ನಾಳೆ(ಜ.6) ಬಳ್ಳಾರಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.‌ಕೆ ಶಿವಕುಮಾರ್

ಬಳ್ಳಾರಿ, ಜ.5: ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ (ಜ.6) ಬಳ್ಳಾರಿಗೆ ಆಗಮಿಸುವರು ಎಂದು ಡಿಸಿಸಿ ನಗರ ಘಟಕದ ಅಧ್ಯಕ್ಷ ಅಲ್ಲಂ ಪ್ರಶಾಂತ್ ತಿಳಿಸಿದ್ದಾರೆ.
ಜ.1 ರಂದು ನಗರದಲ್ಲಿ ಸಂಭವಿಸಿದ ಗುಂಪು ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ನಗರ ಹಾಗೂ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರೊಂದಿಗೆ ಡಿಸಿಎಂ ಶಿವಕುಮಾರ್ ಅವರು ಚರ್ಚಿಸುವರು.
ಬಳಿಕ ಮಧ್ಯಾಹ್ನ 01.30 ಗಂಟೆಗೆ ನಗರದ  ಖಾಸಗಿ ಹೋಟೆಲ್ ನಲ್ಲಿ ಡಿಸಿಸಿ ಆಯೋಜಿಸಿರುವ
ಪತ್ರಿಕಾಗೋಷ್ಠಿಯಲ್ಲಿ‌ ಡಿಕೆಶಿ ಅವರ ಭಾಗವಹಿಸಿ ಮಾತನಾಡುವರು.
ಸಭೆಯಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ನಾಸಿರ್ ಹುಸೇನ್ ಅವರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್, ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ, ಲೋಕಸಭೆ ಸದಸ್ಯ ಈ.ತುಕಾರಾಂ, ಮಾಜಿ ಸಚಿವರು ಹಾಗೂ ಗ್ರಾಮಾಂತರ ಶಾಸಕರಾದ ಬಿ. ನಾಗೇಂದ್ರ, ನಗರ ಶಾಸಕರಾದ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕರಾದ ಜೆ.ಎನ್. ಗಣೇಶ್, ಸಿರುಗುಪ್ಪ ಶಾಸಕರಾದ ಬಿ.ಎಂ. ನಾಗರಾಜ್, ಹಾಗೂ ಸಂಡೂರು ಶಾಸಕಿ ಅನ್ನಪೂರ್ಣಾ ಈ. ತುಕಾರಾಮ್ ಅವರು ಮತ್ತು ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು‌ ಪ್ರಶಾಂತ್ ಅವರು ಮಾಹಿತಿ‌ ನೀಡಿದ್ದಾರೆ.