ಜೈನ ತೀರ್ಥಂಕರ ಪಾರ್ಶ್ವನಾಥರ ದೇವಸ್ಥಾನ ಶತಮಾನೋತ್ಸವ ಸಮಾರಂಭದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಭಾಗಿ

ಬಳ್ಳಾರಿ, ಜೂ.3: ನಗರದ ತೇರು ಬೀದಿಯ ಜೈನ ತೀರ್ಥಂಕರ ಪಾರ್ಶ್ವನಾಥರ ದೇವಸ್ಥಾನದ ಶತಮಾನೋತ್ಸವ ಸಮಾರಂಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭಾಗಿಯಾದರು.

ಮಂಗಳವಾರ ಜರುಗಿದ ಕಾರ್ಯಕ್ರಮದ ಸಾನಿಧ್ಯವನ್ನು  ಶ್ರೀ ವಿಮಲಸಾಗರ ಸುರೀಶ್ವರ್’ಜೀ ಮಹಾರಾಜ್ ಅವರು ವಹಿಸಿದ್ದರು.                                          ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ನಾರಾ ಭರತ್ ರೆಡ್ಡಿಯವರ ಅಭಿವೃದ್ಧಿ ಕೆಲಸಗಳನ್ನು ಶ್ರೀ ವಿಮಲಸಾಗರ ಸುರೀಶ್ವರ್’ಜೀ ಮಹಾರಾಜ್ ಅವರು ಶ್ಲಾಘಿಸಿದರು. ಭಗವಾನ್ ಮಹಾವೀರರ ಕೃಪೆ ನಿಮ್ಮನ್ನು ಕಾಪಾಡಲಿ ಎಂದು ಆಶೀರ್ವದಿಸಿದರು.

ಶಾಸಕ ರೆಡ್ಡಿ ಅವರನ್ನು ಜೈನ್ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಪಾರ್ಶ್ವನಾಥ ಜೈನ್ ಶ್ವೇತಾಂಬರ್ ಸಂಘದ ಪ್ರಮುಖರಾದ ಉತ್ಸವಲಾಲ್ ಬಾಗ್ರೇಚಾ, ವಿನೋದ್ ಬಾಗ್ರೇಚಾ, ರೋಶನ್’ಲಾಲ್, ಭರತ್, ಮಹಾವೀರ್, ಹರ್ಷ್ ಜೈನ್ ಹಾಗೂ ಅಜಯ್ ಸೋನಿ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *