Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಭಾರತ ಕಂಡ ಅನರ್ಘ್ಯ ರತ್ನ -ವಿಚಾರವಾದಿ ಹೆಚ್ ಆದಿನಾರಾಯಣರೆಡ್ಡಿ - Karnataka Kahale

ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಭಾರತ ಕಂಡ ಅನರ್ಘ್ಯ ರತ್ನ -ವಿಚಾರವಾದಿ ಹೆಚ್ ಆದಿನಾರಾಯಣರೆಡ್ಡಿ

ಬಳ್ಳಾರಿ, ಜ.೧೪: ಶ್ರೀನಿವಾಸ ರಾಮಾನುಜನ್ ಎಂಬ ಗಣಿತಜ್ಞ ಭಾರತ ಕಂಡ ಅನರ್ಘ್ಯ ರತ್ನ ಎಂದು ಅವರ ಸಾಧನೆಗಳ ಪಟ್ಟಿಗಳೊಂದಿಗೆ ಗಡಿಭಾಗದ ಕನ್ನಡಾಂಧ್ರದ ವಿಚಾರವಾದಿ ಹೆಚ್ ಆದಿನಾರಾಯಣರೆಡ್ಡಿ ಅವರು ಪ್ರತಿಪಾದಿಸಿದರು.
ನಗರದ ಬಾಲಕಿಯರ ಸರ್ಕಾರಿ ಪ ಪೂ ಕಾಲೇಜಿನಲ್ಲಿ ಶ್ರೀನಿವಾಸ ರಾಮಾನುಜನ್ ಮ್ಯಾಥ್ಸ್ ಅಕಾಡೆಮಿ ಏರ್ಪಡಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಮಾನುಜನ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಗಣಿತದಲ್ಲಿ ಆಸಕ್ತಿಯನ್ನು ಹೊಂದಿದ್ದರು ಅದಕ್ಕಾಗಿ ಮುಂದೆ ಅವರು ವಿಶ್ವದಲ್ಲೇ ಸಂಚಲನ ಸೃಷ್ಟಿಸುವಂತಹ ಸಂಶೋಧನೆಗಳನ್ನು ಗಣಿತ ಲೋಕಕ್ಕೆ ನೀಡಿದರು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಸರಳಾ ದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಮಂಜುನಾಥ ಅವರು, ಯೋಚನೆ ಮಾಡುವವರು ಹೆಚ್ಚು ಗಣಿತ ಕಲಿಯ ಬಲ್ಲರು ಮತ್ತೂ ಹೆಚ್ಚು ಗಣಿತ ಕಲಿತರೆ ಹೆಚ್ಚು ಯೋಚನೆ ಮಾಡುವ ಸಾಮರ್ಥ್ಯ ಬರುತ್ತದೆ ಎಂದರು.ಯೋಚನೆ ಮಾಡುವ ಸಾಮರ್ಥ್ಯ ಹೆಚ್ಚು ಮಾಡುವುದೇ ಶಿಕ್ಷಣದ ಗುರಿ, ಅದರೊಂದಿಗೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಶಕ್ತಿ ಬೆಳೆಸಿಕೊಳ್ಳುವಲ್ಲಿ ಗಣಿತ ಅಗಾಧವಾದ ಕೆಲಸ ಮಾಡಬಲ್ಲದು ಎಂದು ತಿಳಿಸಿದರು.
ರಾಮಾನುಜನ್ ತಾವು ಬದುಕಿದ ೩೨ ವರ್ಷಗಳ ಅವಧಿಯಲ್ಲಿ ೩೦೦೦ ಪ್ರಮೇಯಗಳನ್ನು ಸಂಶೋಧಿಸಿದರು, ಪೇಪರ್ ಖರೀದಿಸಲು ದುಡ್ಡಿಲ್ಲದೆ ಹಲಗೆ-ಬಳಪ ಬಳಸಿ ಬರೆದು ಕೇವಲ ಪ್ರಮೇಯದ ಹೇಳಿಕೆಗಳನ್ನು ಬರೆದಿಟ್ಟನು.ಈತನು ಧಾಖಲಿಸಿದ ಇಂತಹ ನೋಟ್‌ಗಳು ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದವು.ಅವರ ಅಂದಿನ ಸಂಶೋಧನೆಗಳು ಇಂದು ಆಧುನಿಕ ಭೌತಶಾಸ್ತ್ರ ದಲ್ಲಿ ಬಳೆಕೆಯಾಗುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಗಣಿತ ವಿಷಯ ಪರಿವೀಕ್ಷಕ ಎಂ.ಬಸವರಾಜ್ ಅವರು ಮಾತನಾಡಿ ವಿದ್ಯಾರ್ಥಿಗಳು ಈಗಿಂದಲೇ ಗಣಿತದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಭ್ಯಾಸ ಮಾಡುತ್ತಾ ಹೋದರೆ ಮುಂದೆ ಅದು ಸುಲಭವಾಗುತ್ತದೆ ಮಾತ್ರವಲ್ಲ ಹೊಸ ಸಂಶೋಧನೆಗಳು ನೀವೂ ಮಾಡಲು ಸಾಧ್ಯ ಎಂದರು.
ಅದ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಸುಲೇಖ ಬಿ ಇವರು ಮಾತನಾಡಿ ಗಣಿತ ಎಲ್ಲಾ ಅಧ್ಯಯನ ವಿಷಯಗಳಿಗೆ ಅಗತ್ಯವಾಗಿ ಬೇಕಿದೆ.ಗಣಿತ ಎಲ್ಲ ಕ್ಷೇತ್ರಗಳ ವಿಚಾರಗಳು ವೈಜ್ಞಾನಿಕ ರೂಪ ಪಡೆಯಲು ಸಹಕಾರಿಯಾಗಿದೆ ಎಂದರು.
ಉಪಪ್ರಾಚಾರ್ಯರಾದ ಜಾಯ್ ಡಬೋರ್ , ಗಣಿತ ಉಪನ್ಯಾಸಕ ಅಮರೇಶ್ ಸಜ್ಜನ್ ಉಪಸ್ತಿತರಿದ್ದರು.
ಡಾ. ಯು ಶ್ರೀನಿವಾಸ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಶಿಕ್ಷಕ ದಯಾನಂದ್ ಸ್ವಾಗತಿಸಿದರು, ಲಕ್ಷ್ಮೀ ಪಾಟೀಲ್ ವಂದಿಸಿದರು ಉಪನ್ಯಾಸಕ ಚಾಂದ್ ಪಾಷಾ ನಿರೂಪಿಸಿದರು.
*****