ಕನಕ ಬವಬಂಧನವ ತೊರೆದು ನೀ ತೋರಿದ ದಾರಿಯಲಿ ನನ್ನನ್ನು ನಡೆಸು ಕನಕ. ಮದಮತ್ಸರವ ಕುದಿಸಿ ನೀ ಭಕ್ತಿಯ ಪಾಯಸವ ಉಣಿಸು ಕನಕ. ಕುಲದ ಹಂಗಿನ ಹಗ್ಗವನು ಭಕ್ತಿಯ ರಾಟಿಯಲಿ ನೇಯ್ದವರು ನೀವು. ಕುಲ ಕುಲವೆಂದು ಹೊಡೆದಾಡುವವರಿಗೆ ಕುಲದ ಮೂಲವನು ಮತ್ತೆ ತೋರಿಸು…
Category: ರಾಜ್ಯ
ಅನುದಿನ ಕವಿತೆ-೩೨೩ ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಮಳೆ-ಮಳೆ ನಾಲ್ಕು ಹನಿಗಳು..
ಮಳೆ-ಮಳೆ ನಾಲ್ಕು ಹನಿಗಳು.. 1 ಪರಿಣಾಮ..! ಮೇಘಗಳ ಮುಗಿಯದ ಪ್ರಣಯ ಇಳೆಯಲಿ ಅಕ್ಷರಶಃ ಜಲಪ್ರಳಯ.! 2 ಆಕ್ರಮಣ..! ವರುಣ ಬಾನಗಲ ಬುವಿಯಗಲ ಹಬ್ಬಿದ್ದಾನೆ ಧರಣಿಯನು ತಬ್ಬಿದ್ದಾನೆ ಅಂಬರದಿಂದ ಅರುಣನನ್ನೇ ಹೊರ ದಬ್ಬಿದ್ದಾನೆ.! 3 ಕೋಡಿ..! ಅಕಾಲಿಕ ಮಳೆಯಿಂದ ಕೆರೆ ಕಟ್ಟೆಗಳಲಷ್ಟೇ ಅಲ್ಲ..…
ಅನುದಿನ ಕವನ:೩೨೨, ಕವಯತ್ರಿ:ಡಾ.ಕೆ.ಎನ್ ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ: ಬೆಳದಿಂಗಳಾದವಳು….
ಬೆಳದಿಂಗಳಾದವಳು…. ಮೋಡ ಕರಗಿ ಎಡಬಿಡದೆ ಸುರಿವ ಮಳೆ ಮೈಕೊರೆವ ತಣ್ಣನೆಯ ಚಳಿಯ ಕಾರ್ತೀಕದ ಹುಣ್ಣಿಮೆಯ ಕಾರ್ಗತ್ತಲಲ್ಲೂ ಅವನ ನೆನಪಿನಪ್ಪುಗೆಯಲ್ಲಿ ಒರಗಿ ಕರಗಿ ಬೆಚ್ಚಗಾದವಳು…. ಬೀಸುವ ಥಂಡಿಗಾಳಿಗೆ ಹೊಸ್ತಿಲದೀಪ ಆರದಂತೆ ಅಂಗೈಲಿಡಿದು ಕಾಯುತ್ತಾ ಕತ್ತಲಲ್ಲೂ ಕಣ್ಣನೆಟ್ಟು , ಎದೆಯೊಳಗೆ ಬಣ್ಣಬಣ್ಣದ ಕಿಡಿಯ ಮತಾಪು…
ಅನುದಿನ ಕವನ-೩೨೧, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ: ಅರಿವಿನ ದೀಪ ಹಚ್ಚು
ಅರಿವಿನ ದೀಪ ಹಚ್ಚು ಅರಿವಿನ ದೀಪ ಹಚ್ಚಬೇಕು ಮರುಳ ಬದುಕಾಗುವುದು ಬೆಣ್ಣೆ ತಿಂದಷ್ಟು ಸರಳ ಬದುಕಿಗೆ ಕಷ್ಟಗಳು ಬರುವವು ಬಲು ವಿರಳ. ತೋರಬೇಡ ಒಂದು ಬೆರಳ ಕತ್ತರಿಸಬೇಡ ಸಂಬಂಧದ ಕರುಳ ನಮ್ಮ ಬೆನ್ನೇ ಕಾಣುವುದಿಲ್ಲ ಮರುಳ. ಕೊರಗಬೇಡ ಚಿಂತೆಯಲ್ಲಿ ನರಳಿ ಹೋದ…
ಅನುದಿನ ಕವನ-೩೨೦, ಕವಿ:ನಾಗೇಶ ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ••••••• ಹಾವಿಗೆ ಹಾಲೆರೆದೆ ವಿಷ ಕಕ್ಕಿತು ಗುಳ್ಳೆನರಿಯ ಸಂಗ ಮಾಡಿದೆ ಬೆನ್ನಿಗಿರಿಯಿತು ಎಷ್ಟು ಪ್ರೀತಿ ಕೊಟ್ಟರೂ ದ್ವೇಷ ಹಂಚುವರಿಲ್ಲಿ ನೋವುಗಳನ್ನು ನೇವರಿಸಿದೆ ಮುಳ್ಳು ತಾಕಿತು ಭರವಸೆಗಳನ್ನೇ ಮುರಿದು ಕೇಕೆ ಹಾಕುವರಿಲ್ಲಿ ಹೆಗಲಿಗೆ ಹೆಗಲು ನೀಡಿದೆ ವಿಷಾದ ಎದೆಗಿಳಿಯಿತು ಕಣ್ಣಂಚಿನ ಹನಿಗಳು…
ಅನುದಿನ ಕವನ-೩೧೯, ಕವಿ: ವೈ ಜಿ ಅಶೋಕ್ ಕುಮಾರ್, ಬೆಂಗಳೂರು, ಕವನದ ಶೀರ್ಷಿಕೆ: ಕಥೆಗಳು
ಕಥೆಗಳು ಕಥೆಗಳು ಹಿಂತಿರುಗಿ ಹೊರಟಿವೆ ಪರಿಚಯದ ಹಾದಿಯಲಿ ಬಿರು ಬಿಸಿಲನ್ನೂ ಲೆಕ್ಕಿಸದೇ ತಾನೇ ಕಟ್ಟಿದ ಮಹಲುಗಳ ಮೂಲೆಯಲ್ಲಿ ವಿಳಾಸವೇ ಇಲ್ಲದ ಕೇರಿಗಳಲ್ಲಿ ಉಸಿರಾಡಿದ ಕಥೆಗಳು ತಮ್ಮ ನೆಲೆಯತ್ತ ತೆರಳುತ್ತಿವೆ ಮುಚ್ಚಿದ ಶಾಯಿಯ ಕಾರ್ಖಾನೆಯ ಹೆಬ್ಬಾಗಿಲಿನಿಂದ ಖಾಲಿ ಪುಟಗಳು ಮೈ ಕೊಡವಿ ಹೊರಟಿವೆ…
ಕಸಾಪದಲ್ಲಿ ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ ತಮ್ಮ ಗುರಿ -ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ರಾಜಶೇಖರ ಮುಲಾಲಿ
ಬಳ್ಳಾರಿ, ನ.17: ಕಸಾಪ ರಾಜ್ಯಾಧ್ಯಕ್ಷರಾಗಿ ತಾವು ಆಯ್ಕೆಯಾದರೆ ಪರಿಷತ್ತಿನ ವಾಹನ ಮತ್ತು ವೇತನ ಪಡೆಯದೆ ಉಚಿತವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಅಣ್ಣಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಅವರು ಹೇಳಿದರು. ಅವರು…
ಅನುದಿನಕವನ-೩೧೮, ಕವಿ:ಡಾ.ಸದಾಶಿವ ದೊಡ್ಡಮನಿ, ಇಳಕಲ್, ಕವನದ ಶೀರ್ಷಿಕೆ: ಮತ್ತೇ ಹೋಗುವುದಾದರೆ…
ಮತ್ತೇ ಹೋಗುವುದಾದರೆ….. ಮತ್ತೇ ಹೋಗುವುದಾದರೆ ಹೇಳಿ ಹೋಗು ಎದೆಯ ಗಾಯಗಳೆಲ್ಲ ಮಾಯಲಿ ಒಮ್ಮೆ ನಕ್ಕು ಹೋಗು ಹೋಳು ಹೋಳಾದ ಮನಸು ಹೋರಾಡುತ್ತಲೇ ಇದೆ ಒಳ ಹೊರಗು ಇರುವುದು ಒಂದೇ ಜನುಮ ತುಸು ನೋವು ಮರೆಸು ಕಾರಣಗಳು ಏನೇ ಇರಲಿ ಕೊಲ್ಲದಿರು ಕನಸು…
ಅನುದಿನ ಕವನ-೩೧೭, ಕವಿ: ಬಾವಾಖಾನ ಎಂ.ಡಿ. ಸುತಗಟ್ಟಿ, ಬೆಳವಡಿ, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ಕನಸು ಕಾಣುತ ಕನ್ಯೆಯ ಕೆನ್ನೆ ಕೆಂಪಾಗಲು ಚಿತ್ತ ಎತ್ತಲೋ ಸಾಗುತಿದೆ|| ಅಧರಗಳು ಮಧುರ ಗಳಿಗೆಗೆ ಕಾಯುತಿರಲು ಚಿತ್ತ ಎತ್ತಲೋ ಸಾಗುತಿದೆ|| ಮನದ ಬಯಕೆಗಳು ಮನಭಾರವಾಗುತಿವೆ| ಮನಸ್ಸುಗಳು ಹೊಸೆಯದೆ ಕನಸುಗಳು ಕರಗಲು ಚಿತ್ತ ಎತ್ತಲೋ ಸಾಗುತಿದೆ|| ಕವಲು ದಾರಿಗಳು ಕಲಹದ ಕುಲುಮೆಯಾಗುತಿವೆ|…
ಅನುದಿನ ಕವನ-೩೧೬, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು
ಹಾಯ್ಕುಗಳು ೧ ಸಂಶಯ ಕಿಡಿ ಬೆಂಕಿ ಆಗುವ ಮುನ್ನ ಆರಿಸಿ ಬಿಡು ೨ ಚಳಿಗೆ ಅಂಜಿ ಸೂರ್ಯ; ಹೊದ್ದು ಮಲಗಿ ನಿಧಾನ ಎದ್ದ ೩ ಉಕ್ಕಿ ನಕ್ಕಿತು ಶರಧಿ; ದಡಕೆಲ್ಲ ಮುತ್ತನಿಕ್ಕುತ ೪ ‘ಅಂದ’ ‘ಕೆಡಿಸು ಶಕ್ತಿ’ ಬಿಂದು ಮಸಿಗೆ ಬಳಸು…
