ಬಳ್ಳಾರಿ: ನಗರದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಜೂ.13: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಶುಕ್ರವಾರ ನಗರದ ಹಾವಂಭಾವಿ ಪ್ರದೇಶದ ಹಲವು ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ವಾರ್ಡ್ ಸಂಖ್ಯೆ 36ರ ಹಾವಂಭಾವಿಯ ಗೋವಿಂದಯ್ಯರ ಮನೆಯಿಂದ ರಾಮನಗರ 3ನೇ ಅಡ್ಡ ರಸ್ತೆಯವರೆಗೆ ಅಂದಾಜು 71.75 ಲಕ್ಷ ರೂ.ಗಳ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಅದೇ ರೀತಿ ಹಾವಂಭಾವಿಯ ತಿಪ್ಪಯ್ಯನವರ ಮನೆಯಿಂದ ವೆಂಕಟರಾವ್ ಅವರ ಮನೆಯವರೆಗೆ, ಹನುಮಯ್ಯ ಅವರ ಮನೆಯಿಂದ ಮುಖ್ಯ ರಸ್ತೆವರೆಗೆ, ರಮೇಶ್ ಅವರ ಮನೆಯಿಂದ ಓಬಣ್ಣ ಮನೆವರೆಗೆ, ಮಾರೆಣ್ಣ ಮನೆಯಿಂದ ಆಂಟಿ ಹೊಟೇಲ್’ವರೆಗೆ ಅಂದಾಜು 1 ಕೋಟಿ 72 ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಅದೇ ರೀತಿ ಕೆಕೆಆರ್’ಡಿಬಿ ಅನುದಾನದ ಅಡಿ ಅಂದಾಜು 3ಕೋಟಿ 29 ಲಕ್ಷ ರೂ.ಗಳ ವೆಚ್ಚದಲ್ಲಿ 2ನೇ ಅಡ್ಡ ರಸ್ತೆ ಮತ್ತು 3ನೇ ಅಡ್ಡ ರಸ್ತೆ ಸಂಪರ್ಕಿಸುವ ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ಮಹಾನಗರ ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ವಾರ್ಡಿನ ಮುಖಂಡರಾದ ಲೋಕೇಶ್, ಭತ್ರಿ ವಾಸು, ಮಂಗಲ ರಾಮಾಂಜನೇಯ, ಯಶೋಧಾ ಮತ್ತು ಹಗರಿ ಗೋವಿಂದ, ಹೊನ್ನಪ್ಪ, ಬಿಆರೆಲ್ ಸೀನಾ, ಭಾಸ್ಕರ್ ರಾವ್, ಉಮಾಮಹೇಶ್ವರ್ ರಾವ್, ಚಂದ್ರಶೇಖರ, ಚಿರಂಜೀವಿ, ರಾವಿ ರಮೇಶ್, ಸುಬ್ಬಾರಾವ್, ಜಾನಕಿರಾವ್, ಗಂಗಾಧರ್, ಪಿಚ್ಚೇಶ್ವರರಾವ್, ವಿಜಯಲಕ್ಷ್ಮೀ ಸೇರಿದಂತೆ ಹಲವು ಜನ ಹಾಜರಿದ್ದರು.

Leave a Reply

Your email address will not be published. Required fields are marked *