ಅನುದಿನ‌ ಕವನ-೭೫೬, ಕವಿ: ಬಿ.ಎಂ.ಹನೀಫ್, ಬೆಂಗಳೂರು

ತೊಟ್ಟು ಕಳಚಿ ನೆಲಕ್ಕೆ ಬೀಳುವಾಗ ನೀವು ನೋಡಿದ್ದೀರಾ ಆ ಎಲೆಯನ್ನು? ಊಲಲಲಾ ಎಂದು ಗಾಳಿಯಲ್ಲಿ ನರ್ತಿಸುತ್ತಾ ಸಂತೋಷದಿಂದ ಭೂಮಿಯನ್ನು ಅಪ್ಪಿಕೊಳ್ಳುತ್ತದೆ! ಮಣ್ಣು ಮುದ್ದಿಸುತ್ತದೆ ಬಂದೆಯಾ ಮುದ್ದೂ ಬಾ ಕುಳಿತು ಕಳಿತು ಕಳೆಕಳೆಯಾಗಿ ಬೆರೆತು ಗೊಬ್ಬರವಾಗೋಣ ಮತ್ತೆ ಮರದ ಕಾಂಡದಲಿ ಏರಿ ಹೊಸ…

ಅನುದಿನ ಕವನ-೭೫೫, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಪದಬಂಧ

ಪದಬಂಧ ಯಾರೊ ಬರೆದಿಟ್ಟ ಪದ ಬಂಧದ ಚೌಕದಲಿ ಮೈ ಮರೆತು ಕಳೆದು ಹೋಗಿದ್ದೇನೆ ಹುಡುಕಿ ತಡುಕಿ ಹೊಂದಿಸಲಾಗದೆ ಈ ಗೊಂದಲ ಗೋಜಲು ಪದಗಳ ಯಾವ ಮೈ ಮರೆವಿನಲಿ ಕಳೆದುಹೋಯಿತು ಶಕುಂತಲೆಯ ಮೂರಕ್ಷರದ ‘ಉಂಗುರ’ ಬದುಕು ಮೂರಾಬಟ್ಟೆ ಮೀನ ಹೊಟ್ಟೆ ಬಗೆಯುವವರೆಗೆ ಈಗ…

ಅನುದಿನ‌ ಕವನ-೭೫೪, ಕವಯಿತ್ರಿ: ಧರಣೀಪ್ರಿಯೆ, ದಾವಣಗೆರೆ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳೊಂದಿಗೆ.. ಹೆಣ್ಣಿಲ್ಲದೆ ಜಗವಿಲ್ಲ ಅರಿಯಬೇಕು ಜನರೆಲ್ಲ ಹೆಣ್ಣಿವಳು ಸಂಸಾರದ ಕಣ್ಣರಿಯಿರಿ ಹೆಣ್ಣಿವಳು ಮನೆಲಕುಮಿ ಗೌರವಿಸಿ ಮಾನವರೆ ಹೊನ್ನಂತೆ ತವರೀಗೆ – ಧರಣಿದೇವಿ| ಮನೆಯೊಡತಿ ಮಹತಾಯಿ ಒಲವಿನಾ ಖನಿಯಿವಳು ಮನದೊಡತಿ ಪ್ರಿಯತಮಗೆ ಜೀವನದಲಿ ಅನುದಿನವು ಕಾಯಕದಿ ತೊಡಗುತಲಿ…

ಅನುದಿನ‌ ಕವನ-೭೫೩, ಕವಿ: ಬಿ.ಆರ್.ಕೆ (ಡಾ. ಬಿ ಆರ್ ಕೃಷ್ಣಕುಮಾರ), ಚಾಮರಾಜ ನಗರ, ಕವನದ ಶೀರ್ಷಿಕೆ: ಕಳೆದುಕೊಳ್ಳುವುದು

ಕಳೆದುಕೊಳ್ಳುವುದು ಕಳೆದುಕೊಂಡವರೆಲ್ಲ ಮತ್ತೆ ಸಿಗುವಂತಿದ್ದರೆ ನಿನ್ನನ್ನು ಕಳೆದುಕೊಂಡಾಗ ಜನರ ಕ್ರೂರ ಕಣ್ಣುಗಳೊಳಗೆ ನನ್ನನ್ನು ಕಳೆದುಕೊಳ್ಳುತ್ತಿರಲಿಲ್ಲ ಸವಿ ಸಾಂಗತ್ಯದಲ್ಲಿ ಕಳೆದುಕೊಳ್ಳುವುದು ಒಂದು ವ್ಯಸನ ಕಳೆದ ಸಲ ನೀ ಸಿಕ್ಕ ಜಾಗ ಸದ್ದಿಲ್ಲದೆ ನಿನ್ನ ಇರುವಿಕೆಯ ಹಂಗಿಸಿದೆ. ನನ್ನತನ ಕಳೆದುಕೊಂಡು ನಿನ್ನೆಡೆಗೆ ನಡೆದ ಪಾದಯುಗ್ಮಗಳು…

ಅನುದಿನ ಕವನ-೭೫೨, ಕವಿ:ಮಧುಸೂಧನ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ: ನನ್ನ ಡೈರಿ ಕಾಣೆಯಾಗಿದೆ

ನನ್ನ ಡೈರಿ ಕಾಣೆಯಾಗಿದೆ ‘ನನಗೆ ಮರೆವಿನ ಗುಣ ಬಹಳವಿದೆ’ ಇದು ಅವರಿವರು ಕೊಟ್ಟ ಹೇಳಿಕೆಯಲ್ಲ ನನ್ನದೇ ಅನುಭವಜನ್ಯ .. ಎಲ್ಲೋ ಇಟ್ಟು ಮತ್ತೆಲ್ಲೋ ಹುಡುಕುವುದು ನಿತ್ಯದ ಕಥನ ಕೆಲವೊಮ್ಮೆ ಬೈಗುಳ ತಿಂದಿದ್ದೂ ಮರೆತಿರುತ್ತೇನೆ ಹಲಬಾರಿ ಮರೆವೂ ವರವಾಗಿದೆ. ಮರೆಯಬಾರದ್ದನ್ನು ಗುರುತಿಟ್ಟುಕೊಳ್ಳಲು ಸಾವಿರ…

ಅನುದಿನ ಕವನ-೭೫೧, ಕವಯಿತ್ರಿ:ಮಾನಸಗಂಗೆ, ತಿಪಟೂರು

ನೀನೇಕೆ ಇಷ್ಟೋಂದು ಒರಟು..? . ನನಗೆ ಪೆಟ್ಟು ಕೊಟ್ಟವರ ಕೈಯಲ್ಲಿ ಹೂ ಇರಲಿಲ್ಲ ಅದಕ್ಕೆ.. ** ನೀನೇಕೆ ಇಷ್ಟೋಂದು ವಾಚಾಳಿ..? . ನನ್ನಲ್ಲಿರುವ ಮೌನ ನನ್ನನ್ನೇ ಕೊಲ್ಲುವ ಹಂತಕಿ ಹಾಗಾಗಿ.. ** ನೀನು ಯಾರನ್ನು ನಂಬುತ್ತೀಯಾ..? . ಸತ್ತವರನ್ನು…..! -ಮಾನಸ ಗಂಗೆ,…

ಅನುದಿನ ಕವನ-೭೫೦, ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ:ಮನುಜಮತ ವಿಶ್ವಪಥ

ಮನುಜಮತ ವಿಶ್ವಪಥ ಜೀವವು ಒಂದೇ , ಜೀವನ ಒಂದೇ ಮೂಲಭೂತ ಆಸೆ ಆಕಾಂಕ್ಷೆಗಳು ಮಾನವ ಕುಲಕೋಟಿಗೂ ಒಂದೇ . ಭೂಮಿ ಆಗಸವು ಒಂದೇ ನೇಸರ ಚಂದಿರರ ಬೆಳಕೊಂದೇ ಸೃಷ್ಟಿ ತಾರೆ ಪಂಚಭೂತಗಳು ಜೀವ ಸಂಕುಲಗಳಿಗೆ ಒಂದೇ. ಜನನ ಪ್ರಕ್ರಿಯೆಯು ಒಂದೇ ಮರಣ…

ಅನುದಿನ ಕವನ-೭೪೯, ಹಿರಿಯ ಕವಿ:ಮಹಿಮ, ರಾಯಚೂರು, ಕವನದ ಶೀರ್ಷಿಕೆ: ನಾನು ನಂಬುತ್ತೇನೆ…

ನಾನು ನಂಬುತ್ತೇನೆ ನೀವು ಮೋಸ ಮಾಡಿದರೂ ಸಹ ನಾನು ನಂಬುತ್ತೇನೆ ನೀವು ವಿಷ ಇಟ್ಟಿದ್ದರೂ ಇಟ್ಟರೂ ಸಹ ನಾನು ನಂಬುತ್ತೇನೆ ನಮ್ಮವರೆಂದು, ನೀವು ಬೆನ್ನಿಗೆ ಚೂರಿ ಹಾಕಿದ್ದು ಗೊತ್ತಾದರೂ ಸಹ ನಾನು ಮತ್ತೆ ಮತ್ತೆ ನಂಬುತ್ತೇನೆ ನಿಮ್ಮ ಮಾತುಗಳು ಕೃತಕವೆಂದು ಗೊತ್ತಾದರೂ…

ಅನುದಿನ ಕವನ-೭೪೮, ಹಿರಿಯ ಕವಿ: ಎಂ. ಎಸ್.‌ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಕವಿತೆಯ ಮೊದಲ ಸಾಲು….

ಕವಿತೆಯ ಮೊದಲ ಸಾಲು… ನೋಟ್-ಪ್ಯಾಡ್ ತೆರೆದಿಟ್ಟು- ಕಾಯುತ್ತ ಕುಳಿತೆ ಇಡೀ ಎರಡು ಹಗಲು ಒಂದು ಇರುಳು, ಮನಸ್ಸು ಖಾಲಿಖಾಲಿ. ಒಂದೇ ಒಂದು ಪದ ಒಡಮೂಡಲಿಲ್ಲ ಅವಳ ಉದ್ದನೆಯ ಕಪ್ಪುಕೂದಲ ನೆರಳು ಇರುಳಾಗಿ ಕಾಡುತ್ತಿತ್ತು. ಕೃತಕ ಬೆಳಕಿನಬ್ಬರಕ್ಕೆ ಆಗಸದಲ್ಲಿ ಮಿನುಗುವ ನಕ್ಷತ್ರ ಕಾಣಲಿಲ್ಲ,…

ಅನುದಿನ ಕವನ-೭೪೭, ಕವಯಿತ್ರಿ: ಮಧುರ ವೀಣಾ, ಬೆಂಗಳೂರು

ಶಸ್ತ್ರಚಿಕಿತ್ಸೆಗಿಂತಲೂ ಮುಂಚೆ ಸಾಯಿಸಿಹೆನು ಸಧ್ಯ ಸತ್ತ ತೊಗಲನು ಕುಯ್ದರೇನು ಹೊಲಿದರೇನು ಚುಚ್ಚಿದರೇನು, ರಕ್ತ ಹೀರಿದರೇನು ಬಿಸಿ ರಕ್ತ ಅಭಿದಮನಿಗಳಲ್ಲಿ ಓಡಿ ಹರಿಯುತ್ತಿತ್ತೆಂದರೆ ಎದೆಯು ಉದ್ವೇಗದಿಂದ ಲಬ್-ಡಬ್ ಬಡಿಯುತ್ತಿತ್ತೆಂದರೆ ಕದಪುಗಳು ರೋಮಾಂಚನದಿಂದ ಕೆಂಪಾಗುತ್ತಿದ್ದವೆಂದರೆ ನಂಬಲಾಗುವುದಿಲ್ಲ ಯಾರಿಗೂ …. ಲಲಾಟ ಬೆವರಿನಿಂದ ತೊಯ್ದು ತೊಪ್ಪೆಯಾಗುತ್ತಿತ್ತೆಂದರೆ…