ಅನುದಿನ ಕವನ-೧೦೭೪, ಹಿರಿಯ ಕವಿ:ವೈ ಎಂ.ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ: ಕವಿತೆಯೊಡನೆ…

ಕವಿತೆಯೊಡನೆ… ಕವಿತೆಯೊಡನೆ ಸದಾ ನನ್ನದೂ ಕಾದಾಟ ನೀನು ಯಾವಾಗಲೂ ದಿನ ತುಂಬಿ ಬರುವದಿಲ್ಲವೆಂದು.. ಕವಿತೆಗೋ ನನ್ನೊಡನೆ ತಂಟೆ ನೀನು ಅನುಭವಿಸಿ ಹೆರುವುದೆ ಇಲ್ಲವೆಂದು ಹೀಗಾಗಿ ನನ್ನ ಕವಿತೆ ಕೌರವ ಗಣ ಕೆಲವು ಅರೆಬರೆ ಬೆಂದವು ಕೆಲವು ಅವಸರದಲಿ ಬಂದವು ಹೌದೇ ಕವಿತೆ…

ಅನುದಿನ ಕವನ-೧೦೭೩, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಅರವತ್ಮೂರು ಕವಿತೆ!, ರೇಖಾಚಿತ್ರ:ರಾಘವೇಂದ್ರ ನಾಯಕ್

ಅರವತ್ಮೂರು ಕವಿತೆ! ಕವಿ ಮತ್ತು ಕವಿತೆಯ ನಡುವೆ ಚೂರು ಪದ ಹೆಚ್ಚುಕಮ್ಮಿಯಾದವು ಮುನಿಸಿಕೊಂಡು ಮೂವತ್ತಾರಾದವು ಇರ್ವರೂ ವಿಪರಿತ ಸ್ವಾಭಿಮಾನಿಗಳು ಹಟದ ಅಖಾಡಕ್ಕೆ ಇಳಿದೇ ಬಿಟ್ಟವು ಬಗ್ಗಿ ಬದುಕುವುದು ಇಬ್ಬರಿಗೂ ಒಗ್ಗದು ಕವಿಯ ಬಗ್ಗಿಸಬೇಕೆಂದು ಕವಿತೆ ಬಗ್ಗದೇ ಒಗ್ಗಿಸಿಕೊಳ್ಳಬೇಕೆಂದು ಕವಿ ಇಬ್ಬರೂ ಒಬ್ಬರ…

ಬದುಕನ್ನು ಉನ್ನತೀಕರಿಸಿದ ಮಹಾಕವಿ ರತ್ನಾಕರವರ್ಣಿ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್

ಶ್ರವಣ ಬೆಳಗೊಳ, ಡಿ.9: ಅನುಭವ ಮತ್ತು ಅನುಭಾವ ಸಂಗಮವಾದ ಕನ್ನಡ ಸಾಹಿತ್ಯದಲ್ಲಿ ಸಾರ್ಥಕ ಬದುಕಿಗೆ ಪ್ರೇರೇಪಿಸುವ ನಿಜದಾರಿಗಳಿವೆ. ಯೋಗ ಮತ್ತು ಭೋಗ ಜೀವನವನ್ನು ಸಮನ್ವಯಗೊಳಿಸಿ ಬದುಕನ್ನು ಉನ್ನತೀಕರಿಸಿದ ಮಹಾಕವಿ ರತ್ನಾಕರವರ್ಣಿ ಎಂದು ಕುವೆಂಪು ವಿವಿ ಸಹಾಯಕ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು…

ಅಚ್ಚಳಿಯದ ಕಲೆಯನ್ನು ಬಿಟ್ಟುಹೋದ ಮೇರು ಕಲಾವಿದೆ ಲೀಲಮ್ಮ…! ನುಡಿ ನಮನ: ಡಿ ಎಸ್.ಚೌಗಲೆ, ಹಿರಿಯ ಸಾಹಿತಿ-ರಂಗಕರ್ಮಿ, ಬೆಳಗಾವಿ, ಚಿತ್ರಕೃಪೆ: ಬಣ್ಣ ಆರ್ಟ್ಸ್, ಬೆಂಗಳೂರು

ಎಪ್ಪತ್ತರ ದಶಕ. ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿಯ ಹಲವು ಚಿತ್ರಗಳು, ಅಂದಿನ ಅವರ ಅಭಿನಯದ ಜನಪ್ರಿಯ ಹಾಡುಗಳನ್ನು ರೇಡಿಯೋಗಳಲ್ಲಿ ಕೇಳಿ ಆನಂದಿಸುವ ಕಾಲ. ಆಗ ರೇಡಿಯೋ,ಕಂಪನಿ ನಾಟಕಗಳು,ಸಂಗ್ಯಾ ಬಾಳ್ಯಾ,ಶ್ರೀಕೃಷ್ಣ ಪಾರಿಜಾತ ಸಣ್ಣಾಟಗಳೇ ನಮ್ಮಂಥ ಹಳ್ಳಿಗರ ರಂಜನೆ,ಬೋಧನೆಯ ಭಾಗವಾದವುಗಳು.     …

ಅನುದಿನ ಕವನ-೧೦೭೨, ಕವಿಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ

ಅದೇಕೋ ಗೊತ್ತಿಲ್ಲ , ಬುದ್ದನ ಬಗ್ಗೆ ಒಂದು ಪ್ರಬುದ್ಧ ಪದ್ಯ ಬರೆಯಲು ನನಗಿನ್ನೂ ಆಗುತ್ತಿಲ್ಲ…! ಅವನಂತ ಭವ್ಯ ನಗು ಎಲ್ಲೂ ಕಂಡಿಲ್ಲ…! ಪ್ರತಿ ಭಾರಿ ಅವನನ್ನು ಬೆರಗಿನಿಂದ ನೋಡುವೆ ದ್ವಂದ್ವ ಲೆಕ್ಕಾಚಾರದಲ್ಲಿ ಅವನನ್ನು ಅಳೆಯುವೆ…! ಆದರೆ ಅವನದೋ…. ಸದಾ ಅದೇ ಮುಖಭಾವ…

ಅನುದಿನ ಕವನ-೧೦೭೧, ಹಿರಿಯ ಕವಿ: ಪ್ರಕಾಶ‌ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ನಕ್ಷತ್ರಗಳು

ನಕ್ಷತ್ರಗಳು ಹುಂಜದ ಕೂಗಿಗೆ ಮೈ ಮುರಿಯುತ್ತಾ ಏಳುತ್ತಿದ್ದೆವಾಗ ಆಜಾನ್ ಸದ್ದಿಗೆ ಎದ್ದು ಕುಳಿತುನೋಡಿದರೆ ಬಯಲಿನಲ್ಲಿ ಆಗಸ ಗೋಚರ ಕಣ್ಣಿಗೆ ಕಂಡಾಗ’ಬೆಳ್ಳಿ ಚುಕ್ಕಿ’ ನನ್ನಜ್ಜ ಹೇಳುತ್ತಿದ್ದ ಅದು’ಧೃವ ನಕ್ಷತ್ರ’ಎಂದು ಉಳಿದ ನಕ್ಷತ್ರಗಳ ಬಗ್ಗೆ ಕೇಳಿದಾಗ “ಸತ್ತವರೆಲ್ಲಾ ನಕ್ಷತ್ರಗಳಾಗುತ್ತಾರೆ” ಎನ್ನುತ್ತಿದ್ದರು ಬಾಲ್ಯದಲ್ಲಿ “ಅಮ್ಮನ ಸೀರೆ…

ಅನುದಿನ ಕವನ-೧೦೭೦, ಕವಿ:ಲಕ್ಷ್ಮಿಕಾಂತ ಮಿರಜಕರ, ಶಿಗ್ಗಾಂವ, ಕವನದ ಶೀರ್ಷಿಕೆ: ಮಹಾನಾಯಕ (ಗಜಲ್)

ಬಾಬಾ ಸಾಹೇಬರ ನೆನಪಿನೊಂದಿಗೆ……… ಮಹಾನಾಯಕ (ಗಜಲ್) ಶೋಷಿತರ ಬಾಳಿಗೆ ಬೆಳಕು ಬೀರಿದ ಸೂರ್ಯನೇ ಮಹಾನಾಯಕ. ಉರಿದ ಬದುಕಿಗೆ ತಂಪು ನೀಡಿದ ಚಂದ್ರನೇ ಮಹಾನಾಯಕ. ಜಾತಿಸಮುದ್ರಕ್ಕಿಳಿದು ಸಮತೆಯ ಮುತ್ತುರತ್ನ ತರಬಯಸಿದವನು ಏಕತೆಯ ಗ್ರಂಥಕ್ಕೆ ಜನ್ಮ ನೀಡಿದ ಲೇಖಕನೇ ಮಹಾನಾಯಕ. ಮಾತಿಲ್ಲದವರಿಗೆ ಮಾತಾಗಿ ದಿಕ್ಕಿಲ್ಲದವರಿಗೆ…

ಅನುದಿನ ಕವನ-೧೦೬೯, ಕವಿ:ಲೋಕೇಶ್ ಮನ್ವಿತಾ, ಬೆಂಗಳೂರು

ಕನಸುಗಳು ವಾಪಸು ನೆನಪಾಗುವುದಿಲ್ಲ ಎಚ್ಚರಗೊಂಡ ಮೇಲೆ ಎಚ್ಚತ್ತಗೊಂಡ ಮೇಲೆ ಎಂತಹುದೋ ಬಹು ಮುಖ್ಯದ್ದು ಜೊತೆ ಇಲ್ಲವಾಗುತ್ತದೆ ಜೊತೆ ಇಲ್ಲವಾದ ಮೇಲೂ ಜೊತೆಗಿದ್ದದ್ದುರ ಜೊತೆ ಹೆಜ್ಜೆಗಳು ಸಾವಾಗಿರುತ್ತವೆ ನಡೆಯುತ್ತ ನಡೆಯುತ್ತಾ ಬದುಕು ಅಲೆಯುತ್ತಿರುತ್ತದೆ ಉಸಿರಲ್ಲೀಗ ನಿರ್ಜೀವ ಭಾವಗಳು ಮತ್ತೇ ಮತ್ತೇ ಜೀವಂತಗೊಳಿಸಲು ಉಸಿರನೂದಿ…

ಬಳ್ಳಾರಿ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಬಸವಕಲ್ಯಾಣ, ಡಿ.5: ಪದವಿಪೂರ್ವ ಶಿಕ್ಷಣ ಇಲಾಖೆ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಲಬುರಗಿ ವಿಭಾಗ ಮಟ್ಟದ ವಿವಿಧ ಸಾಂಸ್ಕೃತಿಕ ಸ್ರರ್ದೆಗಳಲ್ಲಿ ಭಾಗವಹಿಸಿದ ಬಳ್ಳಾರಿ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಗರದ ಬಸವೇಶ್ವರ ಕಾಲೇಜಿನಲ್ಲಿ ಸೋಮವಾರ…

ಅನುದಿನ ಕವನ-೧೦೬೮, ಕವಿಯಿತ್ರಿ: ಭಾರತಿ ಹೆಗಡೆ, ಬೆಂಗಳೂರು

ನೀನು ನನ್ನ ನಗುವನ್ನು ಕಿತ್ತುಕೊಳ್ಳ ಬಯಸಿದೆ ಎಳೆಯ ಹೊರಟಿದ್ದೆ ನನ್ನ ತುಟಿಗಳ ಮೇಲೆ ನಿನ್ನದೇ ನೋವಿನ ಗೆರೆಯನ್ನು ಹಿಂಡಬೇಕೆಂದಿದ್ದೆ ನಿನ್ನ ಮುಷ್ಟಿಯಲ್ಲಿ ಹಿಡಿದು ನರಳಿಸಿ ನೇಯ ಬೇಕೆಂದಿದ್ದೆ ನನ್ನ ಬದುಕ ಕೌದಿಯನ್ನು ಎಲೆ ಮರುಳೇ.. ನನ್ನ ಖುಷಿ ಈ ಚೌಕಟ್ಟಿನಾಚೆಯದ್ದು ಹೊದ್ದಿರುವೆ…