ಅನುದಿನ ಕವನ-೩೧೬, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು

೧
ಸಂಶಯ ಕಿಡಿ
ಬೆಂಕಿ ಆಗುವ ಮುನ್ನ
ಆರಿಸಿ ಬಿಡು

೨
ಚಳಿಗೆ ಅಂಜಿ
ಸೂರ್ಯ; ಹೊದ್ದು ಮಲಗಿ
ನಿಧಾನ ಎದ್ದ

೩
ಉಕ್ಕಿ ನಕ್ಕಿತು
ಶರಧಿ; ದಡಕೆಲ್ಲ
ಮುತ್ತನಿಕ್ಕುತ

೪
‘ಅಂದ’ ‘ಕೆಡಿಸು
ಶಕ್ತಿ’ ಬಿಂದು ಮಸಿಗೆ
ಬಳಸು ಚಂದ

೫
ಹೇಸಿ ಮನುಜ;
ಮುಖ ಮುಚ್ಚಿಕೊಂಡಿತು
ನಾಚಿಕೆಗಿಡ

೬
ಭ್ರಮೆಯ ಸುತ್ತ
ಸುಳಿವ ಮನ; ಭ್ರಾಂತ
ಲೋಕದಿ ಬಿತ್ತು

೭
ಚಂಚಲ ಮಾಡೂ
ನಿನ್ನ ಯೌವನಕ್ಕಷ್ಟು
ಚೌಕಟ್ಟು ಹಾಕು

೮
ಬಣ್ಣದ ಮಾತ
ಮುಖ ಕರ್ರಗೆ; ಸತ್ಯ
ಗೊತ್ತಾದ ಮೇಲೆ

೯
ಶಿಲಾಬಾಲಿಕೆ
ಅಂದ ಚೆಂದಕೆ; ಕಲ್ಲೂ
ಕರಗಿ ಹೋಯ್ತು

೧೦
ಸಾವ ಸಾಲಲೂ
ಸರದಿ ಉಂಟು; ಸ್ಪರ್ಧೆ
ತುಂಬ ನೀರಸ

– ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ
*****

Leave a Reply

Your email address will not be published. Required fields are marked *