಾಕೂಟ ಉದ್ಘಾಟಿಸಿದರು. ಗುಂಡು ಎಸೆತ, ಮ್ಯೂಸಿಕಲ್ ಚೇರ್, ಕ್ರಿಕೆಟ್ ಸೇರಿದಂತೆ…
ಹ.ಬೊ.ಹಳ್ಳಿ: ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟಿಸಿದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಂಪಾಪಟ್ಟಣ-ಉಪನಾಯಕನಹಳ್ಳಿ ಗ್ರಾಮಗಳ ಮಧ್ಯದಲ್ಲಿ ರೂ.19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಸೋಮವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಚಿವರು ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ…
